ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಕ ಮಾಲಿಕೆ ಕಾರ್ಯಕ್ರಮ

Special lecturer program for students


ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಕ ಮಾಲಿಕೆ ಕಾರ್ಯಕ್ರಮ 

ಗದಗ 22: ಉನ್ನತ ಶಿಕ್ಷಣದಲ್ಲಿ ಕರ್ನಾಟಕ ಸರ್ಕಾರದ ಮಹಾಕಾಂಕ್ಷಿ ಯೋಜನೆಯಾದ “ಪ್ರೇರಣಾ ಮೆಂಟರ್ ಶಿಪ್ “  ಕಾರ್ಯಕ್ರಮದಡಿ ಸರ್ಕಾರಿ ಪಾಲಿಟೆಕ್ನಿಕ್, ಗದಗ ಸಂಸ್ಥೆಯಲ್ಲಿ ಬುಧವಾರ  ವಿಷಯ ತಜ್ಞರಿಂದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಕ ಮಾಲಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ತಜ್ಞರಾದ ಹುಬ್ಬಳ್ಳಿಯ ಪ್ರೋಫೆಸರ್ ಜಿ. ವಿ. ಡೋಣುರಮಠ ಇವರು ಸಾಫ್ಟ್‌ ಸ್ಕಿಲ್ಸ್‌  ಹಾಗೂ ವ್ಯಕ್ತಿತ್ವ ವಿಕಸನದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಸದರಿ ಸರ್ಕಾರದ “ಪ್ರೇರಣಾ ಮೆಂಟರ್‌ಶಿಪ್ “ ಕಾರ್ಯಕ್ರಮದಡಿ ಪಠ್ಯವಿಷಯಗಳ ಜೊತೆಗೆ ಇತರೆ ವಿವಿಧ ಉಪಯುಕ್ತ ವಿಷಯಗಳನ್ನು ಅರಿತುಕೊಳ್ಳಲು ಸದರಿ ಯೋಜನೆಯು ತುಂಬಾ ಉಪಯೋಗವಾಗಿದೆ ಎಂದು ವಿದ್ಯಾರ್ಥಿಗಳು ಮೆಚ್ಚುಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಭರಮಪ್ಪ ಬಡಪ್ಳವರ ಇವರು ವಹಿಸಿದ್ದರು. 

ಕಾರ್ಯಕ್ರಮದಲ್ಲಿ ವಿಭಾಗಾಧಿಕಾರಿ ಜೈನಾಬಿ, ಕೊಟ್ರಗೌಡ, ಶಿವಾನಂದ ಪೂಜಾರ, ಮಂಗಳಗೌರಮ್ಮ ಶಿವಸಿಂಪಿಗೇರ ಹಾಗೂ ಎಲ್ಲ ಬೋಧಕ ಸಿಬ್ಬಂದಿಗಳು ಹಾಜರಿದ್ದರು.  ಜಯಲಕ್ಷ್ಮೀ ಹರ್ಲಾಪೂರ ಸ್ವಾಗತಿಸಿದರು, ವಿದ್ಯಾಶ್ರೀ ಹೂಗಾರ ವಂದಿಸಿದರು.