ರಾಜ್ಯ ಮಟ್ಟದ ಕ್ರೀಡಾಕೂಟ ಸ್ಪಧರ್ೆಯಲ್ಲಿ ಪ್ರಶಸ್ತಿ, ಟ್ರೋಫಿ

ಲೋಕದರ್ಶನ ವರದಿ

ಕಂಪ್ಲಿ 02:ತಾಲೂಕಿನ  ಚಿಕ್ಕಜಾಯಿಗನೂರು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿ.ಮುನಿಯನಾಯ್ಕ ಅವರು ಸಕರ್ಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ 70ಕೆ.ಜಿ.ವಿಭಾಗದ ವೇಟ್ ಲಿಫ್ಟಿಂಗ್ ಸ್ಪಧರ್ೆಯಲ್ಲಿ ತೃತೀಯ ಸ್ಥಾನ ಪಡೆದು, ಪ್ರಶಸ್ತಿ ಹಾಗೂ ಟ್ರೋಫಿಗಳಿಸಿದ್ದಾರೆ. 

  ಜ.28ರಿಂದ ಜ.30ರತನಕ ಮೈಸೂರು ಚಾಮುಂಡೇಶ್ವರಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ, 2018-19ನೇ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಂಗಳೂರಿನ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ, ಸಕರ್ಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹನುಮಂತಪ್ಪ ಬಡಿಗೇರ ಅವರು ಬಾಲ್ ಬ್ಯಾಡ್ಮಿಂಟನ್ನಲ್ಲಿ ದ್ವಿತೀಯ, ವಿ.ಮುನಿಯನಾಯ್ಕ 70ಕೆ.ಜಿ.ವಿಭಾಗದ ವೇಟ್ ಲಿಫ್ಟಿಂಗ್ ಸ್ಪಧರ್ೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಕೆ.ರಾಮು ಪ್ರಶಸ್ತಿ ಪತ್ರ ಹಾಗು ಟ್ರೋಫಿ ನೀಡಿ, ಅಭಿನಂದಿಸಿದ್ದಾರೆ. ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಹಾಗು ಪ್ರಧಾನ ಕಾರ್ಯದಶರ್ಿ ಚಂದ್ರಶೇಖರ ನುಗ್ಗಿ ಇದ್ದರು.

    ಹನುಮಂತಪ್ಪ ಬಡಿಗೇರ ಹಾಗೂ ವಿ.ಮುನಿಯನಾಯ್ಕ ಅವರ ಸಾಧನೆಗೆ  ಗ್ರಾಮೀಣ ಶಿಕ್ಷಕರ ಸಂಘದ ಪದಾಧಿಕಾರಿಗಳು, ಕಂಪ್ಲಿ ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ, ಪದಾಧಿಕಾರಿಗಳು ಹಾಗು ಕಂಪ್ಲಿ, ಹೊಸಪೇಟೆ ತಾಲೂಕಿನ ಸರ್ವ ಶಿಕ್ಷಕರು ಶ್ಲಾಘಿಸಿದ್ದಾರೆ.