ಗದಗ 27: ಗದುಗಿನ ಮುಂಡರಗಿ ರಸ್ತೆಯಲ್ಲಿರುವ ತೋಂಟದಾರ್ಯ ಇಂಜನಿಯರಿಂಗ ಕಾಲೇಜಿನ ಆವರಣದಲ್ಲಿರುವ ಗುರುಬಸವ ಪ್ರೌಢಶಾಲೆಯಲ್ಲಿ ದಿ.29ರಿಂದ ನಡೆಯುವ ಪ್ರೌಢಶಾಲಾ ವಿದ್ಯಾಥರ್ಿಗಳ ಮತ್ತು ವಿಜ್ಞಾನ ಶಿಕ್ಷಕರ ರಾಜ್ಯ ಮಟ್ಟದ 3 ದಿನಗಳ ವಿಜ್ಞಾನ ವಸ್ತು ಪ್ರದರ್ಶನ ಗದಗ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು ಅದರ ಯಶಸ್ವಿ ಆಯೋಜನೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಪತ್ರಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿಷಯವಾರು ವಿಜ್ಞಾನ ವಸ್ತುಪ್ರದರ್ಶನ ನಡೆಯಲಿದೆ. ವ್ಯವಸಾಯ ಮತ್ತು ಸಾವಯವ ಕೃಷಿ, ಆರೋಗ್ಯ ಮತ್ತು ನೈರ್ಮಲ್ಯ, ಸಂಪನ್ಮೂಲ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ವಿನ್ಯಾಸದಲ್ಲಿ ಗಣಿತ ಶಾಸ್ತ್ರದ ಬಳಕೆ ಹಾಗೂ ಸಾರಿಗೆ ಮತ್ತು ಸಂಪರ್ಕ ಈ ವಿಷಯಗಳಿಗೆ ತಲಾ 5 ಕೊಠಡಿಗಳನ್ನು ಒದಗಿಸಲಾಗಿದೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ವಿದ್ಯಾಥರ್ಿಗಳು ಮತ್ತು ಶಿಕ್ಷಕರು ಇಲ್ಲಿ ತಮ್ಮ ಪ್ರಾತ್ಯಕ್ಷಿಕೆಗಳನ್ನು ಪ್ರದಶರ್ಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ವಸ್ತು ಪ್ರದರ್ಶನದ ವಿದ್ಯಾಥರ್ಿ ವಿಭಾಗದಲ್ಲಿ 327 ವಿದ್ಯಾಥರ್ಿಗಳು 183 ಮಾರ್ಗದಶರ್ಿ ಶಿಕ್ಷಕರು ಹಾಗೂ ಶಿಕ್ಷಕರ ವಿಭಾಗದಲ್ಲಿ 33 ಜನ ಒಟ್ಟು 543 ವಿದ್ಯಾಥರ್ಿ ಶಿಕ್ಷಕರು ವಿಜ್ಞಾನವಸ್ತು ಪ್ರದರ್ಶನದಲ್ಲಿ ಭಾಗವಹಿಸುವರು.
ವಸತಿ ಮತ್ತು ಸಾರಿಗೆ: ರಾಜ್ಯ ಮಟ್ಟದ ಪ್ರೌಢಶಾಲಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ಆಗಮಿಸುವವರಿಗಾಗಿ ವಸತಿ ವ್ಯವಸ್ಥೆ ಇಂತಿದೆ. ವಿದ್ಯಾಥರ್ಿನಿ ಮತ್ತು ಶಿಕ್ಷಕರಿಗೆ ಕಳಸಾಪೂರ ರಸ್ತೆಯ ಒಳಾಂಗಣ ಕ್ರೀಡಾಂಗಣ. ಶಿಕ್ಷಕವಿಭಾಗದ ಶಿಕ್ಷಕಿಯರಿಗೆ ತೋಟದಾರ್ಯ ಇಂಜನೀಯರಿಂಗ ಕಾಲೇಜಿನ ನೀಲಾಂಬಿಕಾ ವಸತಿನಿಲಯ, ವಿದ್ಯಾಥರ್ಿ ಮತ್ತು ಶಿಕ್ಷಕರಿಗೆ ಡಾ. ಪುಟ್ಟರಾಜ ಗವಾಯಿಗಳ ಯತ್ರಿನಿವಾಸ, ಕಳಸಾಪೂರ ರಸ್ತೆಯಲ್ಲಿನ ದೇವರಾಜ ಅರಸು ವಿದ್ಯಥರ್ಿನಿಲಯ ಮತ್ತು ಗದಗ ಎಪಿಎಂಸಿ ಪ್ರವಾಸಿಮಂದಿರ. ಈ ಸ್ಥಳಗಳಿಂದ ವಿಜ್ಞಾನ ವಸ್ತಪ್ರದರ್ಶನ ಸ್ಥಳಕ್ಕೆ ಹೋಗಿಬರಲು ವಿವಿಧ ಖಾಸಗೀ ಶಾಲೆಗಳ ಆಡಳಿತಮಂಡಳಿಗಳ ಸಹಯೋಗದಲ್ಲಿ ಶಾಲಾ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಯಶಸ್ವಿಯಾಗಿ ಶಾಂತಿ ಸುವ್ವಸ್ಥಿತವಾಗಿ ಜರುಗಲು ಹಣಕಾಸು, ಸ್ವಾಗತ, ನೊಂದಣಿ, ಕಾರ್ಯಕ್ರಮ ನಿರ್ವಹಣೆ, ನಿಣರ್ಾಯಕ, ಆರೋಗ್ಯ, ಊಟೋಪಹಾರ, ಸಾರಿಗೆ, ಶಿಸ್ತು-ಸುರಕ್ಷತಾ ಹಾಗೂ ಸಾಂಸ್ಕೃತಿಕ ಹೀಗೆ ಒಟ್ಟು 11 ಸಮಿತಿಗಳನ್ನು ರಚಿಸಿ ಸಿದ್ದತಾ ಮತ್ತು ನರ್ವಹಣಾ ಜವಾಬ್ದಾರಿಯನ್ನು ಅವುಗಳಿಗೆ ನೀಡಲಾಗಿದೆ. ಕಾರ್ಯಕ್ರಮದ ಉಸ್ತುವಾರಿ, ಹಾಗೂ ಆಯೋಜನೆಗೆ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ 12 ಅಧಿಕಾರಿಗಳು, 20 ಮುಖ್ಯೋಪಾಧ್ಯಾಯರು, 16 ಸಂಪನ್ಮೂಲ ವ್ಯಕ್ತಿಗಳು, 120 ಪ್ರೌಢ ಹಾಗೂ 100 ಪ್ರಾಥಮಿಕ ಶಾಲಾಶಿಕ್ಷಕರು ಸೇರಿದಂತೆ 268 ಜನ ಕಾರ್ಯ ನಿರ್ವಹಿಸುವರು.
ಶನಿವಾರ ದಿ.29ರಂದು ಮುಂಜಾನೆ 10-30 ಗಂಟೆಗೆ ಪ್ರೌಢಶಾಲಾ ವಿದ್ಯಾಥರ್ಿಗಳ ಹಾಗೂ ವಿಜ್ಞಾನ ಶಿಕ್ಷಕರ 2018-19 ನೇ ಸಾಲಿನ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭವು ಜರುಗಲಿದೆ. ಮೂರುದಿನವೂ ಪ್ರತಿದಿನ ಮುಂಜಾನೆ 10:00 ಗಂಟೆಯಿಂದ ಸಂಜೆ 5:30 ಗಂಟೆ ವೆರೆಗೆ ನಡೆಯಲ್ಲಿದ್ದು ಗದಗ ಬೆಟಗೇರಿ ಶಹರ ಹಾಗೂ ಜಿಲ್ಲೆಯ ಶಾಲಾ ವಿದ್ಯಥರ್ಿಗಳು, ಪಾಲಕರು, ವಿಜ್ಞಾನ ವಿಷಯಗಳ ಆಸಕ್ತರು ಈ ವಿಜ್ಞಾನ ವಸ್ತು ಪ್ರದರ್ಶನವನ್ನು ಬಹು ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಎ.ಜಿ.ಹಿರೇಮಠ ಮನವಿ ಮಾಡಿದರು. ಗದಗ ಡೈಟ್ ಸಂಸ್ಥೆ ಪ್ರಾಚಾರ್ಯ ಎಚ್.ಎಂ. ಖಾನ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಶರಣು ಗೋಗೇರಿ ಪತ್ರಿಕಾಗೋಷ್ಟಿಯಲ್ಲಿದ್ದರು.