ಕಿನ್ನಾಳ ಗ್ರಾಮದಲ್ಲಿ ನೇತ್ರದಾನ ಜಾಗೃತಿ ಕಾರ್ಯಕ್ರಮಕ್ಕೆ ಶ್ವೇತಾ ಡಂಬಳ ಚಾಲನೆ
ಕೊಪ್ಪಳ 11: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕೊಪ್ಪಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ,ಗ್ರಾಮ ಪಂಚಾಯತ್ ಕಿನ್ನಾಳ ಹಾಗೂ ಎಸ್.ಜಿ.ಎಮ್ ನೇತ್ರ ಭಂಡಾರ ಮತ್ತು ಸಂಶೋಧನಾ ಪ್ರತಿಷ್ಠಾನ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ "ನೇತ್ರಧಾನ ಜಾಗೃತಿ ಕಾರ್ಯಕ್ರಮ" ಏರಿ್ಡಸಿಲಾಗಿತ್ತು. ನೇತ್ರದಾನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸದರಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ವೇತಾ ರಾಘವೇಂದ್ರ ಡಂಬಳ ರವರು ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿದರು. ಡಾ. ಸುನಿತಾ ರವರು ನೇತ್ರ ದಾನದ ಮಹತ್ವವನ್ನು ತಿಳಿಸಿದರು.ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ದುರಗಪ್ಪ ಡಂಬರ ಸದಸ್ಯರುಗಳಾದ ಕಾಳಪ್ಪ ಬಿದರೂರು, ಹನುಮೇಶ ಕೋವಿ ಮಂಜುನಾಥ ಉದ್ದಾರ ಶಕುಂತಲಾ ಬನ್ನಿಕೊಪ್ಪ ಸೇರಿದಂತೆ ಇತರರು ಹಾಜರಿದ್ದರು. ಪ್ರಾ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಚೀಲವಾಡಗಿ ನಿರ್ದೇಶಕರಾದ ಜಗದೀಶ್ ಬಳಿಗಾರ್ , ಶಾಲೆ ,ಕಾಲೇಜುಗಳ ಮುಖ್ಯಸ್ಥರು , ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳು , ಪಿ.ಡಿ.ಓ ಪರಮೇಶ್ವರಯ್ಯ .ಟಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅಪಾರ ಸಂಖ್ಯೆಯ ಸಾರ್ವಜನಿಕರು ಸೇರಿದಂತೆ ಶಾಲಾ ವಿದ್ಯಾರರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ನೇತ್ರದಾನ ಮಾಡಲು ಪ್ರೇರಣೆ ನೀಡಿದರು