ಇಂದು ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ

Sinchana Kavya Award presentation today

ಇಂದು ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ

ಹೂವಿನ ಹಡಗಲಿ  14: 2021 ಮತ್ತು 2022 ನೇ ಸಾಲಿನ ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 15 ರಂದು ಆಯೋಜಿಸಲಾಗಿದೆ ಎಂದು ಪ್ರಕಾಶನದ ಸವಿತಾ ಅಂಗಡಿ ತಿಳಿಸಿದ್ದಾರೆ. ಡಿ 15 ಭಾನುವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕೊಪ್ಪಳದ ಅಕ್ಷರ ಕಾಲಿಮಿರ್ಚಿ ಹಾಗೂ - ಹಾವೇರಿಯ ಕವಿ ಲಿಂಗರಾಜ ಸೊಟ್ಟಪ್ಪನವರ ರವರಿಗೆ 5,000 ರೂ.ನಗದು.2000 ರೂ ಮೌಲ್ಯದ ಪುಸ್ತಕಗಳು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. 

ಹೂವಿನ ಹಡಗಲಿ ಸಾಹಿತಿಗಳಾಧ ತೋ ಮ ಶಂಕ್ರಯ್ಯ, ಪ್ರಕಾಶ್ ಮಲ್ಕಿಒಡೆಯರ್‌. ಎಲ್ - ಖಾದರಬಾಷಾ, ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾದ ಅಯ್ಯನಗೌಡರ ಕೊಟ್ರಗೌಡ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ, ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆಅಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್ ಇತರರು ಭಾಗವಹಿಸುವರು. ಪ್ರಶಸ್ತಿ ಪುರಸ್ಕೃತ ಕವಿಗಳ ಕಾವ್ಯ ಓದು, 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿಸಾಧನೆ ಮಾಡಿದ ತುಂಗಭದ್ರಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಲಾಗುವುದು. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೇಕೆಂದು ಕೋರಿದ್ದಾರೆ.