ಸ್ವಾಭಿಮಾನಿ ಕನ್ನಡಿಗರ ಜಾತ್ರೆಯಲ್ಲಿ ನುಡಿನಮನ

ಲೋಕದರ್ಶನ ವರದಿ

ಗಂಗಾವತಿ 27: 63ನೇ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ ಸೋಮವಾರ ವೀರ ಕನ್ನಡಿಗರ ಸಂಘಟನೆ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಕನ್ನಡಿಗರ ಜಾತ್ರೆ ನುಡಿನಮನ ಕಾರ್ಯಕ್ರಮವಾಗಿ ಪರಿವರ್ತನೆಗೊಂಡಿತು. ಸಂಘಟನೆ ರಾಜ್ಯ ಅಧ್ಯಕ್ಷ ಅಜರ್ುನ ನಾಯಕ್ ಬಹು ಅದ್ದೂರಿಯಿಂದ ಹಮ್ಮಿಕೊಂಡಿದ್ದರು. ಕೇಂದ್ರದ ಮಾಜಿ ಸಚಿವರಾದ ಜಾಫರ್ ಷರೀಫ್, ಅಂಬರೀಶ್ ನಿಧನದ ಹಿನ್ನಲೆಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವ ನಿಧರ್ಾರ ಕೈಗೊಂಡರು.

ಚಿತ್ರನಟ ಅಂಬರೀಶ್ರವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ನುಡಿನಮನ ಸಲ್ಲಿಸಲಾಯಿತು.

ಸಾನಿಧ್ಯ ವಹಿಸಿದ್ದ  ಭುವನೇಶ್ವರಯ್ಯತಾತ ಸುಳೇಕಲ್ ಬೃಹನ್ಮಠ ಇವರು ಮಾತನಾಡಿ, ವೀರಕನ್ನಡಿಗರ ಕರವೇ ಸಂಘಟನೆಯು ರಾಜ್ಯದಲ್ಲಿ ಶೋಕಾಚರಣೆ ನಿಮಿತ್ಯ ನುಡಿನಮನ ಕಾರ್ಯಕ್ರಮ ಮಾಡಿರುವುದಕ್ಕೆ ಶ್ಲಾಘಿಸಿ, ನಟ ಅಂಬರೀಶ್ ಹಾಗೂ ಮಾಜಿ ಕೇಂದ್ರ ಸಚಿವ ಜಾಫರ್ ಶರೀಪ್ರವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

ಮಾಜಿ ಸಂಸದರಾದ  ಶಿವರಾಮೇಗೌಡ ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಅಂಬರೀಶ್ ನಿಧನದಿಂದ ಕನ್ನಡ ಸಾಹಿತ್ಯ, ಕಲೆ ಹಾಗೂ ಚಿತ್ರರಂಗಕ್ಕೆ ಅಪಾರ ನಷ್ಟವುಂಟಾಗಿದೆ. ವೀರ ಕನ್ನಡಿಗರ ಕನರ್ಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಕನ್ನಡಿಗರ ಜಾತ್ರೆ ಕಾರ್ಯಕ್ರಮವನ್ನು ಬೃಹತ್ ಪ್ರಮಾಣದಲ್ಲಿ ಅದ್ಧೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ನಟ ಅಂಬರೀಶ್ ಹಾಗೂ ಮಾಜಿ ಕೇಂದ್ರ ಸಚಿವರಾದ ಜಾಫರ್ ಶರೀಫ್ರವರ ನಿಧನದಿಂದ ಈ ಕಾರ್ಯಕ್ರಮವನ್ನು ರಾಜ್ಯದಲ್ಲಿ ಶೋಕಾಚರಣೆ ನಿಮಿತ್ಯವಾಗಿ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮವನ್ನಾಗಿ ಪರಿವತರ್ಿಸಿದ್ದು, ಸಂಘಟನೆಗೆ ಹೆಮ್ಮೆ ತರುವಂತಹ ವಿಷಯವಾಗಿದೆ ಎಂದು ತಿಳಿಸಿದರು.

ಉದ್ಘಾಟಕರಾಗಿ ಭಾಗವಹಿಸಿದ್ದ ಚಲನಚತ್ರ ಸಾಹಿತಿ, ನಟ, ನಿದರ್ೇಶಕ, ನಿಮರ್ಾಪಕರಾದ ಡಾ. ರಾಧಾಕೃಷ್ಣ ಪಲ್ಲಕ್ಕಿಯವರು ಮಾತನಾಡಿ ನಾಡಿನ ಕನರ್ಾಟಕ ರಾಜ್ಯೋತ್ಸವದ ವಿಜೃಂಭಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ವೀರಕನ್ನಡಿಗರ ಕರವೇ ಸಂಘಟನೆಯನ್ನು ಶ್ಲಾಘಿಸಿ, ಇಂತಹ ಸಂದರ್ಭದಲ್ಲಿ ನಟ ಅಂಬರೀಶ್ ಹಾಗೂ ಮಾಜಿ ಕೇಂದ್ರ ಸಚಿವರಾದ ಜಾಫರ್ ಶರೀಫ್ರವರ ನಿಧನ ತುಂಬಾ ನೋವುಂಟು ಮಾಡಿದೆ. ಸಂಘಟನೆಯು ಇಂತಹ ಸಂದರ್ಭದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಚರಿಸುವುದನ್ನು ಸ್ಥಗಿತಗೊಳಿಸಿ, ನಿಧನರಾದ ಸನ್ಮಾನ್ಯರಿಗೆ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮವನ್ನಾಗಿ ಪರಿವತರ್ಿಸಿರುವುದು ಸಂಘಟನೆಗೆ ಗೌರವ ತಂದುಕೊಟ್ಟಂತಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ತಾಲೂಕು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಜೋಗದ ನಾರಾಯಣಪ್ಪ ನಾಯಕ, ಶಾಮಿದ್ ಮನಿಯಾರ್,  ಲಲಿತಾರಾಣಿ ಶ್ರೀರಂಗದೇವರಾಯಲು, ದೊಡ್ಡಪ್ಪ ದೇಸಾಯಿ, ಜೋಗದ ದುರುಗಪ್ಪ ನಾಯಕ, ಸಾಹಿತಿಗಳಾದ ಶರಣಬಸಪ್ಪ ಕೋಲ್ಕಾರ್, ತಿಪ್ಪೇಸ್ವಾಮಿ, ಸಂಘಟನೆಯ ತಾಲೂಕು ಅಧ್ಯಕ್ಷರಾದ ಮಂಜುನಾಥ ಕಳ್ಳಿಮನಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿಯಾದ ಹುಸೇನಪ್ಪ ಬಂಡೆನಾಯಕ, ಜಿಲ್ಲಾ ಯುವಘಟಕ ಅಧ್ಯಕ್ಷರಾದ ಪರಶುರಾಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.