ಅಬ್ಬಿಗೇರಿಯಲ್ಲಿ ಅಂದತ್ವ ಉಳ್ಳ ಅಧಿಕಾರಿಗಳ ವಿಶೇಷ ತರಬೇತಿ ಕಾರ್ಯಕ್ರಮ
ಅಬ್ಬಿಗೇರಿ 03 ; ಗ್ರಾಮ ಪಂಚಾಯತಿ ಯಲ್ಲಿ ಕೆಲಸ ನಿರ್ವಹಣೆ ಮಾಡುವುದು ನಮ್ಮ ನಿಮ್ಮೆಲ್ಲರಿಗೆ ಸಿಕ್ಕ ಸದವಕಾಶ, ಗ್ರಾಮದ ಅಭಿವೃದ್ಧಿ ಗಾಗಿ ನಮ್ಮ ನಿರಂತರ ಪರಿಶ್ರಮವನ್ನು ಹಾಕಿ ಗ್ರಾಮದ ಅಭಿವೃದ್ಧಿಯ ಕನಸ್ಸು ಕಾಣಬೇಕು ಅಂದಾಗ ಮಾತ್ರ ಒಬ್ಬ ಗ್ರಾಮ ಪಂಚಾಯತಿ ನೌಕರರು ಜನ ಸಾಮಾನ್ಯರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಅಡಿಯಲ್ಲಿ ಬರುವ ಯೋಜನೆಗಳ ಮಾಹಪೂರವನ್ನು ಹರಿಸಬಹುದು ಅಂತಾ ಅಬ್ಬಿಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ ಅಭಿಪ್ರಾಯ ವ್ಯಕ್ತಪಡಿಸಿದರು..ಅಬ್ಬಿಗೇರಿ ಗ್ರಾಮ ಪಂಚಾಯತಿಯಲ್ಲಿ ಇಂದು ಅಂದತ್ವ ಉಳ್ಳ ಅಧಿಕಾರಿಗಳ/ ಸಿಬ್ಬಂದಿ ಗಳಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು, ಈ ಭಾಗವಾಗಿ ಅಬ್ಬಿಗೇರಿ ಗ್ರಾಮಕ್ಕೆ ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ಯ ಸಂಸ್ಥೆ ಪ್ರಾದೇಶಿಕ ಕೇಂದ್ರ ರಾಯಪೂರ- ಧಾರವಾಡ ಇವರಿಂದ ಕ್ಷೇತ್ರ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವಿಷಯವಾಗಿ ಮಾತನಾಡಿದ ಅಬ್ಬಿಗೇರಿ ಗ್ರಾಮ ಪಂಚಾಯತಿ ಪಿಡಿಓ ತರಬೇತಿ ಪಡೆಯಲು ಆಗಮಿಸಿದ ನೌಕರರಿಗೆ ಎಮ್.ಜಿ.ಎನ್ ಆರ್.ಇ.ಜಿ ಯೋಜನೆಯಡಿ ಕಾಮಗಾರಿಗಳ ಕಡತಗಳ ಪರೀಶಿಲನೆ ಸೇರಿದಂತೆ ಕಾಮಗಾರಿಗಳ ವಿಕ್ಷಣೆ ಮಾಡಲಾಯಿತು.ಗ್ರಾಮದ ಸರಕಾರಿ ಪ್ರೌಢ ಶಾಲೆಯ ಕಂಪೌಂಡ, ಸರಕಾರಿ ಪ್ರೌಢ ಶಾಲೆಯ ಬಾಸ್ಕೆಟ್ ಬಾಲ್ ಗ್ರೌಂಡ, ಗ್ರಾಮದ 1ನೇ ವಾರ್ಡಿನ ಲಕ್ಷ್ಮೀ ಗುಡಿ ಹತ್ತಿರ ಸಿ.ಸಿ ರಸ್ತೆ ಹಾಗೂ ಕಡತಗಳ ಬಗ್ಗೆ ತರಬೇತಿ ನೀಡಲಾಯಿತು. ಜೊತಗೆ ಅಬ್ಬಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯ ವಿಕ್ಷಣೆ ಹಾಗೂ ಓದುವ ಬೇಳಕು ವಿಚಾರವಾಗಿ ಮಾರ್ಗದರ್ಶನದ ಕುರಿತು ಸಮಗ್ರವಾಗಿ ಚರ್ಚೆ ನಡೆಸಿದರು ಹಾಗೂ ವಿಷಯಗಳ ಮನದಟ್ಟು ಮಾಡಲಾಯಿತು. ಅಬ್ಬಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಕೂಸಿನ ಮನೆ ವಿಕ್ಷಣೆ ನಡೆಸಿದ ಬಳಿಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮನೆ - ಮನೆಗೆ ತೆರಳಿ ಪ್ರಾಯೋಗಿಕ ವಾಗಿ ತೆರಿಗೆ ವಸೂಲಿ ಮಾಡುವುದರ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು....ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಲಲಿತಾ ರಾಠೋಡ,ಉಪಾಧ್ಯಕ್ಷರಾದ ಶ್ರೀಮತಿ ಅಕ್ಕಮ್ಮ ಡೊಳ್ಳಿನ ಸದಸ್ಯರಾದ ಬಸಪ್ಪ ಕಮ್ಮಾರ,ಶಂಕ್ರ್ಪ ಇಟಗಿ,ದೇವಪ್ಪ ಜಂತ್ಲಿ,ಶ್ರೀಮತಿ ಮಂಜುಳಾ ತಳವಾರ,ಶ್ರೀಮತಿ ರೇಖಾ ಅವರೆಡ್ಡಿ,ಶ್ರೀಮತಿ ವಿಜಯಲಕ್ಷ್ಮಿ ಬಸವರೆಡ್ಡೇರ,ಶ್ರೀಮತಿ ರೇಣಮ್ಮ ಹಳ್ಳಿ,ಶ್ರೀಮತಿ ರೇಖಾ ವೀರಾಪೂರ,ಶ್ರೀಮತಿ ಮಾಳಶೆಟ್ಟಿ,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಗ್ರಾಮದ ಗ್ರಂಥಪಾಲಕರಾದ ವಿರೇಶ ಬಳಿಗೇರ,ಗ್ರಾಮ ಪಂಚಾಯತ ಸರ್ವ ಸಿಬ್ಬಂದಿ ವರ್ಗ,ಖಿಂಇ,ಃಈಖಿ,ಉಏಒ,ಕಾಯಕ ಬಂಧುಗಳು ಸೇರಿದಂತೆ ತರಬೇತಿದಾರರು ಹಾಜರಿದ್ದರು.