ಲೋಕದರ್ಶನ ವರದಿ
ಶಿರಹಟ್ಟಿ 25: ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸೋಮವಾರ ದಿಢೀರನೆ ಬೆಲೆ ಕುಸಿತದಿಂದ ಕಂಗಾಲಾದ ರೈತರು ಗೂಡಿನ ಬೆಲೆ ಏರಿಕೆ ಮಾಡುವಂತೆ ಆಗ್ರಹಿಸಿ ಮಾರುಕಟ್ಟೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ತಾಲೂಕು ರೇಷ್ಮೆ ಗೂಡು ಕ್ವಾಲಿಟಿ ಕ್ಲಬ್ ಅಧ್ಯಕ್ಷ ಎಚ್.ಎಂ.ದೇವಗಿರಿ ಹಾಗೂ ರೈತ ಫಕ್ಕೀರೇಶ ಕರಿಗಾರ ಮಾತನಾಡಿ. ರೈತರು ಪ್ರತಿ ನಿತ್ಯ ನೂರಾರು ಸಮಸ್ಯೆಗಳನ್ನು ಎದುರಿಸಿ ರೇಷ್ಮೆ ಗೂಡುಗಳನ್ನು ಬೆಳೆದು ಮಾರುಕಟ್ಟೆಗೆ ತರುತ್ತಾರೆ. ಆದರೆ ಇಲ್ಲಿಯ ರೀಲಸರ್್ಗಳು ಗೂಡಿಗೆ ವೈಜ್ಞಾನಿಕ ಬೆಲೆ ನೀಡದೆ. ಹರಾಜಿನಲ್ಲಿ ಬೇಕಾ ಬಿಟ್ಟಿ ಕೂಗುತ್ತಿದ್ದಾರೆ. ಕೇವಲ 1ರೂಪಾಯಿಂದ ಹರಾಜು ಆರಂಭಿಸಿದ ರೀಲಸರ್್, ಕೆಜಿ ಗೂಡಿಗೆ 150, 210ರೂ ಕೊಟ್ಟು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ರೈತರ ರೇಷ್ಮೆ ಗೂಡುಗಳು 350ರಿಂದ 450ರ ವರೆಗೂ ಮಾರಾಟವಾಗುತ್ತಿದ್ದ ಗೂಡುಗಳು ಸೋಮುವಾರ ಕೇವಲ 210ಕ್ಕಿಂತಲ್ಲೂ ಕಡಿಮೆ ಬೆಲೆಗೆ ಕೂಗುವುದರ ಮೂಲಕ ರೈತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಮತ್ತು ರಾಮನಗರ, ಕನಕಪೂರ ಸೇರಿದಂತೆ ಇತರ ಮಾರುಕಟ್ಟೆಯ ಬೆಲೆಗೆ ಹೋಲಿಸಿದರೆ ಪಟ್ಟಣದ ಮಾರುಕಟ್ಟೆಯಲ್ಲಿ ಅತೀ ಕಡಿಮೆ ದರಕ್ಕೆ ರೇಷ್ಮೆ ಗೂಡು ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಬಹಳಷ್ಟು ಅನ್ಯಾಯವಾಗುತ್ತಿದ್ದು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ರೈತರ ಗೂಡಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಹೇಳಬೇಕು. ಇಲ್ಲದಿದ್ದರೆ ರೇಷ್ಮೆ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ಮಾಡಿ ಎಲ್ಲರೂ ಮನೆಗೆ ನಡೆಯಿರಿ ಎಂದು ಘೇರಾವ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಗೆ ನವಲಗುಂದ, ಧಾರವಾಡ, ಸವದತ್ತಿ, ಬೆಳಗಾವಿ, ಬೈಲಹೊಂಗಲ, ಕೊಪ್ಪಳ, ಮುಂಡರಗಿ ಸೇರಿದಂತೆ ನೂರಾರು ಕಿ.ಮಿ ದೂರದಿಂದ ನಿತ್ಯ ನೂರಾರು ರೈತರು ಕ್ವಿಂಟಲ್ಗಟ್ಟಲೇ ರೇಷ್ಮೆ ಗೂಡುಗಳನ್ನು ಮಾರಾಟ ಮಾಡಲು ಆಗಮಿಸುತ್ತಾರೆ. ಆದರೆ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಸಾಕಷ್ಟು ಅನ್ಯಾಯವಾಗುತ್ತಿದೆ. ಮತ್ತು ಇದಕ್ಕೆ ಅಧಿಕಾರಿಗಳು ಸಹ ಖರೀದಿದಾರರ ಜೋತೆ ಸಾಮಿಲಾಗಿ ತುಕದ ಬುಟ್ಟಿಗಳನ್ನು ರೀಲಸರ್್ಗಳು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಪಧರ್ಾತ್ಮಕ ಹರಾಜು ಪ್ರಕ್ರೀಯ ನಡೆಯುತ್ತಿಲ್ಲ. ಇದರಿಂದ ರೇಷ್ಮೆ ಗೂಡಿನ ಮೌಲ್ಯ ಕುಸಿಯುವಂತೆ ಮಾಡುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಚಂದ್ರು ಅಕ್ಕಿ, ನಿಂಗಪ್ಪ ತೊಂಡಿಹಾಳ, ರಮೇಶ ಕಾಳೋಜಿ, ಬಸನಗೌಡ ಮಾಲಿಪಾಟೀಲ, ಸೋಮಣ್ಣ ಧರೆಪ್ಪನವರ, ಭೀಮಪ್ಪ ಬಿಜರ್ಿನವರ, ಮಲ್ಲನಗೌಡ ಪಾಟೀಲ, ಭೀಮಪ್ಪ ಅಕ್ಕರಗಲ್ಲ, ಮಲ್ಲಪ್ಪ ದೊಡ್ಡಮನಿ, ನಾಗಪ್ಪ ಚಿಕ್ಕತೋಟದ, ಆನಂದ ಬಾಕರ್ಿ, ಸದ್ದಾಂ ಹುಶೇನ್ ಕನಕವಾಡ, ದೇವೇಂದ್ರ ಕೆಂಪ್ಪಲ್ಲ, ಲಕಮಪ್ಪ ಕರೆಣ್ಣವನರ, ವೇಂಕನಗೌಡ ಮಾಲಿಪಾಟೀಲ, ಸೇರಿದಂತೆ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.