ಲೋಕದರ್ಶನ ವರದಿ
ಸಿಂದಗಿ: ಲಿಂಗೈಕ್ಯರಾದ ಗದುಗಿನ ತೊಂಟದಾರ್ಯ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಬಸವಾದಿಶರಣರ ಆಶೆಯಂತೆ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದವರು ಎಂದು ಮಾಜಿ ಕೇಂದ್ರ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು.
ಪಟ್ಟಣದ ಅಂಜುಮನ್ ಸಂಸ್ಥೆಯ ಕಾಲೇಜಿನ ಆವರಣದಲ್ಲಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಹಮ್ಮಿಕೊಂಡ ಜನಸಾಮಾನ್ಯರ ಸ್ವಾಮೀಜಿ ಡಂಬಳ-ಗದಗದ ತೊಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಗುರು ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನ್ನ ಮತ್ತು ಶಿಕ್ಷಣ ದಾಸೋಹ ಮಾಡುವುದೊಂದೇ ಕಾಯಕಮಾಡಿಕೊಳ್ಳದೇ ಹೋರಾಟದ ಮೂಲಕ ಸಮಾಜದ ಪರಿವರ್ತನೆ ಮಾಡಿದರು. 1996ರಲ್ಲಿ ಹುಬ್ಬಳ್ಳಿಯ ಇಗ್ದಾ ಮೈದಾನ ಸಮಸ್ಯೆ ತಿಳಿಗೊಳಿಸಿ ಜ.5, 1996ರಲ್ಲಿ ಇಗ್ದಾಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಕೊಮು ಸೌಹಾರ್ಧತೆ ಕಾಪಾಡಿದರು ಎಂದು ಹೇಳಿದರು.
ಶ್ರೀಗಳು ಮುಸ್ಲಿಂ ಸಮುದಾಯದೊಂದಿಗೆ ಅನ್ಯೋನ್ಯತೆ ಹೊಂದಿದ್ದರು. ರಂಜಾನ ಹಬ್ಬದಲ್ಲಿ ಮುಸ್ಲಿಂ ಬಾಂದವರಿಗೆ ರೋಜಾ ಬಿಡಿಸುವ ಕಾರ್ಯಕ್ರದಲ್ಲಿ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದರು. ಪಕ್ಕತಗುಡ್ಡದ ಉಳಿವಿಗಾಗಿ ಹೋರಾಡುವ ಮೂಲಕ ಪರಿಸರ ಪ್ರೇಮಿಯಾಗಿದ್ದರು. ಅವರ ಕಾರ್ಯಕ್ಕೆ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಲಭಿಸಿದೆ. ಸಿಂದಗಿ ಪಟ್ಟಣದಲ್ಲಿ ಅವರ ಮೂತರ್ಿ ನಿಮರ್ಾಣ ವೆಚ್ಚಕ್ಕೆ ಕನರ್ಾಟಕ ಮುಸ್ಲಿಂ ಸಮುದಾಯದ ಕೊಡುಗೆ ನೀಡಲಾಗುವುದು ಎಂದು ಭವರವಸೆ ನೀಡಿದರು.
ಸಚಿವ ಎಂ.ಸಿ.ಮನಗೂಳಿ ಅವರು ಮಾತನಾಡಿ, ಶಿಕ್ಷಣ ಮತ್ತು ಸಂಸ್ಕಾರ ನೀಡುವ ಜೊತೆಗೆ ಜನರ ಮನಸ್ಸನ್ನು ಪರಿವರ್ತನೆ ಮಾಡುವ ಶಕ್ತಿ ಸಿದ್ದಲಿಂಗ ಮಹಾಸ್ವಾಮಿಗಳಲ್ಲಿತ್ತು. 69 ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಜೊತೆಗೆ ಪರಿಸರ ರಕ್ಷಣೆ, ಮುಡನಂಭಿಕೆ ಹೋಗಲಾಡಿಸುವಲ್ಲಿ ಶ್ರಮಿಸಿದವರು. ಅವರ ಸ್ಮರಣೆಗಾಗಿ ಪಟ್ಟಣದ ಕೆರೆಯ ಹತ್ತಿರ ನಿಮರ್ಿಸುವ ಉದ್ಯಾನವನದಲ್ಲಿ ಶ್ರೀಗಳ ಮೂತರ್ಿ ಸ್ಥಾಪಿಸಲಾಗುವುದು ಎಂದು ಬರವಸೆ ನೀಡಿದರು.
