ಲೋಕದರ್ಶನ ವರದಿ
ಕಂಪ್ಲಿ 22:ಮಕ್ಕಳಿಗೆ ಕೇವಲ ಹೆಚ್ಚು ಅಂಕಗಳಿಕೆಯ ಶಿಕ್ಷಣ ಕೊಡಿಸುವಷ್ಟಕ್ಕೆ ಆದ್ಯತೆ ನೀಡದೆ, ಸಂಸ್ಕಾರ, ನೈತಿಕತೆ, ಪ್ರಾಮಾಣಿಕತೆ, ಮಾನವೀಯತೆ ಮತ್ತು ಪರಮತ ಸಹಿಷ್ಣುತೆ ಗುಣಗಳನ್ನು ಪ್ರೇರೇಪಿಸಬೇಕಾಗಿದೆ ಎಂದು ಕಂಪ್ಲಿಯ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಹೇಳಿದರು.
ತಾಲೂಕಿನ ಸತ್ಯನಾರಾಯಣ ಪೇಟೆಯ ಶ್ರೀಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಜರುಗಿದ ಶ್ರೀಲಕ್ಷ್ಮಿ ವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವದ ಸಾನ್ನಿಧ್ಯವಹಿಸಿ, ಆಧುನಿಕತೆಯ ಸೋಂಕಿನಿಂದ ವಿದೇಶಿ ಜೀವನ ಅನುಕರಣೆ ಸಲ್ಲದು. ಪ್ರಾಚೀನ ಪರಂಪರೆಯ ಧರ್ಮ ಸಂಸ್ಕಾರಗಳನ್ನು ಅರಿತು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ತಪ್ಪಿದಲ್ಲಿ ಧರ್ಮನಿಂದಕ ಪರಂಪರೆಯನ್ನು ಪೋಷಿಸುವ ಅಪಾಯ ತಪ್ಪಿದ್ದಲ್ಲ. ದೇವರನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿದರೆ, ಇಷ್ಟಾರ್ಥಗಳು ನೆಲೆಸಲು ಸಾಧ್ಯ ಎಂದರು.
ಕಲ್ಯಾಣ ಬ್ರಹ್ಮೋತ್ಸವ ನಿಮಿತ್ತ ದೇವಸ್ಥಾನದ ಪ್ರಾಂಗಣದಲ್ಲಿ ಬ್ರಹ್ಮ ರಥೋತ್ಸವ ಜರುಗಿತು. ಇದರ ಅಂಗವಾಗಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಸಹಸ್ರನಾಮ, ಲಕ್ಷ್ಮಿ ನಾರಾಯಣ ಹೋಮ ಸೇರಿ ಕಲ್ಯಾಣೋತ್ಸವದ ನಾನಾ ಧಾಮರ್ಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಗಳಿಂದ ಜರುಗಿದವು.
ಲಕ್ಷ್ಮಿ ವೆಂಕಟರಮಣ ಪ್ರತಿಮೆಯನ್ನು ಫಲಪುಷ್ಪಾಧಿಗಳಿಂದ ಅಲಂಕರಿಸಲಾಗಿತ್ತು. ಸದ್ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಬ್ರಹ್ಮೋತ್ಸವದಲ್ಲಿ ಎನ್.ಚಂದ್ರಶೇಖರ್, ಜಯಂತ್ ಶ್ರೀವತ್ಸಾ ಸೇವಾಧರ್ಮದಶರ್ಿಗಳಾದ ವೈಷ್ಣವಿ ಕೃಷ್ಣಮೂತರ್ಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಸುಧಾ ನಾಗರಾಜ್, ಸೇರಿ ಸರ್ವ ಸಮುದಾಯಗಳ ಸದ್ಭಕ್ತರು ಶ್ರದ್ಧಾಭಕ್ತಿಗಳಿಂದ ಪಾಲ್ಗೊಂಡಿದ್ದರು