ಸಾಮೂಹಿಕ ಮದುವೆಯಿಂದ ಸಾಮಾಜಿಕ ಸಮಾನತೆ-ಶ್ರೀಕಾಂತ ದುಂಡಿಗೌಡ್ರ
ಶಿಗ್ಗಾವಿ 31 : ಸಾಮೂಹಿಕ ವಿವಾಹದಿಂದ ವಿವಿಧ ಸಮುದಾಯಗಳು, ಕುಟುಂಬಗಳು ಮತ್ತು ಗ್ರಾಮಸ್ಥರನ್ನು ಒಂದುಗೂಡಿಸುವ ಪ್ರಕ್ರಿಯೆ ಎಂದು ಭಾರತ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ತಾಲೂಕಿನ ಬನ್ನೂರ ಗ್ರಾಮದಲ್ಲಿ ಭಾರತ ಸೇವಾ ಸಂಸ್ಥೆ ಬನ್ನೂರ (ರಿ) ವತಿಯಿಂದ 11 ನೇ ವರ್ಷದ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇದರಿಂದ ಹೆಚ್ಚಿನ ಕರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಯಾವುದೇ ಮೇಲು ಕೀಳೆಂಬ ಭಾವನೆಯಿಲ್ಲದೆ ಎಲ್ಲ ಜಾತಿಯ ಹಾಗೂ ಎಲ್ಲ ಧರ್ಮೀಯರಿಗೆ ಸರಿ ಸಮಾನರೆನ್ನುವ ಮನೋಭಾವನೆ ಮೂಡಿಸುವಂತಹ ಕಲ್ಪನೆ ಸರ್ವ ಧರ್ಮ ಸಾಮೂಹಿಕ ವಿವಾಹದಲ್ಲಿ ಮೂಡಿ ಬಂದಿದೆ ಎಂದರು.
ಗಂಜಿಗಟ್ಟಿ ಚರಮೂರ್ತೇಶ್ವರ ಶ್ರೀಗಳುಆರ್ಶಿವದಿಸಿತಾಲೂಕಿನಲ್ಲಿ ಎಲ್ಲ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಶಿಗ್ಗಾವಿ ಮತ್ತು ಸವಣೂರ ತಾಲೂಕುಗಳಲ್ಲಿ ಮಾದರಿಯಾಗುವಂತಹ ಕಾರ್ಯಗಳನ್ನು ಸಂಸ್ಥೆ ಮಾಡುತ್ತ ಬಂದಿದ್ದು ಶ್ಲಾಘನೀಯ ಎಂದರು. ಶಿಗ್ಗಾವಿ ವಿರಕ್ತಮಠ ಸಂಗನಬಸವ ಶ್ರೀಗಳು ಆರ್ಶಿವದಿಸಿ ಭಾರತ ಸೇವಾ ಸಂಸ್ಥೆ ಸತತವಾಗಿ 11 ವರ್ಷಗಳ ಕಾಲ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯವನ್ನು ಬನ್ನೂರಿನಲ್ಲಿ ಮಾಡಿಕೊಂಡು ಬಂದಿರುವುದು ಮಾದರಿಯಾಗಿದೆ ಇಂತಹ ಮಾದರಿ ಕಾರ್ಯಕ್ರಮಗಳು ಇನ್ನಷ್ಟು ಜರುಗಲಿ ಎಂದರು. ಬಂಕಾಪೂರ ಅರಳೆಲೆ ಹಿರೇಮಠ ರೇವಣಸಿದ್ದೇಶ್ವರ ಶ್ರೀಗಳು ಆರ್ಶಿವದಿಸಿ ತಾಲ್ಲೂಕಿನಲ್ಲಿ ಅನೇಕ ವರ್ಷಗಳಿಂದ ದೇಶದ ಹೆಸರಿನಲ್ಲಿ ಸಂಸ್ಥೆಯನ್ನು ಕಟ್ಟಿಕೊಂಡು ಎಲ್ಲ ವರ್ಗಗಳ ಜನರಿಗೆ ತಮ್ಮ ದುಡಿಮೆ ಹಣದಲ್ಲಿ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಕಾರ್ಯ ನಿಮ್ಮ ಸಮಾಜ ಸೇವೆ ನಿರಂತರವಾಗಿರಲಿ ಎಂದರು.
ಹಿರೇಮಣಕಟ್ಟಿ ಶ್ರೀಗಳು ಆರ್ಶಿವದಿಸಿ ಭಾರತ ಸೇವಾ ಸಂಸ್ಥೆ ಸಂಸ್ಥೆಯ ಸೇವೆ ಅಪಾರವಾದದ್ದು ಕೇವಲ ಒಂದು ಗ್ರಾಮಕ್ಕೆ ಸೀಮಿತವಾಗದೆ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೂ ತಮ್ಮ ಸೇವೆಯನ್ನು ನಾನಾ ರೂಪದಲ್ಲಿ ಬಹಳ ವರ್ಷಗಳಿಂದ ಸಲ್ಲಿಸುತ್ತಾ ಬಂದಿದೆ ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಎಂದರು.ಈ ಸಂದರ್ಭದಲ್ಲಿ ಶಿವಾನಂದಯ್ಯ ಹಿರೇಮಠ,ಮಹಾಲಿಂಗಯ್ಯ ಚಿಕ್ಕಮಠ, ಮುಪ್ಪಯ್ಯ ಹಿರೇಮಠ, ಕುಬೇರಗೌಡ ಪೋಲಿಸಗೌಡ್ರ, ಶಂಭನಗೌಡ ಪೊಲೀಸಗೌಡ್ರ,ಟಾಕನಗೌಡ ಪಾಟೀಲ, ವೀರನಗೌಡ ಹೊನ್ನಾಗೌಡ್ರ,ಶಂಕರಗೌಡ ಪೋಲಿಸಗೌಡ್ರ,ದೇವಪ್ಪ ಬಡಿಗೇರ, ಧರ್ಮಪ್ಪ ಹೊನ್ನಪ್ಪನವರ, ವೀರನಗೌಡ ದುಂಡಿಗೌಡ್ರ,ಎಫ್.ಪೋಲಿಸಗೌಡ್ರ,ಎನ್ ಸಿದ್ದಣ್ಣವರ, ನೇಮನಗೌಡ ಪೋಲಿಸಗೌಡ್ರ, ನಿಸ್ಸಿಮಪ್ಪ ಗಾಣಿಗೇರ,ಗುರುಬಸಪ್ಪ ಹಡಪದ, ವೀರಭದ್ರಗೌಡ ಪೋಲಿಸಗೌಡ್ರ, ಬಸವರಾಜ ಲಂಗೋಟಿ, ವೀರಭದ್ರ್ಪ ಆಗಡಿ ,ರುದ್ರಗೌಡ ಪೋಲಿಸಗೌಡ್ರ ಸೇರಿದಂತೆ ಬಸಲಿಂಗಪ್ಪ ನರಗುಂದ, ಅರುಣ ಹುಡೇದಗೌಡ್ರ, ರವಿ ಮಡಿವಾಳರ, ನವೀನ ಸವಣೂರ, ವಿಶ್ವನಾಥ ಗಾಣಿಗೇರ, ನಾಗರಾಜ ಉಪಸ್ಥಿತರಿದ್ದರು.