ಅಂಜುಮನ್-ಎ-ಇಸ್ಲಾಂ ಸಂಸ್ಥೆ ಪ್ರಧಾನಕಾರ್ಯದಶರ್ಿ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ಜನಸಾಮಾನ್ಯರ ಸ್ವಾಮೀಜಿ ಡಂಬಳ-ಗದಗದ ತೊಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಜಾತ್ಯಾತೀತ ಸ್ವಾಮಿಗಳು. ಅವರು ಜಾತ್ಯಾತೀತ ಕಾರ್ಯಕ್ಕೆ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಅವರ ಮಡಲಿಗೆ ಸೇರಿತು. ಅವರು ನಮ್ಮಿಂದ ಅಗಲಿರಬಹುದುದು ಅವರ ಕಾರ್ಯ, ಚಿಂತನೆ, ಹೋರಾಟ ಮನೋಭಾವ, ಪರಿಸರ ರಕ್ಷಣೆ ನಮಗೆ ಸದಾ ಮಾರ್ಗದಶರ್ಿಯಾಗಿವೆ. ಅವರು ಸಿಂದಗಿ ಪಟ್ಟಣದವರು ಎಂಬುದು ನಮ್ಮ ಹೆಮ್ಮೆಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಆಲಮೇಲದ ವಿರಕ್ತಮಠದ ಜಗದೇವಮಲ್ಲಿಬೊಮ್ಮ ಸ್ವಾಮಿಗಳು, ಲಿಂಗಾಯತ ಪಂಚಮಸಾಲಿ ಪೀಠದ ಪೂಜ್ಯ ಶ್ರೀ ಜಗದ್ಗುರು ಬಸವಜಯ ಮೃತ್ಯಂಜಯ ಮಹಾಸ್ವಾಮಿಗಳು, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಆಲಮೇಲದ ಸಾದೀಕ ಸುಂಬಡ ಅವರು ಮಾತನಾಡಿದರು.
ಕೃಷಿಕ ಸಮಾಜದ ತಾಲೂಕಾ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಸಂಸ್ಥೆ ಅಧ್ಯಕ್ಷ ಎ.ಎ.ದುದನಿ, ನಿದರ್ೇಶಕರಾದ ಎ.ಐ.ಮುಲ್ಲಾ, ಮೈಬೂಬ ಹಸರಗೂಂಡಗಿ, ಜುಲ್ಫಿಕರ್ ಆಯ್. ಅಂಗಡಿ, ಯುವಧುರಿಣ ಅಕ್ಬರ ಮುಲ್ಲಾ, ನಾಗರಾಜ ಲಂಬು ಅವರು ವೇದಿಕೆ ಮೇಲೆ ಇದ್ದರು.
ಸಂಶೋಧಕ ಡಾ.ಎಂ.ಎಂ.ಪಡಶೆಟ್ಟಿ, ಪ್ರಾ.ಎಂ.ಡಿ.ಮನಗೂಳಿ, ಪ್ರಾ. ಝಾಕಿರ ಅಂಗಡಿ, ಎಸ್.ಎ.ದೊಡಮನಿ, ಪ್ರಾಚಾರ್ಯ ಹಾಫೀಜ ಗಿರಿಗಾಂವ, ಮೋರಟಗಿ ಐಟಿಐ ಕಾಲೇಜಿನ ಪ್ರಾಚಾರ್ಯ ಸಿಂದಗಿ, ಪ್ರಾಚಾರ್ಯ ಮುಲ್ಲಾ, ಅಶೋಕ ಕೋಳಾರಿ, ಎಚ್.ಕೆ.ನದಾಫ್, ಪ್ರಾ.ಐ.ಸಿ.ಬಳೂಂಡಗಿ ಸೇರಿದಂತೆ ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹ್ಮದಮೌಲಾನಾ ಇಟಗಿ ಕುರಾನ ಪಠಣ ಮಾಡಿದರು. ಎಂ.ಎಚ್.ಪಾನಪರೋಷ ಸ್ವಾಗತಗೀತೆ ಹಾಡಿದರು. ಪ್ರಾ.ಎಂ.ಡಿ.ಬಳಗಾನೂರ ಸ್ವಾಗತಿಸಿದರು. ಪ್ರಭುಲಿಂಗ ಲೋಣಿ ನಿರೂಪಿಸಿದರು. ಎಸ್.ಎ.ದೊಡಮನಿ ವಂದಿಸಿದರು.