ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕಿನ ಗುತ್ತಿಗೆದಾರರ ಪದಾಧಿಕಾರಿಗಳ ಪದಗ್ರಹಣ ಗುತ್ತಿಗೆದಾರರು ಸಂಘಟಿತರಾಗಿ : ಬಸವರಾಜ ತುಳಿ
ಶಿರಹಟ್ಟಿ 23: ಉತ್ತರ ಕರ್ನಾಟಕದಲ್ಲಿ ನಮ್ಮ ಗುತ್ತಿಗೆದಾರರ ಸಂಘಟನೆಯ ಕೊರತೆಯಿಂದ ಈ ಭಾಗದಲ್ಲಿ ತಮ್ಮ ಒಳಗಿನ ನೋವನ್ನು ಹೇಳಿಕೊಳ್ಳದೇ ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ನೂತನ ತಾಲೂಕ ಅಧ್ಯಕ್ಷ ಬಸವರಾಜ ತುಳಿ ಹೇಳಿದರು.
ಅವರು ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ಸಿವಿಲ್ ಗುತ್ತಿಗೆದಾರರ ಅಸೋಶಿಯೇಷನ್ ವತಿಯಿಂದ ಏರಿ್ಡಸಿದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದ್ದನಗೌಡ್ರ ಪಾಟೀಲ, ಶಿರಹಟ್ಟಿ-ಲಕ್ಷ್ಮೇಶ್ವರ ನಿಕಟಪೂರ್ವ ಅಧ್ಯಕ್ಷ ಆರ್ ಬಿ. ದನದಮನಿ, ಶರಣಪ್ಪ ಪಾಪನೂರ, ಎಫ್ ಟಿ. ಕವಲೂರ, ರಮೇಶ ರಂಗಪ್ಪನವರ, ಬಸವರಾಜ ಶಿರಗುಂಪಿ, ಸುರೇಶ ತಿರ್ಲಾಪೂರ, ನಾಗರಾಜ ಮಡಿವಾಳರ, ತಿಪ್ಪಣ್ಣ ಲಮಾಣಿ, ಮಂಜುನಾಥ ಚಡಚಣ್ಣವರ, ರುದ್ರ್ಪ ಲಮಾಣಿ, ಕಲ್ಲಪ್ಪ ಹಡಪದ, ಶರಣಪ್ಪ ಸಿಂದಗಿ, ಪ್ರಭು ಹಲಸೂರ, ವೀರೇಶ ತಂಗೋಡ, ಫಕ್ಕೀರೇಶ ರಗಟಿ, ಫಕ್ಕೀರೇಶ ಪೂಜಾರ ಹಾಗೂ ಅನೇಕ ಗುತ್ತಿಗೆದಾರರು ಇದ್ದರು.