ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಯುವಕ ಯುವತಿಯರಿಗೆ ಸಿಲಂಬಮ್ ಕ್ರೀಡಾ ತರಬೇತಿ ಶಿಬಿರ
ಬಳ್ಳಾರಿ 12 : ಜಿಲ್ಲಾ ಸಿಲಂಬಮ್ ಅಸೋಸಿಯೇಷನ್ (ರಿ)ಮತ್ತು ವಿಜಯನಗರ ಜಿಲ್ಲಾ ಸಿಲಂಬಮ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಸಿಲಂಬಮ್ ತರಬೇತಿಯನ್ನು ಆಯೋಜನೆ ಮಾಡಲಾಯಿತು.ಸದರಿ ತರಬೇತಿಯಲ್ಲಿ ಎರಡು ಜಿಲ್ಲೆಯಿಂದ ಸುಮಾರು 50 ಕ್ಕೂ ಹೆಚ್ಚು ಯುವಕ-ಯುವತಿಯರು ಭಾಗವಹಿಸಿದ್ದರು.ಸಿಲಂಬಮ್ ಒಂದು ಪುರಾತನ ಭಾರತೀಯ ಕಲೆಯಾಗಿದ್ದು,ಇದರ ತವರು ತಮಿಳುನಾಡು.ಸಿಲಂಬಮ್ ಕ್ರೀಡೆ ಎಲ್ಲಾ ರಾಜ್ಯ, ಕೇಂದ್ರ ಪಠ್ಯಕ್ರಮದ ಕ್ರೀಡಾ ಕೂಟದಲ್ಲಿ ಸೇರಿದ್ದು, ಇದರಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನೀಡುವ ಪ್ರಮಾಣ ಪತ್ರ ಅವರ ಮುಂದಿನ ವಿದ್ಯಾಭ್ಯಾಸ ಮತ್ತು ವೃತ್ತಿಜೀವನಕ್ಕೆ ಅನುಕೂಲಕರವಾಗಿದೆ.ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಳ್ಳಾರಿ ಜಿಲ್ಲಾ ಸಿಲಂಬಮ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರು ಹಾಗೂ ಉದ್ಯಮಿಗಳಾದ ಚಂದ್ರಶೇಖರ್ ರವರು ಮಾತಾನಾಡಿ, ಸಿಲಂಬಮ್ ಕ್ರೀಡೆ ನಮ್ಮ ದೇಶದ ತಮಿಳುನಾಡು ಪ್ರದೇಶದಲ್ಲಿ ಪ್ರಾರಂಭವಾಗಿದ್ದು ಚೋಳ ಮತ್ತು ಪಾಂಡ್ಯರ ಕಾಲದಲ್ಲಿ ಈ ಸಮರ ಕಲೆಯನ್ನು ಅಭ್ಯಾಸ ಮಾಡಿದ ಉಲೇಖವಿದೆ. ಹಾಗೂ ಶ್ರೀಲಂಕಾ ಮತ್ತು ಮಲೇಷಿಯಾ ಹಾಗೂ ವಿಶ್ವದ ವಿವಿಧ ದೇಶಗಳಿ ಈ ತರಬೇತಿ ನಡೆಯುತ್ತಿದ್ದು ನಮ್ಮ ದೇಶದ ಹೆಮ್ಮೆಯ ವಿಷಯ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರವುಈ ಕ್ರೀಡೆಗೆ ಮಾನ್ಯತೆಯನ್ನು ನೀಡಿದೆ ಎಂದು ತಿಳಿಸಿದರು. ಮತ್ತು ಈ ತರಬೇತಿ ಆಗಮಿಸಿದ ಎಲ್ಲಾ ತರಬೇತುದಾರರಿಗೆ ಶುಭಾಶಯ ಕೋರಿದರು. ಈ ಸಿಲಂಬಮ್ ತರಬೇತಿಯನ್ನು ಕಟ್ಟೇಸ್ವಾಮಿ, ಸುಭಾಷಚಂದ್ರ ಮತ್ತು ಪ್ರಸಾದ್ ರವರು ತರಬೇತಿ ನೀಡಿದರು.ಕರ್ನಾಟಕ ರಾಜ್ಯ ಸಿಲಂಬಮ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಮಹಂತೇಶ್ ಬೆಳಗಿ ,ತರಬೇತಿ ಪಡೆದ ಯುವಕ-ಯುವತಿಯರಿಗೆ ಶುಭಕೋರಿದರು.ಈ ಸಂದರ್ಭದಲ್ಲಿ ತರಬೇತುದಾರರಾದ ಜಡೇಶಾ, ಹನುಮಂತ, ಹುಲುಗಣ್ಣ, ಯುವರಾಜ, ನಬಿಸಾಹೇಬ್, ಯಮನೂರಿ, ರಜತ್ ನಾಗರಾಜ, ಅನಂದ್ , ಇತರರು ಭಾಗವಹಿಸಿದ್ದರು.