ಮಕ್ಕಳೊಂದಿಗೆ ಸಮಯ ಕಳೆಯುವುದೇ ನಾವು ಅವರಿಗೆ ಕೊಡುವ ಉಡುಗೊರೆ
ಹಾವೇರಿ26 : ಮಕ್ಕಳಲ್ಲಿ ಜೀವಪರತೆ, ಜೀವನೋತ್ಸಾಹ ಮೂಡಿಸಲು ಮನೆ ಯಶಸ್ವಿಯಾದರೆ ಅದು ದೊಡ್ಡ ಗೆಲುವು, ಮಕ್ಕಳಿಗೆ ಹೇಳುವಂತೆ ನಡೆಯುವುದು ಮತ್ತು ಅವರೊಂದಿಗೆ ಸಮಯ ಕಳೆಯುವುದು ನಾವು ಅವರಿಗೆ ಕೊಡಬಹುದಾದ ಉತ್ತಮ ಉಡುಗೊರೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು. ಇಲ್ಲಿನ ಶ್ರೇಯಸ್ ಪ್ರಾಥಮಿಕ ಶಾಲೆ, ಪ್ಯಾರಾ ಮೆಡಿಕಲ್ ಕಾಲೇಜ್ ಹಾಗೂ ಮುಂಡರಗಿಯ ಎಲ್ಲಮ್ಮ ದೇವಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಗೂ ವಸತಿ ನಿಲಯ ಇವುಗಳ ಸಹಯೋಗದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ನಾವು ಸಂಪಾದನೆ, ವೃತ್ತಿ, ಕೀರ್ತಿ, ಪ್ರತಿಷ್ಠೆ ಇವುಗಳಿಗೆ ಅಗತ್ಯಕ್ಕಿಂತಲೂ ಹೆಚ್ಚು ಮಹತ್ವ ಕೊಡುತ್ತೇವೆ, ಸಿಕ್ಕಾಪಟ್ಟೆ ಸಂಪಾದಿಸುತ್ತೇವೆ. ಆದರೆ, ಯಾರಿಗಾಗಿ ಸಂಪಾದನೆ ಮಾಡುತ್ತೇವೆ ಎಂಬುದನ್ನು ಮರೆತುಬಿಡುತ್ತೇವೆ, ಆಗ ಮಕ್ಕಳು ನಮ್ಮನ್ನು ಮರೆಯುವ ಅಪಾಯ ಎದುರಾಗಬಹುದು. ತಲೆಚಟ್ಟು ಹಿಡಿಯುವ ಧಾರಾವಾಹಿಗಳು, ಅಶ್ಲೀಲತೆಯನ್ನು ಪ್ರಚೋದಿಸುವ ಸಿನಿಮಾಗಳು ಹಾಗೂ ಸಾಮಾಜಿಕ ಜಾಲತಾಣಗಳು ಮನಸ್ಸನ್ನು ವಿಕಾರಗೊಳಿಸುತ್ತವೆ. ಪೋಷಕರ ಅತಿಯಾದ ನೀರೀಕ್ಷೆ ಮಕ್ಕಳನ್ನು ಒತ್ತಡಕ್ಕೆ ದೂಡುತ್ತದೆ. ಮಕ್ಕಳ ಮೇಲೆ ಮಮತೆ ಇರಲಿ, ಆದರೆ ಮೋಹ ಬೇಡ ಎಂದು ಹನುಮಂತ ಗೌಡ ಉದಾಹರಣೆಗಳ ಮೂಲಕ ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆಯ ಯಶಸ್ಸು ಅದರ ಸಮರ್ಥ ಆಡಳಿತ ಮಂಡಳಿ ಹಾಗೂ ಸಮರಾ್ಣ ಮನೋಭಾವದ ಶಿಕ್ಷಕರನ್ನು ಅವಲಂಬಿಸಿದೆ. ಸಂಸ್ಥೆ ಕಟ್ಟುವುದು ಸುಲಭ, ಆದರೆ ನಡೆಸುವುದು ಕಷ್ಟವಾಗಿದೆ, ಇಂತಹದರಲ್ಲಿ ಡಾ. ತಿಪ್ಪೇಸ್ವಾಮಿಯವರು ಈ ಸೇವಾ ಕಾರ್ಯ ಮೆಚ್ಚುವಂತದ್ದು, ಪೋಷಕರು ಈ ಸಂಸ್ಥೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ರಾಜ್ಯ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಸಾಹಿತಿ-ಪತ್ರಕತರ್ಧ ಮಾಲತೇಶ್ ಅಂಗೂರ ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಕ್ಕಳ ಹುಟ್ಟು ಹಬ್ಬದಲ್ಲಿ ಅವರಿಗೆ ಉಡುಗೊರೆಗಳನ್ನು ನೀಡುವ ಬದಲು ಅವರ ಹುಟ್ಟು ಹಬ್ಬದ ಸವಿನೆನಪಿಗಾಗಿ ಸಸಿ ನೆಟ್ಟು ಪೋಷಿಸುವಂತೆ ತಿಳಿಸಿರಿ, ಶುದ್ಧ ಗಾಳಿಯನ್ನು ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ, ಸಕಲ ಜೀವರಾಶಿಗಳಿಗೂ ಬದುಕು ಇದೆ, ಗಿಡ ಮರ ಪಕ್ಷಿಪ್ರಾಣಿಗಳನ್ನು ಮಕ್ಕಳು ಪ್ರೀತಿಸಬೇಕು, ಕಾಡು ಉಳಿದರೆ ನಾಡು ಎಂದು ಹೇಳಿದರು. ನೇತೃ ತಜ್ಞ ಡಾ. ಶ್ರವಣ ಪಂಡಿತ್ ಹಾಗೂ ಕೃಷಿ ಜಂಟಿ ನಿರ್ದೇಶಕರ ಕಚೇರಿಯ ಅಧಿಕ್ಷಕ ಸಂಗಮೇಶ್ ಚಕ್ರಶಾಲಿ ದತ್ತಿದಾನೆಗಳನ್ನು ಗೌರವಿಸಲಾಯಿತು. ಶ್ರೇಯಸ್ ಶಿಕ್ಷಣ ಸಮಿತಿಯ ಅಧ್ಯಕ್ಷ ಡಾ ತಿಪ್ಪೇಸ್ವಾಮಿ ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಆದ್ಯತೆ ನೀಡಲಾಗಿದೆ. ನುರಿತ ಶಿಕ್ಷಕ ಸಿಬ್ಬಂದಿ ಇದ್ದು ವೈಯಕ್ತಿಕ ಮಕ್ಕಳ ಕಾಳಜಿ ವಹಿಸಲಾಗುವುದು, ನಿಮ್ಮ ಸಹಕಾರ ಆಗುತ್ತೆ ಎಂದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು, ಸಮಿತಿಯ ಕಾರ್ಯದರ್ಶಿ ಸೌಭಾಗ್ಯಲಕ್ಷ್ಮಿ ಹೊಸಮನಿ, ನಿವೃತ್ತ ಉಪನ್ಯಾಸಕರಾದ ಬಿ.ಬಿ.ಕೂರಗುಂದ ಹಾಗೂ ಎನ್.ವಿ. ಪಾಟೀಲ್, ಪ್ರಧಾನ ಗುರುಮಾತೆ ಸೌಭಾಗ್ಯ ಜತ್ತಿ ವೇದಿಕೆಯಲ್ಲಿದ್ದರು. ಸಂಕಮ್ಮ,ಯಶೋಧ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕಿ ಆಶಾ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಎಸ್.ಆರ್. ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ರೇಣುಕಾ ಪ್ರಸಾದ್ ವರದಿ ವಾಚಿಸಿದರು, ಸುಷ್ಮಾ,ಚೇತನ ನಿರೂಪಿಸಿದರು. ಪಾರ್ವತಿ ಮೇಡ್ಲೆರಿ ವಂದಿಸಿದರು, ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು