ಲೋಕದರ್ಶನ ವರದಿ
ಶಿಗ್ಗಾವಿ 05: ಗ್ರಾಮೀಣ ಭಾಗದ ವಿದ್ಯಾಥರ್ಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಎಂಟು ಕೋಟಿ ರೂ ವೆಚ್ಚದಲ್ಲಿ ಈ ಡಿಪ್ಲೋಮಾ ಪಾಲಿಟೆಕ್ನಿಕ್ ಕಾಲೇಜನ್ನು ತೆರೆಯಲಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಗುಡ್ಡದಚನ್ನಾಪುರದ ಚನ್ನಕೇಶವ ಸಕರ್ಾರಿ ಪಾಲಿಟೆಕ್ನಿಕ್ ವಿದ್ಯಾಥರ್ಿ/ವಿದ್ಯಾಥರ್ಿನಿಯರ ವಸತಿ ನಿಲಯಗಳ ಕಟ್ಟಡ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಬಹುಕೋಟಿ ರೂ. ವೆಚ್ಚದಲ್ಲಿ ಕಾಲೇಜು ನಿಮರ್ಾಣವಾಗಿದೆ ನಿಜ. ಆದರೆ ಅದರಲ್ಲಿ ಕಲೆಯುತ್ತಿರುವ ವಿದ್ಯಾಥರ್ಿಗಳಿಗೆ ಮೌಲ್ಯಯುತ ಶಿಕ್ಷಣ ದೊರೆತಾಗ ಮಾತ್ರ ಆ ಕಾಲೇಜಿಗೆ ಒಂದು ಒಳ್ಳೆಯ ಹೆಸರು ಬರಲು ಸಾಧ್ಯವಿದೆ.
ಆನಿಟ್ಟಿನಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಜವಾಬ್ದಾರಿ ಅರಿತು ವಿದ್ಯಾಥರ್ಿಗಳ ಶೈಕ್ಷಣಿಕ ಗುಣಮಟ್ಟವನ್ನು ಅರಿತು ಪ್ರತ್ಯಕ ಕ್ಲಾಸ್ಗಳನ್ನು ನಡೆಸುವ ಮೂಲಕ ವಿದ್ಯಾಥರ್ಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಹೇಳಿದರು.
ಪ್ರತಿವರ್ಷ 150 ಕ್ಕೀಂತಲೂ ಹೆಚ್ಚು ವಿದ್ಯಾಥರ್ಿಗಳು ಇಲ್ಲಿನ ಶಿಕ್ಷಣವನ್ನು ಪೂರೈಸಿ ಹೆಚ್ಚಿನ ವ್ಯಾಸಂಗಕ್ಕಾಗಿ ಬೇರೆಕಡೆಗೆ ತೆರಳುತ್ತಿದ್ದಾರೆ. ಇದನ್ನು ತಪ್ಪಿಸಲು ಬರುವ ದಿನಗಳಲ್ಲಿ ಈ ಕಾಲೇಜನ್ನು ಇಂಜನೀಯರ ಕಾಲೇಜನ್ನಾಗಿ ಮೇಲ್ದಜರ್ೆಗೆ ಎರಿಸುವ ಗುರಿ ಹೊಂದಲಾಗಿದೆ. ವಿದ್ಯಾಥರ್ಿಗಳಿಗೆ ಅನಕೂಲ ವಾಗುವ ದೃಷ್ಠಿಯಿಂದ ಪ್ರತ್ಯಕ ಲ್ಯಾಬ್, ವರ್ಕಶಾಪ್, ಎರಡು ಸ್ಮಾರ್ಟ ಕ್ಲಾಸ್, ವಿದ್ಯಾಥರ್ಿಗಳಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಕಲ್ಪಿಸಿ ಕನರ್ಾಟಕದಲ್ಲಿ ನಂ. 1 ಕಾಲೇಜನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಪ್ರಾಂಶುಪಾಲರಿಂದ ಹಿಡಿದು ಉಪನ್ಯಾಷಕರು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಆಗಮಿಸಿ ಕ್ಲಾಸ್ಗಳನ್ನು ಪ್ರಾರಂಭಿಸಬೇಕು.
ಪ್ರತಿ ಮೂರು ತಿಂಗಳಿಗೊಮ್ಮೆ ಶೈಕ್ಷಣಿಕ ಪ್ರಗತಿ ಪರಿಶೀಲಾನ ಸಭೆ ಕರೆದು ಚಚರ್ಿಸಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸಬೇಕು. ಆ ಸಭೆಯಲ್ಲಿ ನಾನು ಕೂಡಾ ಉಪಸ್ಥಿತರಿದ್ದು ನಿಮಗೆ ಬೇಕಾದ ಸಹಾಯ ಸಹಕಾರ ನೀಡಲು ಸದಾ ಸಿದ್ದನಾಗಿರುವದಾಗಿ ಹೇಳಿದರು.
ಗ್ರಾಮಮಂಚಾಯತ್ ಅದ್ಯಕ್ಷ ಷಣ್ಮುಖ ಕಾಳಣ್ಣವರ ಮಾತನಾಡಿ ಶಾಸಕ ಬಸವರಾಜ ಬೊಮ್ಮಾಯಿ ಯವರ ಶ್ರಮದ ಪ್ರತಿಫಲವಾಗಿ ಒಂಬತ್ತು ವರ್ಷಗಳ ಹಿಂದೆ ಈ ಡಿಪ್ಲೋಮಾ ಕಾಲೇಜ್ ಮಂಜುರಾತಿ ಪಡೆದು ನೂತನವಾಗಿ ಮಂಜುರಾತಿ ಪಡೆದ ಎಂಟು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸ್ವಂತ ಜಾಗ ಪಡೆದು ಕಟ್ಟಡ ನಿಮರ್ಾಣ ಗೊಂಡ ಏಕೈಕ ಕಾಲೇಜೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಗ್ರಾ.ಪ.ಉಪಾದ್ಯಕ್ಷೆ ಅಬೇದಾರಿ ಹುಚ್ಚಣ್ಣವರ, ಬಿಜೆಪಿ ತಾಲೂಕಾ ಅದ್ಯಕ್ಷ ದೇವಣ್ಣ ಚಾಕಲಬ್ಬಿ, ಕಾರ್ಯದಶರ್ಿ ಬಸವರಾಜ ನಾರಾಯಣಪುರ, ಜಿ.ಪ.ಸದಸ್ಯ ಶೋಭಾ ಗಂಜಿಗಟ್ಟಿ, ತಾ.ಪ.ಅದ್ಯಕ್ಷೆ ಪಾರವ್ವ ಆರೇರ, ಸದಸ್ಯ ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ರಾಘವೇಂದ್ರ ಕಬ್ಬೂರ, ಮಹಬಳೇಶ ಹೊನಕೇರಿ, ಸತೀಷ ವನಹಳ್ಳಿ, ಪ್ರಲ್ಹಾದ ರಾಯ್ಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಹೇಮಂತಕುಮಾರ ಕೆ ಎಸ್ ಸ್ವಾಗತಿಸಿದರು. ಉಪನ್ಯಾಸಕರಾದ ಶಿದ್ಧಲಿಂಗಯ್ಯ ಮಠದ ನಿರೂಪಿಸಿದರು. ಸಿ.ವಾಯ್.ಗಂಟಿಸಿದ್ದಪ್ಪನವರ ವಂದಿಸಿದರು.