ಕರವೇ ತಾಲೂಕ ಅಧ್ಯಕ್ಷರಾಗಿ ಶಿವು ಮಠದ ನೇಮಕ
ಶಿರಹಟ್ಟಿ 15 : ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಶಿರಹಟ್ಟಿ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಶಿವು ಮಠದ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೂಲಕ ಮಾತನಾಡಿದ, ರಾಜ್ಯಾಧ್ಯಕ್ಷರು ಆದೇಶದ ಮೇರೆಗೆ ಜಿಲ್ಲೆಯಲ್ಲಿ ಕರವೇ ಸಂಘಟನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ತಿಳುವಳಿಕೆ ಮೂಡಿಸುವುದರ ಮೂಲಕ ಅತಿ ಹೆಚ್ಚು ಸಂಘಟನೆಯನ್ನು ಜಿಲ್ಲೆಯಲ್ಲಿ ಮತ್ತು ತಾಲೂಕ ಮಟ್ಟದಲ್ಲಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷ ಹಾಗೂ ತಾಲೂಕಾಧ್ಯಕ್ಷರ ನೇಮಕಾತಿ ಅವಶ್ಯಕತೆ ಇದ್ದಿದ್ದರಿಂದ ಶಿರಹಟ್ಟಿ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷರನ್ನಾಗಿ ಶಿವು ಮಠದ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.