ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಶಿಲಾಮೂರ್ತಿ
ಕಂಪ್ಲಿ 07: ತಾಲೂಕಿನ ಸಣಾಪುರ ಬಳಿಯ ಬಸವೇಶ್ವರ ಕ್ಯಾಂಪಿನಲ್ಲಿ ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಬೃಹತ್ ಆಕಾರದ ಶಿಲಾಮೂರ್ತಿ. ಇದೇ ಡಿ.15ರಂದು ಶ್ರೀ ಅಭಯ ಆಂಜನೇಯಸ್ವಾಮಿ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಂಪ್ರದಾಯದಂತೆ ಶ್ರದ್ಧಾಭಕ್ತಿಯಿಂದ ನೆರವೇರಲಿದೆ.
ಡಿ.13ರಂದು ಬೆಳಿಗ್ಗೆ ಗೋ ಪೂಜೆ, ಮಹಾಗಣಪತಿ, ಪುಣ್ಯವಚನೆ, ದೀಕ್ಷಾಧಾರಣೆ, ಯಾಗಶಾಲೆ ಪ್ರವೇಶ, ಜಲಾಧಿವಾಸ, ಅಗ್ನಿ ಪ್ರತಿಷ್ಠಾಪನೆ, ಸಂಜೆ ಗಣಪತಿ ಹೋಮ, ವಾಸ್ತು ಹೋಮ, ಕ್ಷೀರಾಧಿವಾಸ, ಮಂಟಪ ಆರಾಧನೆ, ಚರ್ತುವೇದ ಸ್ವಸ್ತಿ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಭಕ್ತರ ಸಮ್ಮುಖದಲ್ಲಿ ಜರುಗಲಿವೆ. ಪಿ.ಶಿವರಾಮ ಕೃಷ್ಣ ಶರ್ಮ(ಶಿವಾಜಿ) ಇವರ ದಿವ್ಯ ಸಾನಿಧ್ಯದಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಸವೇಶ್ವರಕ್ಯಾಂಪ್ ಸರ್ವ ಭಕ್ತ ಮಂಡಳಿ ತಿಳಿಸಿದೆ. ಡಿ.002: ತಾಲೂಕಿನ ಸಣಾಪುರ ಬಳಿಯ ಬಸವೇಶ್ವರ ಕ್ಯಾಂಪಿನಲ್ಲಿ ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಬೃಹತ್ ಆಕಾರದ ಶಿಲಾಮೂರ್ತಿ.