ಕನ್ನಡದ ಪ್ರಬುದ್ಧತೆ ಹೆಚ್ಚಿಸಿದ ಶರಣರ ಸದನ ಪುಸ್ತಕ: ಡಾ. ಪುಷ್ಪಾ ಬಸನಗೌಡರ

Sharanara Sadan Book, which increased the maturity of Kannada: Dr. Pushpa Basana Gowda

ಕನ್ನಡದ ಪ್ರಬುದ್ಧತೆ ಹೆಚ್ಚಿಸಿದ ಶರಣರ ಸದನ ಪುಸ್ತಕ: ಡಾ. ಪುಷ್ಪಾ ಬಸನಗೌಡರ 

ಧಾರವಾಡ 15: ಭಾರತ ಹುಣ್ಣಿಮೆ ದಿನ ನಿವೃತ್ತ ಆರ್ಮಿ ಕ್ಯಾಪ್ಟನ್ ಬಿ.ಬಿ.ಚಕ್ರಸಾಲಿ ಅವರ ಪುಸ್ತಕ ಬಿಡುಗಡೆ ಮಾಡಿದ್ದು ನನ್ನ ಸೌಭಾಗ್ಯ. ಛಂದಸ್ಸು ಮತ್ತು ಷಟ್ಪದಿಗಳಲ್ಲಿ ಬರೆದಿರುವ ಈ ಪುಸ್ತಕ ಚಿಕ್ಕದಾದರೂ ಚೊಕ್ಕದಾಗಿ ಶರಣರ ಸದನ ಎಂಬ ಕೃತಿ ಬರೆದಿದ್ದಾರೆ ಎಂದು ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕ ಡಾ. ಪುಷ್ಪಾ ಬಸನಗೌಡರ ಹೇಳಿದರು. 

ಕುಲಪುರೋಹಿತ ಆಲೂರ ವೆಂಕಟರಾವ ಸಭಾಭವನದಲ್ಲಿ ನಮ್ಮ ಬಸವ ಸೇನೆ ಬೆಂಗಳೂರು ಹಾಗೂ ಧಾರವಾಡ ನ್ಯೂಸ್ ಆಶ್ರಯದಲ್ಲಿ ನಿವೃತ್ತ ಕ್ಯಾಪ್ಟನ್ ಬಿ.ಬಿ.ಚಕ್ರಸಾಲಿ ರಚನೆಯ ಶರಣರ ಸದನ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಬಸವ ಶ್ರೀ ಹಾಗೂ ಬಸವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. 

ಶರಣರ ಸದನ ಪುಸ್ತಕದಲ್ಲಿ ಐವತ್ಮೂರು ವಿಷಯಗಳನ್ನು ಒಳಗೊಂಡಿದೆ. ಆರು ಷಟ್ಬಧಿಗಳಲ್ಲಿ ಪದ್ಯವನ್ನು ರಚನೆ ಮಾಡಿದ್ದಾರೆ. ಲೇಖಕರು ಶರಣರ ನಡೆನುಡಿಗಳ ಬಗ್ಗೆ ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ ಎಂದು  ಹೇಳಿದರು. ಮನಗುಂಡಿ ಗುರುಬಸವ ಮಹಾಮನೆಯ ಬಸವಾನಂದ ಶ್ರೀಗಳು ಸಾನಿಧ್ಯ ವಹಿಸಿ ಆಶೀವರ್ಚನ ನೀಡಿ, ಇಂದಿನ ಮಾಧ್ಯಮಗಳು ಕೆಟ್ಟದ್ದನ್ನು ಹೆಚ್ಚು ಹೆಚ್ಚಾಗಿ ತೋರಿಸುತ್ತಾರೆ. ಆದರೆ ಅದೇ ಒಳ್ಳೆಯದನ್ನು ಮಾಡಿರುವವರ ಬಗ್ಗೆ ತೋರಿಸುವದಿಲ್ಲ ಇದು ಬಹಳಷ್ಟು ನೋವಿನ ಸಂಗತಿ.  ಆದರೆ ಒಳ್ಳೆಯ ಸುದ್ದಿಗೆ ಹೆಚ್ಚಿನ ಆದ್ಯತೆ ನೀಡಲಿ ಎಂದು ಮಾಧ್ಯಮಗಳಿಗೆ ಸಲಹೆ ನೀಡಿದರು.  

ನಮ್ಮ ಬಸವಸೇನೆ, ಬೆಂಗಳೂರು ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಪತ್ರಕರ್ತರ ಅಕಾಡೆಮಿ ರಾಜ್ಯಾಧ್ಯಕ್ಷ ಲೋಕೇಶ ಮೂರ್ತಿ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಉತ್ತಮ ಹಾಗೂ ಪ್ರಶಸ್ತಿಗೆ ಯೋಗ್ಯವಾಗಿರುವಂತಹ ವ್ಯಕ್ತಿಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು. 

ಮನಸೂರಿನ ರೇವಣಸಿದ್ದೇಶ್ವರ ಮಹಾಮಠದ ಡಾ. ಬಸವರಾಜ ದೇವರು ಅವರು, ಸಾಮಾಜಿಕ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಬಸವ ಶ್ರೀ ಹಾಗೂ ಬಸವ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಂಕರ ಗಂಗಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ, ಪತ್ರಕರ್ತೆ ಹಾಗೂ ವಕೀಲ ರಮ್ಯಾ ವರ್ಷಿಣಿ ಅವರು ಬಸವಶ್ರೀ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿ ಯಾವುದೇ ವೃತ್ತಿ ಇರಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಮನುಷ್ಯ ಜನ್ಮ ಸ್ವಾರ್ಥಕ. ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ನೀಡುವುದು ಅತೀ ಅವಶ್ಯಕವಾಗಿದೆ ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧಿಕ್ಷಕರಾದ ವಿ. ಕೃಷ್ಣಮೂರ್ತಿ,  ಮಹಾಂತೇಶ ಬೇತೂರಮಠ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಧಾರವಾಡ ಜಿಲ್ಲಾಧ್ಯಕ್ಷ ಅಶೋಕ ಶೆಟ್ಟರ್ ಭಾಗವಹಿಸಿದ್ದರು. ಬಸವ ಶ್ರೀ ಪ್ರಶಸ್ತಿಯನ್ನು ಡಾ. ವೀಣಾ ಬಿರಾದಾರ, ಯಮನಪ್ಪ ಜಾಲಗಾರ, ಉಮರಖನ್ ಮೈ. ಚಪ್ಪರಬಂದ, ಡಾ. ಕುಮದ್ವತಿ ಶಂಕರಗೌಡ ಭರಮಗೌಡ್ರ, ಡಾ. ಲತಾ ಎಸ್‌. ಮುಳ್ಳೂರ, ಬಿ. ಆರ್‌. ಚಂದ್ರಶೇಖರ, ರಮ್ಯಾ ವರ್ಷಿಣಿ, ವಿಲಿಯಮ್ಸ್‌, ಸುಲೋಚನಾ ಕೆ. ಮುದಲಿಯಾರ, ವಿಜಯಲಕ್ಷ್ಮೀ ಕಮ್ಮಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಬಸವ ರತ್ನ ಪ್ರಶಸ್ತಿಯನ್ನು ಮಹಾಂತೇಶ ಬ. ಬಡ್ಲಿ, ಬಸವರಾಜ ಎಸ್‌. ಕುದರಿ, ಸುನಂದಾ ರಾಮ್ ಕರಿಗಾರ, ಗಂಗಾಂಬಿಕೆ ತಿಪ್ಪಣ್ಣ ಕುರುಬರ, ಗಂಗವ್ವ ಮಲ್ಲಿಕಾರ್ಜುನ ಮುಗಳಿ, ನೇತ್ರಾವತಿ ಮಡ್ಲಿ, ಡಾ. ಭೀಮಾಶಂಕರ ಎಂ.ಆರ್‌., ಕು. ಸುವರ್ಣಾ ಬಿ. ಸುರಕೋಡ, ಸತೀಶ ಎಸ್‌. ಸರ್ಜಾಪೂರ, ರತ್ನಾ ಗೋಧಿ, ರತ್ನಕುಮಾರ, ಅಶ್ವತಪ್ಪ, ಶ್ರೀನಿವಾಸ ಅವರೊಳ್ಳಿ, ಮಂಜುನಾಥ ತಿಮ್ಮಣ್ಣ ಹಿರೇಮನಿ, ಸಿದ್ಧಾರ್ಥ ಪಾತ್ರೋಟಿ, ಬಸವರಾಜ ಪಾತ್ರೋಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಪತ್ರಕರ್ತರು ಲಿಂಗರಾಜ ಪಾಟೀಲ, ರಮಾನಂದ ಕಮ್ಮಾರ, ಚಂದ್ರಶೇಖರ ಹಿರೇಮಠ, ಈರಣ್ಣ ಗುರಿಕಾರ, ಕೋಣಪ್ಪ ಸಾಲೋಟಗಿ ರಾಜಮಲ್ಲು,  ಬಸವರಾಜ ರುದ್ರಾಪೂರ, ಉಳವೇಶ ದುಂಡಾನಟ್ಟಿ ಅವರನ್ನು ಸನ್ಮಾನಿಸಲಾಯಿತು.