ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರಿಂದ ಸಿಂಗಟಾಲೂರ ಬ್ಯಾರೇಜ್ ವೀಕ್ಷಣೆ

Singtalur Barrage view by District Collector CN Sridhara

ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರಿಂದ ಸಿಂಗಟಾಲೂರ ಬ್ಯಾರೇಜ್ ವೀಕ್ಷಣೆ

ಗದಗ 12: ಗದಗ ಬೆಟಗೇರಿ ಅವಳಿ ನಗರಕ್ಕೆ ನೀರೊದಗಿಸಲು ಪ್ರಮುಖ ನೀರಿನ ಮೂಲವಾದ ತುಂಗಭದ್ರಾ ನದಿಯ ನೀರೆತ್ತುವ ಸ್ಥಳವಾದ ಸಿಂಗಟಾಲೂರ ಬ್ಯಾರೇಜ್ ವೀಕ್ಷಣೆಯನ್ನು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರು ವೀಕ್ಷಣೆ ನಡೆಸಿದರು. 

ಗದಗ ಬೆಟಗೇರಿ ಅವಳಿ ನಗರಗಳಿಗೆ ನೀರು ಸರಬರಾಜು ಮಾಡುವಲ್ಲಿ ಇರುವ ತೊಂದರೆಗಳ ನಿವಾರಣೆಗೆ ಆದ್ಯತೆ ನೀಡೋ ಮೂಲಕ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ನಗರ ಸಭೆಯ ಅಧಿಕಾರಿಗಳು ಹಾಗೂ ನೀರು ಸರಬರಾಜುಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ತೊರೆದು, ಸರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಅವಳಿ ನಗರದ ಜನತೆಗೆ ನಿಯಮಿತವಾಗಿ ನಿರೋದಗಿಸಲು ಶ್ರಮಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಗದಗ-ಬೆಟಗೇರಿ ನಗರಸಭೆಯ ಇಂಜಿನಿಯರ್ ಹುಚ್ಚೇಶ್ವರ್ ಬಂಡೆವಡ್ಡರ ಹಾಗೂ ತಾಲೂಕಾ ಆಡಳಿತದ ಅಧಿಕಾರಿಗಳು ಹಾಜರಿದ್ದು ನೀರು ಸಮರ​‍್ಕ ಒದಗಿಸಲು ಇರುವ ಅವಕಾಶಗಳ ಕುರಿತು ವಿವರಿಸಿದರು.