ತಂಬಾಕು ಪದಾರ್ಥಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ

Street play on the ill effects of tobacco use

ತಂಬಾಕು ಪದಾರ್ಥಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ

ಬಳ್ಳಾರಿ  11: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಚಿಗುರು ಕಲಾತಂಡ ಇಬ್ರಾಹಿಂಪುರ ಇವರ ಸಂಯುಕ್ತಾಶ್ರಯದಲ್ಲಿ ತಂಬಾಕು ಪದಾರ್ಥಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಸೋಮವಾರ ಕುರುಗೋಡು ತಾಲ್ಲೂಕಿನ ಕೋಳೂರು ಮತ್ತು ದಮ್ಮೂರು ಗ್ರಾಮಗಳಲ್ಲಿ ಬೀದಿ ನಾಟಕ ಮತ್ತು ಜನಪದ ಗೀತೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮವನ್ನು ಕೋಳೂರು ಗ್ರಾಪಂ ಅಧ್ಯಕ್ಷರಾದ ದೊಡ್ಡಬಸಮ್ಮ ಹಾಗೂ ದಮ್ಮೂರು ಗ್ರಾಪಂ ನ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಲ್ಲಿಕಾರ್ಜುನ ಅವರು ಉದ್ಘಾಟಿಸಿದರು. ನಂತರ ಚಿಗುರು ಕಲಾ ತಂಡದ ವತಿಯಿಂದ ಜನಪದ ಗೀತೆಗಳ ಮೂಲಕ ಬೀದಿ ನಾಟಕ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕೋಳೂರು ಮತ್ತು ದಮ್ಮೂರು ಗ್ರಾಮಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಪ್ರಶಾಂತ್, ಸಾಮಾಜಿಕ ಕಾರ್ಯಕರ್ತೆ ಸರಸ್ಪತಿ, ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ವಿರೇಶ್, ಸಿದ್ದಮ್ಮ, ಬಿ.ಎಂ.ಬಸವ, ಶಂಕ್ರಮ್ಮ ಹಾಗೂ ಗ್ರಾಮದ ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕರು, ಊರಿನ ಮುಖಂಡರು ಹಾಗೂ ಚಿಗುರು ಕಲಾ ತಂಡದ ಕಲಾವಿದರಾದ ಹುಲುಗಪ್ಪ, ಎಸ್‌.ಎಂ.ಹನುಮಯ್ಯ, ಹೆಚ್‌.ಜಿ.ಸುಂಕಪ್ಪ, ಬಿ.ಆನಂದ್, ಟಿ.ಹೇಮಂತ, ಸುನೀಲ್ ಸೇರಿದಂತೆ ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.