ಲೋಕದರ್ಶನ ವರದಿ
ಗದಗ: ಇಂದಿನ ದಿನಮಾನಗಳಲ್ಲಿ ದಿನಕ್ಕೆ ತಕ್ಕಂತೆ ಉಡುಗೆ ತೊಡಿಗೆಗಳೂ ಸಹ ಬದಲಾಗುತ್ತವೆ. ಆ ಹೊಸ ಹೊಸ ಉಡುಗೆ ತೊಡಿಗೆಗಳಿಗೆ ತಕ್ಕಂತೆ ಹೊಸ ವಿನ್ಯಾಸಗಳ ನೇಯ್ಗೆಯನ್ನೂ ಸಹ ಸಿದ್ಧಪಡಿಸಿಕೊಂಡು ನಮ್ಮೆಲ್ಲರನ್ನು ಆ ಹೊಸ ವಿನ್ಯಾಸಕ್ಕೆ ತಕ್ಕಂತೆ ಬಟ್ಟೆಯನ್ನು ನೇಯ್ದು ಸಿದ್ಧಪಡಿಸುವ ಸಾಕಷ್ಟು ಕೆಲಸ ಕಾರ್ಯಗಳ ಹಿಂದೆ ನೂರಾರು ಜನ ನೇಕಾರರ ಅವಿರತ ಪರಿಶ್ರಮವಿದ್ದು ಅವರ ನಿಜವಾದ ಪರಿಶ್ರಮವೇ ನಮ್ಮ ಉಡುಗೆ ತೊಡುಗೆಗಳಿಗೆ ಶ್ರೀರಕ್ಷೆ ಇದ್ದಂತೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್ಪಿ ಬಳಿಗಾರ ಅವರು ಕರೆ ನೀಡಿದರು.
ಅವರು ಸ್ಥಳೀಯ ನರಸಾಪೂರದ ಕೈಮಗ್ಗ ಮತ್ತು ಜವಳಿ ಇಲಾಖೆಯ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿವಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡುತ್ತಾ, ನಾವು ತೊಡುವ ಎಲ್ಲ ಬಟ್ಟೆಗಳು ನಾವು ಬೆಳೆವ ಹತ್ತಿಯಿಂದಲೇ, ಹತ್ತಿಯಿಂದ ತಯಾರಿಸಿದ ಬಟ್ಟೆಗಳು ಆರೋಗ್ಯಕ್ಕೆ ಒಳ್ಳೆಯದು. ಈ ಕಾರ್ಯಕ್ರಮವು ಪಾರಂಪರಿಕ ನೇಕಾರರ ಕಲೆಯನ್ನು ಉಳಿಸಿಕೊಳ್ಳಲು ಹಾಗೂ ಅವರನ್ನು ಸಕರ್ಾರದ ವಿವಿಧ ಯೋಜನೆಗಳ ಮೂಲಕ ಉತ್ತೇಜಿಸಲು ಹಮ್ಮಿಕೊಂಡ ಕಾರ್ಯಕ್ರಮವಾಗಿದ್ದು ನೇಕಾರರನ್ನು ಉತ್ತಮ ದೃಷ್ಠಿಯಿಂದ ಹಾಗೂ ಗೌರವದಿಂದ ಕಾಣಿರೆಂದು ಮಾತನಾಡಿದರು.
ಕರ್ನಾಟಕ ಕೈಮಗ್ಗ ಮತ್ತು ತಂತ್ರಜ್ಞಾನ ಸಂಸ್ಥೆಯ ಪ್ರಾಂಶುಪಾಲ ಎಚ್.ಎಸ್ ಸೋಮನಗೌಡ್ರ ಮಾತನಾಡುತ್ತಾ, ಈವರೆಗೆ ಭಾರತದಾದ್ಯಂತ 34 ಮಿಲಿಯನ್ ನೇಕಾರರು ತಮ್ಮ ಸೇವೆಯನ್ನು ಮಾಡುತ್ತಿದ್ದುದಕ್ಕೆ ಇಂದು ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ಅಗಸ್ಟ್ 07 ರಂದು ರಾಷ್ಟ್ರೀಯ ಕೈಮಗ್ಗ ದಿವಸವನ್ನಾಗಿ ಆಚರಣೆ ಮಾಡುತ್ತಿದ್ದು, ಈ ವರೆಗೆ ದೇಶಾದ್ಯಂತ 15% ಕೈಮಗ್ಗ ಮತ್ತು ಜವಳಿ ಉತ್ಪನ್ನಗಳು ಮಾರಾಟವಾದರೆ ಹೊರದೇಶಗಳಿಗೆ 95% ಉತ್ಪಾದನೆಯು ರಫ್ತಾಗುತ್ತದೆ. ಆದ ಕಾರಣ ನೇಕಾರರನ್ನು ಉತ್ತೇಜಿಸುವುದು, ಬೆಳೆಸುವುದು ಹಾಗೂ ಅವರನ್ನು ಉಳೀಸುವದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಕಡಿಮೆ ಬಡ್ಡಿ ದರದಲ್ಲಿ ಹಾಗೂ ಸಬ್ಸಿಡಿ ದರಗಳಲ್ಲಿ ಉತ್ಪಾದನಾ ಯಂತ್ರಗಳನ್ನು ನೀಡುತ್ತಿದೆ. ಭಾರತದಾದ್ಯಂತ ಸಕರ್ಾರಿ ಅರೇ ಸರ್ಕಾರಿ ಸೇವೆಯಲ್ಲಿ ಇರತಕ್ಕಂತಹ ನೌಕರರೆಲ್ಲ ತಿಂಗಳಲ್ಲಿ ಒಂದು ದಿನವಾದರೂ ಕೈಮಗ್ಗದಲ್ಲಿ ತಯಾರಿಸಿದ ಬಟ್ಟೆಗಳನ್ನು ತೊಟ್ಟು ನೇಕಾರರ ಬದುಕನ್ನು ಹಸನುಮಾಡುವಲ್ಲಿ ಮುಂದಾಗಬೇಕೆಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ ಎಂದು ನುಡಿದರು. ಅದೇ ರೀತಿ ನಮ್ಮ ಕಾಲೇಜಿನ ಖುಲ್ಲಾ ಜಾಗೆಯಲ್ಲಿ 1117 ವಿವಿಧ ಹಣ್ಣಿನ ಮರಗಳಲ್ಲಿ ನೆಟ್ಟಿದ್ದು ಮುಂಬರುವ ದಿನಗಳಲ್ಲಿ ಎಲ್ಲ ಸಮಯದಲ್ಲಿ ಹಣ್ಣುಗಳ ಸೇವೆಯನ್ನು ನಮ್ಮ ಕಾಲೇಜಿನ ಮಕ್ಕಳಿಗೆ ಸಿಗುವಂತಹ ವ್ಯವಸ್ಥೆಯನ್ನು ಮಾಡಿದ್ದೇನೆ ಹಾಗೂ ಕಾಳೇಜಿನ ಪ್ರಗತಿಗೋಸ್ಕರ ಮಳೆ ನೀರು ಕೊಯಿಲು ಯೋಜನೆ, ಬೋರ್ವೆಲ್ ರೀಚಾರ್ಜ, ಸಿಸಿ ರಸ್ತೆಗಳ ಕಾಮಗಾರಿಗಳನ್ನು ಸಂಭಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸ್ಪಂದಿಸಿ ಮಾಡಿದ್ದೇನೆ ಎಂದರು.
ನಂತರ ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದ ಮಾಜಿ ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಹಾಗೂ ಅನಿಲ ಗಡ್ಡಿ ಹಾಗೂ ಭಾವಿಕಟ್ಟಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿದರ್ೇಶಕ ಡಾ. ಶಿವರಾಜ ಕುಲಕಣರ್ಿ ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರಿಸಿ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿಗಳಾದ ಅನುಪಮ ಹಿರೇಮಠ, ಎ.ಎ ಪೀರಜಾದೆ, ಎಮ್ ಎಚ್ ಹಳ್ಳೀಕೇರಿ, ತರಬೇತಿ ಕೇಂದ್ರಗಳ ಹಾಗೂ ಉತ್ಪಾದಕರ ಸಂಘಗಳಿಂದ ಶಶಿಧರ ಶಿರಸಂಗಿ, ಸುರೇಶ ಉಂಕಿ, ನಿಂಗಪ್ಪ ಮಾದನಹಳ್ಳಿ, ಬಾಲಚಂದ್ರ ನಾಗಸಮುದ್ರ, ಮಂಜುನಾಥ ಕಿನ್ನಾಳ, ಗುರುಶಾಂತಪ್ಪ ಢವಳಗಿ ಹಾಗೂ ನೂರಾರು ನೇಕಾರರು ಮತ್ತು ಕಾಲೇಜಿನ ವಿಧ್ಯಾಥರ್ಿಗಳು ಉಪಸ್ಥಿರಿದ್ದರು.
ಈ ಕಾರ್ಯಕ್ರಮದಲ್ಲಿ 5 ಜನರಿಗೆ ಯುವಾ ಹ್ಯಾಂಡಲೂಮ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ವಿ.ಎಚ್ ಜಿನಗಿ, ಪ್ರಾರ್ಥನಾ ಗೀತೆಯನ್ನು ಮೇಘಾ ಮತ್ತು ಶ್ವೇತಾ, ವಂದನಾರ್ಪಣೆಯನ್ನು ಶಿವಪದ್ಮನಾಭ ಗಡಗಿ ನೆರವೇರಿಸಿಕೊಟ್ಟರು.