ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾಗೂ ಅಂಗವಿಕಲ ಒಕ್ಕೂಟದ ಸಾಮಾಜಿಕ ಕಾರ್ಯಕರ್ತೆ ಸ್ಥಳಕ್ಕೆ ಅನ್ಯಾಯ
ಹಾವೇರಿ 02: ನಗರದ ಬಸವೇಶ್ವರ ನಗರದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯವರ ಅನುದಾನದ ಕಲ್ಮೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ಕಲ್ಮೇಶ್ವರ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಆಶ್ರಯ ಪಡೆದಯುತ್ತಿದ ವಿಕಲಚೇತನ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನು ಸಂಸ್ಥೆಗೆ ಅನುದಾನದ ನೆಪ ಹೇಳಿ ಏಕಾಏಕಿ ಹೊರಗಟ್ಟುವ ಕಾರ್ಯಕ್ಕೆ ಮುಂದಾಗಿರುವ ಸುದ್ದಿ ತಿಳಿದ ತಕ್ಷಣ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾಗೂ ಅಂಗವಿಕಲ ಒಕ್ಕೂಟದ ಸಾಮಾಜಿಕ ಕಾರ್ಯಕರ್ತೆ ಸ್ಥಳಕ್ಕೆ ದಾವಿಸಿ ಬೆನ್ನೆಲುಬಾಗಿ ನಿತ್ತು ಅನ್ಯಾಯವನ್ನು ಖಂಡಿಸಿದರು.
ವಿಕಲಚೇತನ ವಿದ್ಯಾರ್ಥಿನಿ ಹೇಮಾ ಪ್ರಕಾಶ ಮಾತನಾಡಿ ಎಂಟು ವರ್ಷಗಳಿಂದ ಆಶ್ರಯ ಪಡೆದು ಪಿಯುಸಿ, ಪದವಿ ಮುಗಿಸಿ ಮಾಸ್ಟರ್ ಪದವಿ ಮುಂದುವರೆಸುತ್ತಿದ್ದೇನೆ ನೂರಾರು ಕನಸುಗಳನ್ನು ಕಟ್ಟಿಕೊಂಡು ನನ್ನ ಕಾಲಮೇಲೆ ನಾನೆ ನಿತ್ತು ಘನತೆ ಜೀವನವನ್ನು ರೂಪಿಸಿಕೊಳ್ಳಬೇಕೆಂಬ ಆಸೆಗೆ ಆಶ್ರಯ ಬೇಕಿದೆ ಎಂದರು.
ಹತ್ತಾರು ವರ್ಷಗಳಿಂದ ಆಶ್ರಯ ನೀಡಿ ಅನೇಕ ವಿಕಲಚೇತನ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಶಿಕ್ಷಣ, ಉದ್ಯೋಗ ಸೇರಿದಂತೆ ಸ್ವತಂತ್ರರಾಗಿ ಘನತೆ ಬದುಕು ಕಟ್ಟಿಕೊಳ್ಳಲು ಸಹಾಯಕಾರಿಯಾಗಿದ್ದ ಕಲ್ಮೇಶ್ವರ ವಿದ್ಯಾ ಸಂಸ್ಥೆಯು ಸರ್ಕಾರದ ಯಾವುದೇ ಆದೇಶಗಳಿಲ್ಲದೆ ಏಕಾಏಕಿ ವಸತಿ ನಿಲಯದಲ್ಲಿದ್ದ ಐದು ಜನ ವಿಕಲಚೇತನರನ್ನು ಹೊರದೂಡುವ ಕಾರ್ಯವನ್ನು ಎಸ್‌ಎಫ್‌ಐ ಜಿಲ್ಲಾ ಸಮಿತಿಯು ಹಾಗೂ ಅಂಗವಿಕಲರ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ ಎಂದು ಅಂಗವಿಕಲ ಒಕ್ಕೂಟದ ಸಾಮಾಜಿಕ ಕಾರ್ಯಕರ್ತೆ ಹಸೀನಾ ಹೆಡಿಯಾಲ ಹಾಗೂ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಹೇಳಿದರು.
ಮಾಧ್ಯಮದವರು ವರದಿ ಮಾಡುವ ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಶ್ರೀನಿವಾಸ ಅಲದರ್ತಿ ಅವರು ಕಲ್ಮೇಶ್ವರ ಸಂಸ್ಥೆ ಮುಖ್ಯಸ್ಥ ದಯಾನಂದ ಅವರಿಗೆ ದೂರವಾಣಿ ಸಂಪರ್ಕ ಮಾಡಿ ಯಾವುದೇ ಕಾರಣಕ್ಕೂ ವಿಕಲಚೇತನರನ್ನು ಹೊರಗಡೆ ಕಳಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ತಾವೇ ಸ್ವತಃ ಗುಂಟ್ಟುಮುಟ್ಟೆಗಳನ್ನು ಒಳಗಡೆ ಇರಿಸಿದರು. ವಿಕಲಚೇತನರಿಗೆ ಯಾವುದೇ ತೊಂದರೆ ನೀಡಿದಂತೆ ಕ್ರಮಕೈಗೊಳಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ವಿಕಲಚೇತನ ವಿದ್ಯಾರ್ಥಿನಿ ಸುಮಾ ದೊಡ್ಡಗೌಡರ, ಯಲ್ಲಮ್ಮ ವಾಲ್ಮೀಕಿ, ಲಲಿತಾ ಲಮಾಣಿ, ಗಿರಿಜಾ ಗೌಳಿ ಉಪಸ್ಥಿತರಿದ್ದರು.