ಶಿವಾಜಿ ಮಹಾನ್ ನಾಯಕ ಜಯಂತ್ಯೋತ್ಸವ
ಮುಂಡಗೋಡ 19: ಛತ್ರಪತಿ ಶಿವಾಜಿ ಅವರು ರಾಷ್ಟ್ರದ ಭವ್ಯ ಪರಂಪರೆಗಾಗಿ ಹೋರಾಡಿದ ಮಹಾನ್ ನಾಯಕ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿಯನ್ನು ಆದ್ದೂರಿಯಾಗಿ ಆಚರಿಸಲಾಯಿತು. ಇಲ್ಲಿಯ ಶಿವಾಜಿ ಸರ್ಕಲ್ ಹತ್ತಿರವಿರುವ ಶಿವಾಜಿಮೂರ್ತಿಗೆ ಮಾಲಾರೆ್ಣ ಮಾಡಿ ಪೂಜೆ ಸಲ್ಲಿಸಿ ನಂತರ ಸಿಹಿಯನ್ನು ಹಂಚಿ ಸಂಭ್ರಮ ಸಡಗರದಿಂದ ಜಯಂತ್ಯೋತ್ಸವನ್ನು ಆಚರಣೆ ಮಾಡಲಾಯಿತು.ಮಾರಿಕಾಂಬಾ ದೇವಾಲಯದಲ್ಲಿ ಶಿವಾಜಿ ಮಹಾರಾಜರ ತೊಟ್ಟಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈವೇಳೆಯಲ್ಲಿ ಮರಾಠ ಸಮುದಾಯದ ತಾಲೂಕು ಅಧ್ಯಕ್ಷರು ಡಿ ಎಫ್ ಮಡ್ಲಿ ಪಟ್ಟಣ ಪಂಚಾಯಿತಿ ಸಾಯಿ ಸಮಿತಿ ಅಧ್ಯಕ್ಷರು ಶಿವರಾಜ್ ಸುಬ್ರಾಯ್ ಶ್ರೀಧರ್ ಡೋರಿ ಚಿದಾನಂದ ಹರಿಜನ, ಪ್ರಶಾಂತ್ ಬಾಬರ್ ವಿಠ್ಠಲ್ ಬಾಳಂಬೀಡ್ ಹಾಗೂ ಉಪಸ್ಥಿತರಿದ್ದರು.