ರಾಜ್ಯ ಮಟ್ಟದ ಜನೋತ್ಸವ ಕಾರ್ಯಕ್ರಮ

ಲೋಕದರ್ಶನವರದಿ

ಧಾರವಾಡ04 : ನಮ್ಮ ಇಂದಿನ ಪೂರ್ವಜರೂ ನಮ್ಮ ಭಾರತೀಯ ಸಂಸ್ಕೃತಿಯ ಕಲೆಗಳಲ್ಲಿ ಒಂದಾದ ಸಂಗೀತ ನೃತ್ಯ ನಾಟಕ ಬಹಳಷ್ಟು ಪ್ರಾಮುಖ್ಯತೆಗಳನ್ನು ಹೊಂದಿದೆ. ಇಂದಿನ ಯುವಕರಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಲು ಇಂತಹ ಏಕ್ ಭಾರತ್ ಶ್ರೇಷ್ಠ ಭಾರತ ಇಂತಹ ಕಾರ್ಯಕ್ರಮದಿಂದ ಸಾಧ್ಯ ಎಂದು ಸಂಘದ ಕಾರ್ಯದಶರ್ಿ ಯಮನಪ್ಪ ಜಾಲಗಾರ ಹೇಳಿದರು. 

ಉತ್ತರಾಖಂಡದ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾಸಚಿವಾಲಯ, ನೆಹರು  ಯುವ ಕೇಂದ್ರ ಸಂಘಟನೆ ವತಿಯಿಂದ ರಾಜ್ಯ ಮಟ್ಟದ ಏಕ್ ಭಾರತ್ ಶ್ರೇಷ್ಠ ಭಾರತ ಅಂಗವಾಗಿ ಅಂತರಾಜ್ಯ ವಿನಿಮಯ ಕಾರ್ಯಕ್ರಮದಲ್ಲಿ ಉತ್ತರಾಖಂಡ ಮತ್ತು ಕನರ್ಾಟಕದ 50 ಮಂದಿ ಯುವಕ ಯುವತಿಯರು ಭಾಗವಹಿಸಿದ್ದು ಇದರಲ್ಲಿ ಧಾರವಾಡದ ನಾದ ಝೇಕಾಂರ ಸಾಂಸ್ಕೃತಿಕ ಸಂಘದ ಯುವ ತಬಲ ಕಲಾವಿದ ಯಮನಪ್ಪ ಜಾಲಗಾರ, ಫಕೀರಪ್ಪ ಮಾದನಬಾವಿ, ಪ್ರಮೋದ ಕೆಂಗೇರಿ, ಅನಿತಾ ಆರ್, ಅಪೂರ್ವ ಭಜಂತ್ರಿ, ಐಶ್ವರ್ಯ ಕಲಾಲ, ಮಧುರಾ ಪಿ, ಶ್ರೀಧರ ಭಜಂತ್ರಿ, ಭರತ್ ಪಾಟೀಲ, ಲೋಹಿತ್ ಭಜಂತ್ರಿ, ಶರಣು ಈ ಎಲ್ಲಾ ಕಲಾವಿಧರಿಗೆ ಪ್ರಶಸ್ತಿ ಪತ್ರ ನೀಡಿ ಭಾಗವಹಿಸಿದ್ದು ಕನರ್ಾಟಕದ ಜಾನಪದ ಕಲೆಗಳನ್ನು ನಾಟಕ ನೃತ್ಯ ಜಾನಪದ ಗೀತೆಗಳನ್ನು ಹಾಡು ಈಗ ಸಧ್ಯ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಆಯ್ಕೆಯಾಗಿರುತ್ತಾರೆ.