ನವದೆಹಲಿ,11 ಆರ್ಥಿಕತೆ ಸರಿದಾರಿಗೆ ತರಲು, ಮೂಲ ಸೌಕರ್ಯ ಹೆಚ್ಚಿಸಲು ಅನುಕೂಲವಾಗುವಂತೆ ದೇಶದ ರಫ್ತು
ವಹಿವಾಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೊಯೆಲ್
ಹೇಳಿದ್ದಾರೆ.
ಪ್ರಾದೇಶಿಕ ಮತ್ತು ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಭಾರತ ಉತ್ತಮ ಸ್ಥಾನವನ್ನು ಪಡೆದಿದೆ ಎಂದು ಲೋಕಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು ಮಾಹಿತಿ ನೀಡಿದರು. ಚೀನಾ ತನ್ನ ಸ್ಪರ್ಧಾತ್ಮಕ ಯತ್ನದಲ್ಲಿ ಸೋತಿದೆ, ವಿದೇಶಿ ಹೂಡಿಕೆಯನ್ನು ಹೆಚ್ಚಿಸಲು ಭಾರತವು ಹೊಸ ಅವಕಾಶಗಳನ್ನು ಪಡೆಯಲು ಸಿದ್ಧವಾಗಿದೆ.
ಈ ಹಿನ್ನೆಲೆಯಲ್ಲಿ, ಹೆಚ್ಚು ಕಂಪನಿಗಳು ಈಗಾಗಲೇ ಐಟಿ ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್ ಮತ್ತು ಅವರೊಂದಿಗೆ ಮಾತುಕತೆ ಮಾಡಿವೆ ಮೇಲಾಗಿ ಭಾರತದಲ್ಲಿ ತಮ್ಮ ಬಂಡವಾಳ ಹೂಡುವ ಇಚ್ಚೆ ವ್ಯಕ್ತಪಡಿಸಿವೆ ಪರಿಣಾಮ ಹೆಚ್ಚಿನ ಉತ್ಪಾದನಾ ಘಟಕಗಳು ಭಾರತಕ್ಕೆ ಬರಲಿವೆ ಎಂದರು.ಇದಲ್ಲದೆ, ಎಐಎಂಐಎಂ ಸದಸ್ಯ ಸೈಯದ್ ಇಮ್ತಿಯಾಜ್ ಜಲೀಲ್ ಅವರ ಪೂರಕ ಪ್ರಶ್ನೆಗೆ ಉತ್ತರಿಸಿದ ವಾಣಿಜ್ಯ ಸಚಿವರು, ಆರ್ಥಿಕತೆ ಉತ್ತಮ ಪಡಿಸಲು, ಮೂಲಸೌಕರ್ಯಗಳು ನಿರ್ಣಾಯಕವಾಗಲಿದ್ದು ಮತ್ತು ಮೋದಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಹಲವು ಮಹತ್ವದ ಮತ್ತು ದಿಟ್ಟ ಕ್ರಮ ಕೈಗೊಂಡಿದೆ ಎಂದರು."ಭಾರತ ರಫ್ತು ವಲಯವನ್ನು ವಿಸ್ತರಿಸಬೇಕಾಗಿದ್ದು ಸರ್ಕಾರವು ತನ್ನ ರಫ್ತು ಪ್ರಮಾಣವನ್ನು ತ್ವರಿತವಾಗಿ ದ್ವಿಗುಣಗೊಳಿಸಲು ಉತ್ಸುಕವಾಗಿದೆ ಎಂದೂ ಸಚಿವರು ಹೇಳಿದರು.
ಮಹಾರಾಷ್ಟ್ರದ ಔರಂಗಾಬಾದ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಎಐಎಂಐಎಂ ಸದಸ್ಯ ಜಲೀಲ್, ಜಾಗತಿಕ ವ್ಯಾಪಾರದಲ್ಲಿ ಭಾರತ ತನ್ನ ಪಾಲನ್ನು ಹೆಚ್ಚಿಸಲು ಸರ್ಕಾರ ಏನು ಮಾಡುತ್ತಿದೆ, ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.ಸರ್ಕಾರ ಅನೇಕ ಉತ್ತೇಜನ ಕ್ರಮ ಕೈಗೊಂಡಿದ್ದು, ಇದರ ಫಲವಾಗಿ ಐದು ವರ್ಷಗಳಲ್ಲಿ ಎಫ್‌ಡಿಐ ಹೂಡಿಕೆ ಶೇಕಡಾ 50 ರಷ್ಟು ಹೆಚ್ಚಾಗಿದೆ ಎಂದೂ ಸಚಿವರು ಸದನಕ್ಕೆ ಮಾಹಿತಿ ನೀಡಿದರು.