ಬೆಳಗಾವಿ 15: ವಿದ್ಯಾರ್ಥಿಗಳು ಎನ್.ಎಸ್.ಎಸ್.ನ ಸದಸ್ಯರಾಗಿ ರಾಷ್ಟ್ರದ ಸೇವೆಯನ್ನು ಮಾಡಬೇಕು ಹಾಗೂ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಎನ್.ಎಸ್.ಎಸ್. ನಂತಹ ಶಿಬಿರಗಳಲ್ಲಿ ಪಾಲ್ಗೊಳ್ಳವುದು ಪ್ರಯೋಜನಕಾರಿ ಎಂದು ಅಂಗಡಿ ಸ್ಕೂಲ್ ಆಫ್ ಆರ್ಕಿರ್ಟಕ್ಚರ್ನ ಪ್ರಾಚಾರ್ಯ ಪ್ರೊ. ಎಚ್.ಎಸ್. ಪಾಟೀಲ ಹೇಳಿದರು.
ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಮಂಗಳವಾರ, ದಿ. 12ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಕನರ್ಾಟಕ ಸಕರ್ಾರದ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಗಳ ಸಹಯೋಗದೊಂದಿಗೆ ಏಳು ದಿನಗಳ ಎನ್.ಎಸ್.ಎಸ್.ನ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅವರು ತಮ್ಮ ಶಾಲಾ ದಿನಗಳಲ್ಲಿ ಮಾಡಿರುವ ಸೇವಾಕಾರ್ಯಗಳ ಬಗ್ಗೆ ಸ್ಮರಿಸುತ್ತಾ, ಎನ್.ಎಸ್.ಎಸ್. ಯೋಜನೆಯಡಿಯಲ್ಲಿ ಕಲಿತ ವಿದ್ಯಾರ್ಥಿಗಳು ಎಂತಹ ಸಂದರ್ಭದಲ್ಲೂ ಕೂಡ ವಿಚಲಿತರಾಗದೇ ಮುನ್ನುಗ್ಗುವ ಸ್ವಭಾವದವರಾಗಿರುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಯುವಜನತೆಯಲ್ಲಿ ತಮ್ಮ ಅಧ್ಯಯನದ ಜೊತೆಗೆ ಮಾನವೀಯ ಮೌಲ್ಯಗಳಾದ ಶಿಸ್ತು, ಸೇವೆ, ಸಂಯಮತೆ, ರಾಷ್ಟ್ರಭಕ್ತಿಗಳನ್ನು ಕಲಿಸಿಕೊಡುವ ಗರಡಿ ಮನೆ ಇದ್ದ ಹಾಗೆ. ಈ ಏಳು ದಿನಗಳಲ್ಲಿ ನೀವು ಕಲಿಯುವ ಪಾಠ ಜೀವನವಿಡಿ ಸ್ಮರಿಸುವಂತಹ ಅನುಭವವನ್ನು ನೀಡುತ್ತದೆ ಎಂದು ನುಡಿದರು.
ಶಿಬಿರಾಧಿಕಾರಿಗಳಾದ ಪ್ರೊ. ಕಿರಣ ಪೋತದಾರ ಪ್ರಾಸ್ತಾವಿಕವಾಗಿ ಮಾತನಾಡಿ ಏಳು ದಿನಗಳ ಶಿಬಿರದ ಸಂಕ್ಷಿಪ್ತ ಪರಿಚಯವನ್ನು ಶಿಬಿರಾಥರ್ಿಗಳಿಗೆ ಮಾಡಿಕೊಟ್ಟರು. ಶಿಬಿರದಲ್ಲಿ ಹಲವಾರು ಸಾಂಸ್ಕೃತಿಕ, ಸಾಮಾಜಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಿಗೆ ವಿಶೇಷ ಅನುಭೂತಿ ಮಾಡಿಕೊಡಲಾಗುವುದು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ರಾಜು ಜೋಶಿ, ಪ್ರೊ. ಅನುರಾಧಾ ಹೂಗಾರ, ಸಂಚಾಲಕ ಗಿರೀಶ ಬಡಿಗೇರ ಮತ್ತು ಕಾಲೇಜಿನ ಸುಮಾರು 60 ಕ್ಕೂ ಅಧಿಕ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.