ವಿಜೃಂಬಣೆಯ ಶ್ರೀ ಶಿವಭವಾನಿ ವರ್ಧಂತಿ ಮಹೋತ್ಸವ
ತಾಳಿಕೋಟೆ, 03: ಪಟ್ಟಣದ ಕ್ಷತ್ರೀಯ ಮರಾಠಾ ಸಮಾಜದ ಕುಲದೇವತೆಯಾದ ಶ್ರೀ ಶಿವಭವಾನಿ ಮಂದಿರದ 26ನೇ ವರ್ಷದ ವರ್ಧಂತಿ ಮಹೋತ್ಸವವು ಸೋಮವಾರರಂದು ಭಕ್ತಿಭಾವದೊಂದಿಗೆ ವಿಜೃಂಬಣೆಯಿಂದ ಜರುಗಿತು.
ರಾಜವಾಡೆಯಲ್ಲಿರುವ ಶ್ರೀ ಶಿವಭವಾನಿ ಮಂದಿರದಲ್ಲಿ ವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀ ಶಿವಭವಾನಿಗೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮಹಾ ಮೂರ್ತಿಗೆ ನಸುಕಿನ ಜಾವ ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಅಲಂಕಾರ, ಮಹಾ ಮಂಗಳಾರತಿ ಜರುಗಿತು.ನಂತರ ಸುಮಂಗಲೆಯರಿಂದ ಕುಂಭಮೇಳದೊಂದಿಗೆ ಹಾಗೂ ಫಲ್ಲಕ್ಕಿ ಉತ್ಸವದೊಂದಿಗೆ ರಾಜವಾಡೆಯ ಶ್ರೀ ಶಿವಭವಾನಿ ಮಂದಿರದಿಂದ ಭೀಮನಭಾವಿಯಲ್ಲಿ ಗಂಗಸ್ಥಳ ಕಾರ್ಯಕ್ರಮದೊಂದಿಗೆ ಶ್ರೀ ಶಿವಭವಾನಿ ದೇವಿಯ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣೆಗೆಯು ಪ್ರಾರಂಭಗೊಂಡು ನಾಗರಕಲ್ಲ ಬಡಾವಣೆ, ಶಿವಾಜಿ ಮಹಾರಾಜರ ವೃತ್ತ, ಶ್ರೀ ವಿಠ್ಠಲ ಮಂದಿರ ರಸ್ತೆ, ಬಾಲಾಜಿ ಮಂದಿರ ರಸ್ತೆ, ಕತ್ರಿ ಭಜಾರ ಮಾರ್ಗವಾಗಿ ಬಸವಣ್ಣದೇವರ ಮಂದಿರ ರಸ್ತೆಯ ಮೂಲಕ ಮರಳಿ ರಾಜವಾಡೆಯಲ್ಲಿರುವ ಶ್ರೀ ಮಂದಿರ ತಲುಪಿತು.ನಂತರ ಶ್ರೀ ಗಣೇಶ ಹಾಗೂ ನವಗ್ರಹಪೂಜೆ, ಚಂಡಿ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ಜರುಗಿತ್ತಲ್ಲದೇ ಈ ಪೂಜಾ ಕಾರ್ಯಕ್ರಮವನ್ನು ಶ್ರೀ ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಷಬಟ್ ಜೋಶಿ, ಪ್ರತೀಕಬಟ್ ಜೋಶಿ ಬಳಗದವರಿಂದ ಜರುಗಿತು.
ಈ ಮಹಾ ಪೂಜಾ ಕಾರ್ಯಕ್ರಮದಲ್ಲಿ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಹಾಗೂ ಬಿಜೆಪಿ ರೈತ ಮೂರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಹಾಗೂ ವಿಜಯಪುರ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ಚವ್ಹಾಣ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರ ನಿವೃತ್ತ ವ್ಯವಸ್ಥಾಪಕರಾದ ರಂಗನಾಥ ನೂಲಿಕರ, ತಾಳಿಕೋಟೆ ತಾಲೂಕಾ ತಹಶಿಲ್ದಾರ ಶ್ರೀ ಕೀರ್ತಿ ಚಾಲಕ್, ಪುರಸಭಾ ಮುಖ್ಯಾಧಿಕಾರಿ ಮೋಹನ್ ಜಾಧವ, ಅಲ್ಲದೇ ಸ್ವ ಖರ್ಚಿನಲ್ಲಿ ಶ್ರೀ ಶಿವಭವಾನಿ ಮಂದಿರದ ಮಹಾ ದ್ವಾರ ನಿರ್ಮಿಸಿದ ಸಂಭಾಜಿ ವಾಡಕರ ಹಾಗೂ ದಿ.ತಾಳಿಕೋಟೆ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕ ಮಂಡಳಿಯವರಿಗೆ ವಿವಿಧ ಸಮಾಜದ ಮುಖಂಡರುಗಳಿಗೆ ಮತ್ತು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ಜರುಗಿತು. ಈ ವರ್ಧಂತಿ ಮಹೋತ್ಸವದಲ್ಲಿ ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲ ಸಮಾಜದ ಬಂದುಗಳು ಮಹಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನಿತರಾದರು.ಈ ವರ್ಧಂತಿ ಮಹೋತ್ಸವದ ಭವ್ಯ ಮೆರವಣಿಗೆಯ ನೇತೃತ್ವವನ್ನು ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷರಾದ ಸಂಭಾಜಿರಾವ್ ವಾಡಕರ, ಉಪಾಧ್ಯಕ್ಷ ಅಣ್ಣಾಜಿ ಜಗತಾಪ, ಕಾರ್ಯದರ್ಶಿ ಕಾಶಿರಾಯ ಮೋಹಿತೆ, ಖಜಾಂತಿ ಎಸ್.ವ್ಹಿ.ಸಾಳುಂಕೆ, ಗುಂಡುರಾವ್ ಜಗತಾಪ, ನಾರಾಯಣ ಸುಭೇದಾರ, ಜಿ.ಟಿ.ಘೋರೆ್ಡ, ಮಾರುತಿ ಘಾಟಗೆ, ಸಂಜೀವ ಕದಂ, ಗುರುರಾಜ ಮಾನೆ, ಸಂಭಾಜಿ ಡಿಸಲೆ, ದನಂಜಯ ಶಿಂಧೆ, ಶಶಿಧರ ಡಿಸಲೆ, ಅಂಬಾಜಿ ಜಾಧವ, ವಿಠ್ಠಲ ಮೋಹಿತೆ, ವಿಠ್ಠಲ ಶೇವಳಕರ, ನಾರಾಯಣ ಘಾಯಕವಾಡ, ಲಕ್ಷ್ಮಣ ಶೇವಳಕರ, ಪಾಂಡು ಶೇವಳಕರ, ಅಂಬಾಜಿ ಘೋರೆ್ಡ, ಪುಂಡಲಿಂಕ ಮೋಹಿತೆ, ರಂಗನಾಥ ನೂಲಿಕರ, ಬಾಬುರಾವ್ ಶೀಂಧೆ, ವಿಠ್ಠಲ ಜಗತಾಪ, ಸುಭಾಸ ಘಾವಡೆ, ಅನೀಲ ಮಾನೆ, ರಾಮಚಂದ್ರ ಸುಭೇದಾರ, ಸಂತೋಷ ಸುಭೇದಾರ, ಪಾಂಡು ಕದಂ, ರಮೇಶ ಮೋಹಿತೆ, ಜೀಜಾಮಾತಾ ಮಹಿಳಾ ಮಂಡಳದ ಅಧ್ಯಕ್ಷರಾದ ಶಾಂತಾಬಾಯಿ ನೂಲಿಕರ, ಯಶೋದಾ ಶೇವಳಕರ, ಗೀರಿಜಾ ಮೋಹಿತೆ, ಶ್ರೀಮತಿ ಗೀತಾಬಾಯಿ ಘೋರೆ್ಡ, ಸಾವಿತ್ರಾ ವಾಡಕರ, ಪ್ರೇಮಾಬಾಯಿ ಡಿಸಲೆ, ಶೈಲಜಾ ಘೋರೆ್ಡ, ಇಂದ್ರಾಬಾಯಿ ಕದಂ, ಹೇಮಾ ಡಿಸಲೆ, ಜಯಶ್ರೀ ಘಾವಡೆ, ಶೋಭಾ ಸುಭೇದಾರ, ರೇಣುಕಾ ಶೇವಳಕರ, ರೇಣುಕಾ ಘಾಯಕವಾಡ, ಶ್ರೀದೇವಿ ಶೇವಳಕರ, ಶೈಲಾ ಮೋಹಿತೆ, ರೇಖಾ ಮಾನೆ, ಪೂಜಾ ಕದಂ, ಸುಮಾ ಜಗತಾಪ, ಅಶ್ವೀನಿ ಪಿಸಾಳೆ, ಸುರೇಖಾ ಮಾನೆ, ಭಾಗೀರಥಿ ಸುಭೇದಾರ, ಕಮಲಾ ಭೋಸಲೆ, ಜೀಜಾಬಾಯಿ ಪಂಧೆ, ಸಾವಿತ್ರಿ ಶಿಂಧೆ, ಮೊದಲಾದವರು ಪಾಲ್ಗೊಂಡಿದ್ದರು.