ಕ್ರೀಡೆಗಳಿಂದ ದೇಹ ಮತ್ತು ಮನಸ್ಸು ಸದೃಢ

Sports keep body and mind strong

ಕ್ರೀಡೆಗಳಿಂದ ದೇಹ ಮತ್ತು ಮನಸ್ಸು ಸದೃಢ 

ಧಾರವಾಡ 21 : ಕ್ರೀಡೆಗಳನ್ನು ಆಡುವುದರಿಂದ ದೇಹ ಮತ್ತು ಮನಸ್ಸು ಸದೃಡವಾಗಿರುತ್ತದೆ. ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸು ಇರುತ್ತದೆ ಎಂದು ಕ.ವಿ.ವಿ ಶಿಕ್ಷಣ ಮಹಾವಿದ್ಯಾಲಯದ ಪ್ರಬಾರಿ ಪ್ರಾಂಶುಪಾಲರಾದ ಪ್ರೊ. ಆರ್‌.ಎಚ್‌. ನಾಯಕ ಹೇಳಿದರು. ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಕವಿವಿ ಎನ್‌.ಎಸ್‌.ಎಸ್‌. ಕೋಶ ಕವಿವಿ ಶಿಕ್ಷಣ ಮಹಾವಿದ್ಯಾಲಯ ಆದರ್ಶ ಮಹಿಳಾ ಸಾಂಸ್ಕೃತಿಕ ಕಲಾ ಸಂಘ ಧಾರವಾಡ ಹಾಗೂ ಮಾನಸಾ ಸಂಗೀತ ಸಂಸ್ಥೆ ಧಾರವಾಡ ಮೇರಾ ಯುವ ಭಾರತ ಇವರುಗಳ ಸಹೋಗದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಧಾರವಾಡ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಈ ನವ ಯುಗದಲ್ಲಿ ಯವಜನರಲ್ಲಿ ಕ್ರೀಡೆಗಳ ಮನೋಭಾವನೆ ಕುಂಠಿತವಾಗುತ್ತಿದೆ ಇತಂಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಯುವ ಜನತೆಯಲ್ಲಿ ಕ್ರೀಡಾಸಕ್ತಿ ಬೆಳೆಸಲು ಉಪಯುಕ್ತವಾಗುತ್ತದೆ ಯುವ ಜನತೆ ಮೊಬೈಲ್ ದಾಸರಾಗದೆ ಕ್ರೀಡೆಗಳನ್ನು ಆಡುವ ಕಡೆ ಗಮನ ಹರಿಸಬೇಕು ಆಟಗಳನ್ನು ಆಡುವುದರಿಂದ ದೇಹ ಮತ್ತು ಮನಸ್ಸು ಸದೃಡವಾಗಿರುತ್ತದೆ ಎಂದು ತಿಳಿಸಿದರು.   ಧಾರವಾಡ ಕ.ವಿ.ವಿಯ ಎನ್‌.ಎಸ್‌.ಎಸ್‌. ಕೋಶದ ಯೋಜನಾಧಿಕಾರಿಗಳಾದ ಪ್ರೊ. ಎಮ್‌.ಬಿ. ದಳಪತಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಇಂದಿನ ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಯಬೇಕು ಮತ್ತು ಅದನ್ನು ಮುಂದಿನ ಜನಾಂಗಕ್ಕೆ ಪಾಸುಮಾಡುವ ಬಹುದೊಡ್ಡ ಜವಾಬ್ದಾರಿ ನಮ್ಮ ಯುವ ಜನಾಂಗದ ಮೇಲೆ ಇದೆ. ಈ ಹಿನ್ನೆಲೆಯಲ್ಲಿ ಯುವ ಮುಂದಾಳತ್ವದ ತರಬೇತಿಗಳಿರಬಹುದು ಯುವ ಸಂವಾದ ಯೋಗ ತರಬೇತಿ ನೀರು ಪರಿಸರ ಜಾಗೃತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನೆರೆಹೊರೆ ಯುವ ಸಂಸತ್ತು ಹರಘರ ತಿರಂಗಾ ಸ್ವಚ್ಛತಾ ಪಕೋಡಾದಂತಹ ಅನೇಕ ಕಾರ್ಯಕ್ರಮಗಳನ್ನು ನೆಹರು ಯುವ ಕೇಂದ್ರವು ಏರಿ​‍್ಡಸುತ್ತ ಬಂದಿದೆ. ಅದರ ಸದುಪಯೋಗವನ್ನು ಯುವಕರು ಪಡೆದುಕೊಳ್ಳಬೇಕು ಎಂದರು.  ಇದೆ ಸಂದರ್ಭದಲ್ಲಿ ಗುಂಪು ಆಟದಲ್ಲಿ ಪ್ರಥಮ ಸ್ಥಾನ ವಿಜೇತರಿಗೆ ಕ್ರೀಡಾ ಸಾಮಾಗ್ರಿಗಳನ್ನು ನೀಡಲಾಯಿತು.   ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ನೆಹರು ಯುವ ಕೇಂದ್ರದ ಆಶಯಗಳನ್ನು ವಿವರಿಸಿದರು.  ನಮ್ಮ ಯುವಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ಧರಾಗಬೇಕು ಎಂದು ತಿಳಿಸಿದರು.   ಕವಿವಿ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ನಿರ್ದೇಶಕಿ ಹಾಗೂ ಎನ್‌.ಎಸ್‌.ಎಸ್‌. ಕಾರ್ಯಕ್ರಮ ಅಧಿಕಾರಿ ಡಾ.ಭಾಗ್ಯ ಪಾಟೀಲ, ಪ್ರೊ.ಎಸ್‌.ಎಸ್‌.ಸಮ್ಮಸಗಿ, ಡಾ. ಎನ್‌.ಎಸ್‌.ತಳವಾರ ಶಿವಾಜಿ ಕಡ್ಡೆಪ್ಪನವರ ಶ್ರೀಧರ ಭಜಂತ್ರಿ ರಮೇಶ ಪಾಟೀಲ ಸುನೀಲ ದೊಡ್ಡಮನಿ ಹಾಗೂ ಕಾಲೇಜಿನ ಸಿಬಂದ್ದಿಗಳು ಉಪಸ್ಥಿತರಿದ್ದರು.