ಲೋಕದರ್ಶನ ವರದಿ
ಲಕ್ಷ್ಮೇಶ್ವರ 19: ನಗರದ ಮುಖ್ಯ ಮಾರುಕಟ್ಟೆ ರಸ್ತೆಯಲ್ಲಿನ ಅಂಗಡಿಯ ಪಾವಟಣಿಗೆಗೆ ಹಾಗೂ ರಸ್ತೆಯ ತುಂಬೆಲ್ಲಾ ಕ್ಲೋರೈಡ್ ಸಿಂಪರಣೆ ಕಾರ್ಯವನ್ನು ಪುರಸಭೆಯ ಸಿಬ್ಬಂಧಿಗಳು ಇಂದು ಲಕ್ಷ್ಮೇಶ್ವರ ನಗರದಲ್ಲಿ ಜನರು ಓಡಾಡುವ ಮುಖ್ಯ ರಸ್ತೆಯಲ್ಲಿ ಮಾರುಕಟ್ಟೆ ವ್ಯಾಪಾರಕ್ಕಾಗಿ ಬರುವಂತಹ ಪ್ರಮುಖ ಅಂಗಡಿಗಳಿಗೆ ರೋಗ ನಿರೋಧಕ ಔಷಧ ಸಿಂಪಡಿಸಿದರು.ಪುರಸಭೆಯ ಆಡಳಿತ ವರ್ಗದ ನೌಕರರಾದ ಮಂಜುನಾಥ ಮುದಗಲ್, ದೇವಪ್ಪ ನಂದೆಣ್ಣವರ ಇತರ ಪುರಸಭೆಯ ಪೌರ ಕಾಮರ್ಿಕರು ಜೊತೆಗಿದ್ದರು.