ಲೋಕದರ್ಶನ ವರದಿ
ವಿಜಯಪುರ: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ಬ್ಯಾಂಕಿನ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ನಿರೀಕ್ಷೆಯಂತೆ ಆರೋಗ್ಯ ಸಚಿವ ಶಿವಾನಂದ ಪಾಟೀಲ, ಉಪಾಧ್ಯಕ್ಷರಾಗಿ ರಾಜಶೇಖರ ಗುಡದಿನ್ನಿ ಅವರು ಅವಿರೋಧವಾಗಿ ಆಯ್ಕೆಯಾದರು.
ಶಿವಾನಂದ ಪಾಟೀಲ ಅವರು 1997 ರ ಜುಲೈ 12 ರಿಂದ ಇಲ್ಲಿಯವರೆಗೆ ಬ್ಯಾಂಕಿನ ಅಧ್ಯಕ್ಷರಾಗಿದ್ದು, ಬ್ಯಾಂಕಿನ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದಾರೆ. ಆರ್.ಬಿ.ಗುಡದಿನ್ನಿ ಅವರು 1997 ರಿಂದ ಬ್ಯಾಂಕಿನ ನಿದರ್ೇಶಕರಾಗಿದ್ದು, 2008 ರಿಂದ 13 ರವರೆಗೆ ಐದು ವರ್ಷ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಈಗ ಮುಂದಿನ ಅವಧಿಗೆ ಮತ್ತೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಚಿವ ಶಿವಾನಂದ ಪಾಟೀಲ ಅವರು ಸತತ 9 ನೇ ಅವಧಿಗೂ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದರು. ಕಳೆದ ಅಕ್ಟೋಬರ 31 ರಂದು 2018-23 ನೇ ಸಾಲಿಗೆ ಬ್ಯಾಕಿನ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, 11 ಸ್ಥಾನಗಳ ಪೈಕಿ ಹತ್ತು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಒಂದು ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದಿದೆ. ಆಡಳಿತ ಮಂಡಳಿಯ ಹತ್ತು ನಿದರ್ೇಶಕರ ಅವಿರೋಧ ಆಯ್ಕೆ ಕೂಡ ಬ್ಯಾಂಕಿನ ಇತಿಹಾಸದಲ್ಲಿ ಒಂದು ದಾಖಲೆಯಾಯಿತು.
ಶಿವಾನಂದ ಪಾಟೀಲ ಅವರು 1997 ರಿಂದ 2018 ರವರೆಗೆ 21 ವರ್ಷ ಸತತವಾಗಿ ಅಧ್ಯಕ್ಷರಾಗಿದ್ದು, ಈ ಅವಧಿಯಲ್ಲಿ ಒಟ್ಟು ಎಂಟು ಬಾರಿ ಅಧ್ಯಕ್ಷರ ಚುನಾವಣೆೆ ನಡೆದಿದ್ದು, ಇಂದು ನಡೆದ ಅಧ್ಯಕ್ಷರ ಚುನಾವಣೆ ಒಂಭತ್ತನೆಯದಾಗಿದೆ. ಬ್ಯಾಂಕು ಸ್ಥಾಪನೆಯಿಂದ ಇದುವರೆಗೆ ಒಟ್ಟು 13 ಜನ ಮಹನೀಯರು ಅಧ್ಯಕ್ಷರಾಗಿ ಬ್ಯಾಂಕನ್ನು ಮುನ್ನಡೆಸಿದ್ದಾರೆ.
ಬ್ಯಾಂಕು ಶತಮಾನೋತ್ಸವದ ಅಂಚಿನಲ್ಲಿದ್ದು, 2019 ರ ಜುಲೈ 28 ಕ್ಕೆ ನೂರು ವರ್ಷ ಪೂರ್ಣಗೊಳ್ಳಲಿದೆ. ಈಗಿನ ನೂತನ ಆಡಳಿತ ಮಂಡಳಿಗೆ ಈಗ ಹೆಚ್ಚಿನ ಜವಾಬ್ದಾರಿ ಇದ್ದು, ಬ್ಯಾಮಕನ್ನು ಇನ್ನಷ್ಟು ಅಭಿವೃದ್ಧಿ ಪಪಡಿಸುವುದರೊಂದಿಗೆ ಶತಮನೋತ್ಸವ ಆಚರಣೆಯ ಹೊಣೆ ಹೊಂದಿದೆ.
ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ಶತಮಾನೋತ್ಸವ ಹೊಸ್ತಿಲಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಮತ್ತೊಮ್ಮೆ ನನ್ನ ಹೆಗಲಿಗೆ ಬಂದಿದೆ. ಶತಮಾನೋತ್ಸವ ಸಂದರ್ಭದಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ನಿದರ್ೇಶಕರು ವಹಿಸಿದ್ದಾರೆ. ರಾಜಶೇಖರ ಗುಡದಿನ್ನಿ ಅವರು ಅಧ್ಯಕ್ಷರಾಗಬೇಕು ಎಂಬುದು ನನ್ನ ಆಶಯವಾಗಿತ್ತು. ಆದರೆ ರಾಜಶೇಖರ ಗುಡದಿನ್ನಿ ಸೇರಿದಂತೆ ಎಲ್ಲ ನಿದರ್ೇಶಕರು ಶತಮಾನೋತ್ಸವದ ಸಂದರ್ಭದಲ್ಲಿ ನಿವೇ ಅಧ್ಯಕ್ಷರಾಗಿ ಮುದುವರೆಯಬೇಕು ಎಂದು ಹೇಳಿದ ಹಿನ್ನೆಲೆಯಲ್ಲಿ ಅವರ ಒತ್ತಾಸೆಯಂತೆ ಮತ್ತೊಮ್ಮೆ ಅಧ್ಯಕ್ಷನಾಗಲು ಒಪ್ಪಿದ್ದೇನೆ ಎಂದರು.
ಶತಮಾನೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಈಗಿನಿಂದಲೇ ಎಲ್ಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನ ವ್ಯವಹಾರ ಈಗ 3452 ಕೋಟಿಗಳಿಷ್ಟಿದ್ದು, ಶತಮಾನೋತ್ಸವದ ವೇಳೆಗೆ ಇದನ್ನು 4000 ಕೋಟಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಅದೇ ರೀತಿ ಈಗ ಬ್ಯಾಂಕು 35 ಶಾಖೆಗಳನ್ನು ಹೊಂದಿದ್ದು, ಶತಮಾನೋತ್ಸವ ವೇಳೆಗೆ 50 ಶಾಖೆಗಳನ್ನು ಹೊಂದುವ ಗುರಿ ಇದೆ ಎಂದು ಹೇಲಿದರು.
ಸ್ವ-ಸ್ವಹಾಯ ಗುಂಪುಗಳಿಗೆ ಆಥರ್ಿಕ ಸಹಾಯ ಒದಗಿಸುವ ಕಾಯಕ ಯೋಜನೆಯನ್ನು ಸಹ ಅನುಷ್ಠಾನಗೊಳಿಸಲಾಗುವುದು ಎಂದು ಪ್ರಕಟಿಸಿದರು.
ಬ್ಯಾಂಕಿನ ನೂತನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿದರ್ೇಶಕರಾದ ಗುರುಶಾಂತ ನಿಡೋಣಿ, ಕುಮಾರಿ ಸಂಯುಕ್ತಾ ಪಾಟೀಲ, ಶೇಖರ ದಳವಾಯಿ, ಕಲ್ಲನಗೌಡ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಸೋಮನಗೌಡ ಬಿರಾದಾರ ಹಾಗೂ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಉಪಸ್ಥಿತರದಿದರು.