ಸಣಾಪುರ ಉದ್ಬವ ವೀರಭಧ್ರೇಶ್ವರನಿಗೆ ವಿಶೇಷ ಪೂಜೆ

Special Puja to Sanapura Udbava Virbhadhreshwar

ಸಣಾಪುರ ಉದ್ಬವ ವೀರಭಧ್ರೇಶ್ವರನಿಗೆ ವಿಶೇಷ ಪೂಜೆ  

ಕಂಪ್ಲಿ 30: ಅವರಾತ್ರಿ (ಮೌನಿ) ಅಮವಾಸ್ಯೆ ಪ್ರಯುಕ್ತವಾಗಿ ಇಂದು ಕಂಪ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಿರುವುದು ಕಂಡು ಬಂತು.ಜೊತೆಗೆ ಕಂಪ್ಲಿ ತಾಲ್ಲೂಕಿನ ಸಣಾಪುರ ಗ್ರಾಮದಲ್ಲಿ ಲಿಂಗರೂಪದಲ್ಲಿ ಉದ್ಬವಿಸಿರುವ ಶ್ರೀ ಉದ್ಬವ ವೀರಭದ್ರೇಶ್ವರನಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿದರು. ಬೆಳಿಗ್ಗೆ ಲಿಂಗರೂಪಿ ಶ್ರೀ ಉದ್ಬವ ವೀರಭದ್ರೇಶ್ವರನಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿದ ನಂತರ ಚಿನ್ನಾಭರಣ ಹಾಗು ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿಯನ್ನು ಸಲ್ಲಿಸಿದರು. ನಂತರ ಪ್ರಸಾದ ವಿತರಣೆ ಜರುಗಿತು. ಅಮಾವಾಸ್ಯೆ ಪ್ರಯುಕ್ತ ಶ್ರೀ ವೀರಭದ್ರೇಶ್ವರನ ದರ್ಶನಕ್ಕೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದ್ದರು. ಇನ್ನು ಕೆಲವರು ಪಾದಯಾತ್ರೆ ಮೂಲಕ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದ ಆವರಣದಲ್ಲಿ ಪ್ರತಿ ಅಮಾವಾಸ್ಯೆಯ ದಿನ ಹರಕೆ ಹೊತ್ತ ಭಕ್ತರು ಅನ್ನಸಂತರೆ​‍್ಣ ನಡೆಸುತ್ತಾರೆ. ಜೊತೆಗೆ ಅಮಾವಾಸ್ಯೆಯ ದಿನ ರಾತ್ರಿ ದೇವಸ್ಥಾನದ ಪ್ರಾಂಗಣದಲ್ಲಿ ಕಿರು ರಥೋತ್ಸವ ಹಾಗೂ ಪ್ರಸಾದ ವಿತರಣೆ ನಡೆಯುತ್ತದೆ. ಜ.003: ಕಂಪ್ಲಿ ತಾಲ್ಲೂಕಿನ ಸಣಾಪುರ ಗ್ರಾಮದಲ್ಲಿರುವ ಶ್ರೀ ಉದ್ಮವ ವೀರಭದ್ರೇಶ್ವರನಿಗೆ ಅವರಾತ್ರಿ (ಮೌನಿ) ಅಮಾವಾಸ್ಯೆ ಪ್ರಯುಕ್ತ ವೀಶೇಷ ಅಲಂಕಾರ ಮಾಡಿ ಪೂಜಿಸಿದರು.