ದುಶ್ಚಟಗಳಿಂದ ದೂರ ವಿರಲು ಕ್ರೀಡೆಗಳು ಅವಶಕ್ಯ

Sports are necessary to stay away from vices

ದುಶ್ಚಟಗಳಿಂದ ದೂರ ವಿರಲು ಕ್ರೀಡೆಗಳು ಅವಶಕ್ಯ  

ಹಾವೇರಿ16: ಇಲ್ಲಿಯ ಕೆ.ಎಲ್‌.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ವಾರ್ಷಿಕ ಕ್ರೀಡಾಕೂಟದ ಏರಿ​‍್ಡಸಲಾಗಿತ್ತು ಕಾರ್ಯಕ್ರಮದ ಘನಉಪಸ್ಥಿತಿಯನ್ನು ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಜೆ. ಆರಿ​‍್ಶಂಧೆರವರು ಮಾತನಾಡಿ ಮನೋದೈಹಿಕ ಆರೋಗ್ಯ ಕ್ಕೆಕ್ರೀಡೆಗಳು ಅಗತ್ಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ವಿಜಯ ಸಾದಿಸಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.   

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ  ಯುತಎಮ್‌.ಸಿ. ಕೊಳ್ಳಿ ( ಚೇರ್ಮನ್ಸ್ನಾಮಿನಿಕೆ.ಎಲ್‌.ಇ. ಸೋಸೈಟಿಬೆಳಗಾವಿ) ಕ್ರೀಡಾ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯತೇರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸರ್ವತೋಮುಖ ಬೇಳವಣಿಗೆ ಹೊಂದಲು ಸಾಧ್ಯ ಹಾಗೂ ದುಶ್ಚಟಗಳಿಂದ ದೂರವಿರಲು ಕ್ರೀಡೆಗಳು ಅವಶ್ಯಕವಾಗಿವೆ ಎಂದು ನುಡಿದರು.  

ಉಪನ್ಯಾಸಕಿ ಅವಿಕ್ಷಾರಶ್ಮಿ ಸವಣೂರ ಸ್ವಾಗತಿಸಿದರು .ದೈಹಿಕ ಶಿಕ್ಷಣ ನಿರ್ದೇಶಕ ಕಾಂತಗುಡಗುಡಿ ಪ್ರತಿಜ್ಞಾವಿಧಿ ಬೋಧಿಸಿದರು. ಕುಮಾರಿ ಸಮಷ್ಠಿರಿತ್ತಿ ಮತ್ತು ಸಂಗಡಿಗರು ಪ್ರಾರ್ಥೀಸಿದರು ಉಪನ್ಯಾಸಕ ಬಸವರಾಜ್ಹೊಂಗಲ್ವಂದಿಸಿದರು. ಉಪನ್ಯಾಸಕ ಸಿದ್ದೇಶ್ವರ್ಹುಣಿಸಿ ಕಟ್ಟಿಮಠ ನಿರೂಪಿಸಿದರು.