ಶಿಗ್ಗಾವಿ: ಮತ್ತೊಮ್ಮೆ ಮೋದಿ ಟೀಮ್ ಮೋದಿ ತಂಡದ ಪ್ರಮುಖ ಧೆ್ಯೇಯ: ಸೂಲಿಬೆಲೆ

ಲೋಕದರ್ಶನ ವರದಿ 

ಶಿಗ್ಗಾವಿ 31: ಐದು ವರ್ಷದಲ್ಲಿ ಮೋದಿಯವರು ಭಾರತವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ, ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವುದೇ ಟೀಮ್ ಮೋದಿ ತಂಡದ ಪ್ರಮುಖ ಧೆ್ಯೇಯ ಎಂದು ಟೀಮ್ ಮೋದಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಭಾಷಣಕಾರ ಚಕ್ರವತರ್ಿ ಸೂಲಿಬೆಲೆ ಹೇಳಿದರು.

ಪಟ್ಟಣದ ಸಂತೆ ಮೈಧಾನದಲ್ಲಿ "ಟೀಮ್ ಮೋದಿ" ವತಿಯಿಂದ ಹಮ್ಮಿಕೊಂಡ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದ ಅವರು ಯುವಕರು ಈ ತಂಡದಲ್ಲಿ ಭಾಗವಹಿಸಬೇಕು, ಮತ್ತೋಮ್ಮೆ ದೇಶದ ಪ್ರಧಾನಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಈ ತಂಡ ಕಾರ್ಯಪ್ರರುತ್ತವಾಗಿದ್ದು ಚುನಾವಣೆ ಎಂದರೆ ದೇಶವನ್ನು ಸಮರ್ಥವಾಗಿ ಆಳಬಲ್ಲ ವ್ಯಕ್ತಿಯನ್ನು ಗುರುತಿಸಿಕೊಂಡು ಅವರೇ ನಮ್ಮನ್ನು ಆಳಲಿ ಎನ್ನುವಂತದ್ದು, ಕುಟುಂಬಸ್ಥರೇ ನಮ್ಮನ್ನು ಆಳಬೇಕಾದ ಅನಿವಾರ್ಯತೆ ಇಲ್ಲ ಎಂದು ಪ್ರಜಾಪ್ರಭುತ್ವ ತೊರಿಸುತ್ತದೆ ಎಂದು ಸೂಲಿಬೆಲಿ ಹೇಳಿದರು.

ಈ ದೇಶ ಸಾವಿರಾರು ವರ್ಷಗಳ ಕಾಲ ರಾಜರ ಆಳ್ವಿಕೆಯಲ್ಲಿತ್ತು, ಆಗ ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರು ದಾಳಿ ಮಾಡಿ ಅವರು ಆಳ್ವಿಕೆ ಮಾಡಿದರು ಅವರು ಸಹಿತ ರಾಜರ ಆಳ್ವಿಕೆಯನ್ನು ಮಾಡುತ್ತಿದ್ದರು ಎಂದ ಅವರು ಭಾರತದ ಅಭಿವೃದ್ದಿಯ ಕುರಿತು ಮುಂದಾಲೋಚನೆ ಕಾಳಚಿಯನ್ನು ಹೊಂದಿರುವ ಪ್ರಧಾನಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೆಕಿರುವದು ಅತಿ ಅನಿವಾರ್ಹವಾಗಿದೆ ಇದಕ್ಕೆ ಸಾಕ್ಷಿ ಎಂಬಂತೆ ವಿದೇಶದ ಗಣ್ಯ ನಾಯಕರೇ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ರೈತರು, ಮಹಿಳೆಯರು, ಬಡವರು ಜೊತೆಗೆ ಯುವ ಸಮೂದಾಯಗಳನ್ನು ಗುರುತಿಸಿ ವಿವಿದ ಯೋಜನೆಗಳನ್ನು ಜಾರಿಗೊಳಿಸುತ್ತಾ ಅಭಿವೃದ್ದಿ ಪಥದಲ್ಲಿ ದಾಲಿಗಾಲಿಟ್ಟಿರುವ ಮೊದಿಯನ್ನು ಗೆಲ್ಲಿಸಲೇ ಬೇಕಿದೆ, ಹಗರಣ ಮುಕ್ತ ಆಡಳಿತ ಕೊಡುವಲ್ಲಿ ಮೊದಿ ಯಶಸ್ವಿಯಾಗಿದ್ದಾರೆ, ರಾಷ್ಟ್ರೋನ್ನತೆಗಾಗಿ ಯುವ ಜನತೆಯಲ್ಲಿ ಸದೃಡ ಪ್ರಜ್ಞಾವಂತಿಕೆಯನ್ನು ಮೂಡಿಸಿ ಭಾರತಕ್ಕಾಗಿ ನರೇಂದ್ರ ಮೊದಿ ಎಂಬ ಹೆಸರಿಗೆ ಕಳಂಕ ಬರದ ರೀತಿಯಲ್ಲಿ ನೊಡಿಕೊಂಡಿದ್ದಾರೆ ಆರೇಳು ದಶಕಗಳ ಕಾಲ ದೇಶವನ್ನೆ ತಮ್ಮ ಪಕ್ಷದ ಆಸ್ತಿ ಎಂಬಂತೆ ಮಾಡಿಕೊಂಡಿದ್ದ ಕಾಂಗ್ರೇಸ್ನ್ನು ಅದಃ ಪತನಕ್ಕೆ ಮೊದಿ ಪಣ ತೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಕರಾಳ ದಿನಗಳನ್ನು ಅನುಭವಿಸುವಂತೆ ಮಾಡಿದಲ್ಲದೆ ಕನರ್ಾಟಕದಲ್ಲಿ ಸಮ್ಮಿಶ್ರ ಸಕರ್ಾರ ರಚಿಸುವಂತಹ ಮಟ್ಟಕ್ಕೆ ಕಾಂಗ್ರೇಸ್ ಬಂದಿಳಿದಿದೆ ಜೊತೆಗೆ ದೇಶದ ಗಡಿ ಕಾಯುವ ಯೋಧರ ಸುರಕ್ಷತೆ ಮತ್ತು ದೇಶದ ಸಂರಕ್ಷಣೆಯ ದೃಷ್ಟಿಯಿಂದ ತೆಗೆದುಕೊಂಡ ನಿಧರ್ಾರಗಳು ಮೊದಿಯನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿವೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ಫಕ್ಕಿರಪ್ಪ ಮಾದರ, ಭಾಜಪ ಮುಖಂಡರು, ಯುವ ಮೋಚರ್ಾ ಪಧಾದಿಕಾರಿಗಳು, ಮೊದಿ ಅಭಿಮಾನಿಗಳು ಜೊತೆಗೆ ಟೀಮ್ ಮೊದಿ ಸಿಬ್ಬಂದಿ ಇದ್ದರು.