ಕ್ರೈಸ್ತ್ ಸಮುದಾಯ ಅಭಿವೃದ್ದಿಗಾಗಿ ಮತ್ತು ಸರಕಾರದ ಸೌಲಭ್ಯಗಳನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ: ಜೆಎನ್ ಗಣೇಶ
ಕಂಪ್ಲಿ 25: ಕ್ರೈಸ್ತ್ ಸಮುದಾಯವು ಶೈಕ್ಷಣೀಕ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು ಈ ಸಮುದಾಯದ ಅಭಿವೃದ್ದಿಗಾಗಿ ಮತ್ತು ಸರಕಾರದ ಸೌಲಭ್ಯಗಳನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜೆಎನ್ ಗಣೇಶ ಹೇಳಿದರು.
ಇಲ್ಲಿನ ಐತಿಹಾಸಿಕ ಸೋಮಪ್ಪ ದೇವಸ್ಥಾನ ಬಳಿಯ ಎಲ್‌ಷಡಾಯ್ ಚರ್ಚ್ ನಲ್ಲಿ ಗುರುವಾರ ಕ್ರೀಸ್ ಮಸ್ ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ತಾಯಂದಿರ ಮಕ್ಕಳಿಗೆ ಸಂಸ್ಕಾರ ಜೊತೆಗೆ ಸಂಸ್ಕತಿಯನ್ನು ಕಲಿಸಿರಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬೆಳೆಯ ಬೇಕಾದರೆ ಶಿಕ್ಷಣ ಬೇಕು ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳಹಿಸಿಲು ಮುಂದಾಗಿ ಜೀವನದಲ್ಲಿ ಕುಟುಂಬ ಬದಲಾವಣೆ ಯಾಗಲು ಬೇಕಾದರೇ ಶಿಕ್ಷಣ ಅವಶ್ಯಕವಾಗಿ ಬೇಕು ಪಂಪಾಪತಿ ಸುಮಾರು ವರ್ಷದಿಂದ ಸಮುದಾಯಕ್ಕಾಗಿ ಹಗಲು ಇರಳು ಶ್ರಮೀಸಿದ್ದಾರೆ ಸಮುದಾಯಕ್ಕೆ ಮತ್ತು ಚರ್ಚ್ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು. ಕ್ರೀಸ್ ಮಸ್ ಹಬ್ಬದ ಪ್ರಯುಕ್ತ ಕಂಪ್ಲಿಯ ಎಲ್ ಷಡ್ಡಾಯ ಚರ್ಚ್ ಫಾದರ್ ರೆವರೆಂಡ್ ಪಾಲ್ ಪಂಪಾಪತಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಮನುಷ್ಯರ ಪಾಪ ಕಳೆಯಲು ಯೇಸು ಹುಟ್ಟಿದ್ದಾನೆ ಹೊರೆತು ಕ್ರೈಸ್ತ ಮತ ಸ್ಥಾಪನೆಗಾಗಿ ಜನಿಸಲ್ ಯಾವುದೇ ಜಾತಿ ಕುಲ ಮತ ಬೇಧಬಾವ ವಿಲ್ಲದೆ ಯೇಸು ಎಲ್ಲರನ್ನು ಪ್ರೀತಿಸುತ್ತಾನೆ ಎಂದರು ಯೇಸು ಕ್ರೀಸ್ತನ ಜನನ ಮತ್ತು ವೈಭವ ಹಾಡುಗಳನ್ನು ಹಾಡಿದರು.
ಪ್ರಮುಖರಾದ ಕೆ ಮಹಿಬೂಬು ಬೂದಗುಂಪಿ ಹುಸೇನ್ ಸಾಬ್ ವಿರುಪಾಕ್ಷೀ ನಾಗರಾಜ ಗಣೇಶ ಸೋಮಣ್ಣ ದೇವಲಾಪುರ ಮಾರೆಪ್ಪ ವೀರೇಶ ಹನುಮಂತ ಭೀಮೇಶ ಸೇರಿ ಅನೇಕರಿದ್ದರು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು .ಡಿ 001 ಐತಿಹಾಸಿಕ ಸೋಮಪ್ಪ ಬಳಿಯ ಎಲ್‌ಷಡಾಯ್ ಚಚ್ ರ್ ನಲ್ಲಿ ಗುರುವಾರ ಕ್ರೀಸ್ ಮಸ್ ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸುವ ಶಾಸಕ ಜೆಎನ್ ಗಣೇಶ ಮೂಲಕ ಚಾಲನೆ ನೀಡಿ