ಧಾರವಾಡ.22: ಮಹಿಳೆಯರು ಮತ್ತು ವಿಕಲಚೇತನರು ದುರ್ಬಲರಲ್ಲ ಅವರು ಉಳಿದವರಷ್ಟೇ ಸಮರ್ಥರು. ಯಾವ ಕೆಲಸವನ್ನಾದರೂ ಸಂಪೂರ್ಣವಾಗಿ ಮಾಡಬಲ್ಲರು ಎಂಬುದನ್ನು ಸಾರಲು ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಲೇ ನಡೆಸಲ್ಪಡುವ 16 ಸಖಿ ಮತಗಟ್ಟೆಗಳು, ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದಲೇ ನಿಭಾಯಿಸಲ್ಪಡುವ 7 ವಿಕಲಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಅಲಂಕರಿಸಲ್ಪಟಿರುವ ಈ ಮತಗಟ್ಟೆಗಳು ಜನರನ್ನು ಮತದಾನಕ್ಕೆ ಆಕಷರ್ಿಸುತ್ತಿವೆ.
ಧಾರವಾಡದ ಜಂಟಿ ಕೃಷಿ ನಿದರ್ೇಶಕರ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಸಖಿ ಮತಗಟ್ಟೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಂಗಮ್ಮ ತೋಟಗೇರಿ, ಶ್ರೀಲತಾ ನಂದಿ ಹಾಗೂ ಬಿ.ಎಲ್.ಓ ಶಹನಾಜ್ ನದಾಫ್ ವಿಶೇಷ ಮುತುವಜರ್ಿ ವಹಿಸಿ, ಅಲಂಕರಿಸಿದ್ದಾರೆ.
ಆಕರ್ಷಕ ಸ್ವಾಗತ ಕಮಾನು, ರಂಗೋಲಿ, ವರ್ಣಮಯ ಕಾಗದ, ಬಲೂನುಗಳಿಂದ ಸಿಂಗರಿಸಿದ್ದಾರೆ. ಬಣ್ಣ ಬಣ್ಣದ ಪರದೆಗಳು ಮತಗಟ್ಟೆಯ ಅಂದ ಹೆಚ್ಚಿಸಿವೆ. ಪಾಲಕರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಕಿಡ್ಸ್ ಕಾರ್ನರ್ ಸ್ಥಾಪಿಸಲಾಗಿದೆ. ಮಕ್ಕಳಿಗೆ ಚಾಕಲೇಟ್ ವಿತರಣೆಗೆ ತಯಾರಿ ಮಾಡಿಕೊಂಡಿದ್ದಾರೆ. ಮತಗಟ್ಟೆಯಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿ ಹಾಗೂ ಮಹಿಳಾ ಪೊಲೀಸ್ ಪೇದೆ ಕರ್ತವ್ಯ ನಿರ್ವಹಿಸಲಿದ್ದಾರೆ.
ಜಿಲ್ಲೆಯಲ್ಲಿ 14 ಹಾಗೂ ಶಿಗ್ಗಾಂವಿಯಲ್ಲಿ 2 ಸೇರಿ ಒಟ್ಟು 16 ಸಖಿ ಮತಗಟ್ಟೆಗಳಿವೆ, 7 ವಿಕಲಚೇತನ ಮತಗಟ್ಟೆಗಳಿವೆ. ಮಹಿಳೆಯರು ಮತ್ತು ವಿಕಲಚೇತನರು ಎಲ್ಲರ ಮುಂದೆ ತಮ್ಮ ಸಾಮಥ್ರ್ಯ ಸಾಬೀತುಪಡಿಸಲು ಅವಕಾಶವಾಗಿದೆ. ವಿಕಲಚೇತನರನ್ನು ಮನೆಯಿಂದ ಮತಗಟ್ಟೆಗೆ ಕರೆತರಲು ವಾಹನ, ಗಾಲಿಖುಚರ್ಿ, ರ್ಯಾಂಪ್, ಭೂತಕನ್ನಡಿ ಮೊದಲಾದ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ, ಜಿ.ಪಂ. ಸಿಇಓ ಡಾ.ಬಿ.ಸಿ.ಸತೀಶ ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ಮಾವಿನ ತಳಿರು, ತೋರಣ, ರಂಗವಲ್ಲಿ, ಬಲೂನು ಸೇರಿ ಬಗೆ ಬಗೆಯ ವಸ್ತುಗಳಿಂದ ವಿಕಲಚೇತನರ ಮತಗಟ್ಟೆಯನ್ನು ಅಲಂಕರಿಸಲಾಗಿದೆ. 6 ಜನ ವಿಕಲಚೇತನ ಅಧಿಕಾರಿ ಮತ್ತು ಸಿಬ್ಬಂದಿಗಳೇ ಈ ಮತಗಟ್ಟೆಯನ್ನು ನಿರ್ವಹಿಸಲಿದ್ದೇವೆ. ನಮ್ಮನ್ನು ಹುರಿದುಂಬಿಸಲು ಜಿಲ್ಲಾಡಳಿತ ವಿಶೇಷ ತರಬೇತಿ, ಪ್ರೋತ್ಸಾಹ ನೀಡುತ್ತಿದೆ ಎಂದು ಮತಗಟ್ಟೆಯ ಅಧ್ಯಕ್ಷಾಧಿಕಾರಿ ಬಾಬಾಜಾನ ಮುಲ್ಲಾ ಹೇಳಿದರು.
ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಮತದಾನದಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ಕಾರ್ಯ ಮಾಡಬೇಕಾಗಿದೆ.