ಶಂಕರಲಿಂಗ ಜಾತ್ರೆ: ಶಾಂತತಾ ಸಭೆ

Shankarlinga Jatra: Shantata Sabha

ಶಂಕರಲಿಂಗ ಜಾತ್ರೆ: ಶಾಂತತಾ ಸಭೆ 

ಸಂಕೇಶ್ವರ 04: ಸ್ಥಳೀಯ ಪೋಲಿಸ ಠಾಣೆಯಲ್ಲಿ ನಿನ್ನೆ ಜಾತ್ರೆಯ ನಿಮಿತ್ಯ ಶಾಂತತಾ ಸಭೆ ನಡೆಯಿತು.  ಸಭೆಯಲ್ಲಿ ನಗರದ ಗಣ್ಯ ವ್ಯಕ್ತಿ ಅಪ್ಪಾಸಾಹೇಬ ಶಿರಕೋಳಿ, ಸುನ್ನತ ಜಮಾತ ಕಮೀಟಿ ಚೇರಮನ ದಸ್ತಗೀರ ಬಾಬು ತೇರಣಿ, ದೀಲೀಪ ಹೊಸಮನಿ, ಚಿದಾನಂದ ಕರ್ದನ್ನವರ, ಸಂತೋಷ ಮುಡಶಿ, ಮಹೇಶ ಹಟ್ಟಿಹೊಳಿ, ಪ್ರಮೋದ ಹೊಸಮನಿ, ನಾಗೇಶ ಕಳ್ಳೊಳ್ಳಿ, ಪ್ರಕಾಶ ಹುದ್ದಾರ, ನಗರದ ಎಲ್ಲ ಯುವಕರು ಉಪಸ್ಥಿತರಿದ್ದರು. 

 ಸಂಕೇಶ್ವರ ಪೋಲಿಸ್ ಅಧಿಕಾರಿ ಆರ್‌. ಎಲ್‌. ಖೋತ ಇವರು ಶಂಕರಲಿಂಗ ಜಾತ್ರೆಯಲ್ಲಿ ಯಾವುದೇ ಗಲಾಟೆ ನಡೆಯಬಾರದು. ಜಾತಿ ಮತ ಪಂಥಗಳನ್ನು ಮರೆತು ಈ ಜಾತ್ರೆಯನ್ನು ಸೌಹಾರ್ದತೆಯಿಂದ ಯಶಸ್ವಿಗೊಳಿಸಬೇಕೆಂದು ನಾಗರಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಿರುಕಳ ತಂಟೆಗಳನ್ನು ಮಾಡಿದರೆ ತಾವು ಕಠಿಣ ಕ್ರಮಕೈಗೊಳ್ಳಲಾಗವುದು ಎಂದು ಪೋಲಿಸ್ ಸಬ್ ಇನಸ್ಪೆಕ್ಟರ ಖೋತ ಅವರು ನಗರದ ಜನತೆಯಲ್ಲಿ ಮನವಿ ಮಾಡಿಕೊಂಡರು.