ಸಿಂದಗಿ: ಪಿಎಸ್ಐ ಅಮಾನತ್ತು: 5ನೇ ದಿನಕ್ಕೆ ಕಾಲಿಟ್ಟ ವಕೀಲರ ಸತ್ಯಾಗ್ರಹ

ಲೋಕದರ್ಶನ ವರದಿ

ಸಿಂದಗಿ 19: ತಾಲೂಕಾ ವಕೀಲರ ಸಂಘದ ಸದಸ್ಯ ವಕೀಲ ಎಂ.ಬಿ.ಅಂಗಡಿ ಅವರನ್ನು ಅಕ್ರಮವಾಗಿ ಬಂಧಿಸಿ ಹಲ್ಲೆ ಮಾಡಿರುವ ದೇವರಹಿಪ್ಪರಗಿ ಪಿಎಸ್ಐ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಸಿಂದಗಿ ವಕೀಲರು ನ್ಯಾಯಕಲಾಪಗಳನ್ನು ಭಹಿಷ್ಕರಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ಶುಕ್ರವಾರ 5ನೇ ದಿನಕ್ಕೆ ಕಾಲಿಟ್ಟಿದೆ.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಕೀಲರು ಮಾನವ ಸರಪಳಿ ಮಾಡಿ ಒಂದು ಗಂಟೆಗಳ ಕಾಲ ರಸ್ತೆ ತಡೆಹಿಡಿದು ಪ್ರತಿಭಟನೆ ನಡೆಸಿದರು.

ಸಿಂದಗಿ ತಾಲೂಕಾ ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ಕೊಣ್ಣೂರ ಅವರು ಮಾತನಾಡಿ, ಸಂಘದ ಸದಸ್ಯ ವಕೀಲ ಎಂ.ಬಿ.ಅಂಗಡಿ ಅವರನ್ನು ಅನವಸ್ಯಕವಾಗಿ ದೇವರಹಿಪ್ಪರಗಿ ಪಿಎಸ್ಐ ಅವರು ಬಂಧಿಸಿ ಹಲ್ಲೆ ಮಾಡಿದ್ದಾರೆ. ಈ ಕುರಿತು ದೂರು ದಾಖಲಿಸಿದರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಇತ್ತ ಗಮನ ನೀಡುತ್ತಿಲ್ಲ. ಈ ಪ್ರಕರಣದಲ್ಲಿ ಜಿಲ್ಲಾ ಪೋಲಿಸ್ವರಿಷ್ಠಾಧಿಕಾರಿ ಅವರು ದಿವ್ಯ ನಿರ್ಲಕ್ಷವಹಿಸುತ್ತಿದ್ದಾರೆ. ಇನ್ನಾದರೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಪ್ರಕರಣ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಕೊಳ್ಳುವವರೆಗೂ ನಾವು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಶುಕ್ರವಾರ 5ನೇ ದಿನ ಹೋರಾಟ ಮಾಡುತ್ತೇವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಜಿಲ್ಲಾ ಪೋಲಿಸ್ವರಿಷ್ಠಾಧಿಕಾರಿ ಅವರೆ ಹೊಣೆಗಾರರಾಗುತ್ತಾರೆ.

ವಕೀಲ ದಾನಪ್ಪಗೌಡ ಚನಗೊಂಡ ಮಾತನಾಡಿ, ವಕೀಲರ ಸಂರಕ್ಷಣಾ ಅಧಿನಿಯಮ ಜಾರಿಗೆ ಬರಬೇಕು. ಈಗಾಗಲೇ ಮಧ್ಯಪ್ರದೇಶದಲ್ಲಿ ಜಾರಿಯಲ್ಲಿದೆ. ಇದೇ ವರ್ಷದಲ್ಲಿ ಹಳಿಯಾಳ ಮತ್ತು ಸಿಂದಗಿ ತಾಲೂಕಿನಲ್ಲಿ ವಕೀಲರ ಕೊಲೆಗಳು ನಡೆದಿವೆ. ಆದ್ದರಿಂದ ವಕೀಲರ ಸಂರಕ್ಷಣಾ ಅಧಿನಿಯಮ ರಾಷ್ಟ್ರೀಯ ಕಾಯ್ದೆಯಾಗಿ ಜಾರಿಗೆ ತರಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.

ವಕೀಲರಾದ ಅಶೋಕ ಗಾಯಕವಾಡ, ಕೆ.ಬಿ.ಜನಗೊಂಡ, ಎಸ್.ಎಸ್.ಸಿಂಗಾಡಿ, ಅರವಿಂದ ಕನ್ನೂರ, ಎಂ.ಕೆ.ಪತ್ತಾರ, ಹೊಸಮನಿ, ದೊಡಮನಿ, ಎಸ್.ಬಿ.ದೊಡಮನಿ, ಪಿ.ಎಂ.ಕಂಬಾರ, ಶಿವಾನಂದ ಪಾಟಿಳ, ಎಂ.ಸಿ.ಯಾತ್ನೂರ, ಪಿ.ಆರ್.ಯಾಳವಾರ, .ಬಿರಾದಾರ, ಬಿ.ಸಿ.ಪಾಟೀಲ, ಪಾಟೀಲ, ಎನ್.ಎಸ್.ಬಗಲಿ, ರಾಜು ಚೌರ, ಎಸ್.ಎಂ.ಹಿರೇಮಠ, ಎಂ.ಎಸ್.ಬಿರಾದಾರ, ಎನ್.ಎಸ್.ಪಾಟೀಲ, ಬಿ.ಎಸ್.ಹಂಡಿ, ಜಿ.ಸಿ.ಭಾವಿಕಟ್ಟಿ,  ನಾಯ್ಕೋಡಿ, ಎಸ್.ಬಿ.ಪಾಟೀಲ, ಹೊಸಮನಿ, ಬಿ.ಎಸ್.ಪಾಟೀಲ, ಪಿ.ಎಂ.ಬಡಿಗೇರ, ವಿ.ಎಲ್.ಮೋಪಗಾರ, ಪ್ರದೀಪ ದೇಶಪಾಂಡೆ, ಪಿ.ಸಿ.ಬಿರಾದಾರ, ಎ.ಎಂ.ಅಂಗಡಿ, ಗೀತಾ ಸಿಂಗೇರಿ, ಚನ್ನಮ್ಮ ಚಿಕ್ಕೋಡಿ, ಸಮಾ ಪಟೇಲ, ರಾಜೇಶ್ವರಿ ಶಿರಬೂರ ಸೇರಿದಂತೆ ಎಲ್ಲ ವಕೀಲರು ಕಲಾಪಗಳನ್ನು ಭಹಿಷ್ಕರಿಸಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದರು.