ಶಂಕರಲಿಂಗ ರಥ, ಅನ್ನಪೂರ್ಣೇಶ್ವರಿ ಕೋಠಿ ಪೂಜೆ

Shankaralinga Ratha, Annapurneswari Kothi Puja

ಶಂಕರಲಿಂಗ ರಥ, ಅನ್ನಪೂರ್ಣೇಶ್ವರಿ ಕೋಠಿ ಪೂಜೆ 

ಸಂಕೇಶ್ವರ 04: ಸೋಮವಾರ ದಿ: 3ರಂದು ರಾತ್ರಿ 9 ಗಂಟೆಗೆ ಅನ್ನಪೂರ್ಣೇಶ್ವರಿ ಕೋಠಿ ಪೂಜೆ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು ಮಾರ್ಗದರ್ಶನದಲ್ಲಿ ಜರುಗಿತು. 

 ಶಂಕರಾಚಾರ್ಯ ಮಠದಲ್ಲಿ ಇರುವ ಎಲ್ಲ ದೇವತೆಗಳಿಗೆ ಆಮಂತ್ರಿಸಿ ಜಾತ್ರೆಯಲ್ಲಿ ಯಾವುದೇ ರೀತಿಯ ಅಡಕು ತೊಡಕುಗಳು ಬಾರದಂತೆ ಎಲ್ಲ ದೇವತೆಗಳಲ್ಲಿ ಶ್ರೀಗಳು ಪ್ರಾರ್ಥಿಸಿದರು.  

ಮಂಗಳವಾರ ದಿ. 4ರಂದು ಬೆಳಿಗ್ಗೆ 11 ಗಂಟೆಗೆ ರಥ ಪೂಜೆ, ನವಗ್ರಹ ಹೋಮ, ರಥಸ್ಥ ದೇವತಾ ಪೂಜೆ, ಹೋಮ-ಬಲಿದಾನ, ಮೈರಾಳ ಬ್ರಹ್ಮ ಪೂಜೆ ಮಹಾನೈವೇದ್ಯ ಜರುಗಿದೆ. ಈ ಪೂಜೆಗಳಲ್ಲಿ ಶ್ರೀಮಠದ ಪುರೋಹಿತ ಶ್ರೀಪಾದ ಉಪಾಧ್ಯೆ, ಮದನ ಪುರಾಣಿಕ, ಸಂತೋಷ ಜೋಶಿ, ಅಮೋಲ ಹೆಬಳಿಕರ, ಅವಧೂತ ಜೋಶಿ, ನಗರದ ಗಣ್ಯ ವ್ಯಕ್ತಿ, ಅಪ್ಪಾಸಾಹೇಬ ಶಿರಕೋಳಿ, ಬಂಡು ಹತನೂರೆ, ಬಾಳು ವೈರಾಗಿ, ಅವಿನಾಶ ನಲವಡೆ, ದೀಪಕ ಭಿಸೆ, ದುಂಡಪ್ಪಾ ಕೇಸರಕರ, ಮುಂತಾದವರು ಉಪಸ್ಥಿತರಿದ್ದರು. 

ಬುಧವಾರ ದಿ. 5ರಂದು ಮಧ್ಯಾಹ್ನ 2 ಗಂಟೆಗೆ ರಥವು ಶ್ರೀಮಠದಿಂದ ನಾರಾಯಣೇಶ್ವರ ಮಂದಿರಕ್ಕೆ ಸದ್ಭಕ್ತರೆಲ್ಲರೂ ಸೇರಿ ಹಗ್ಗ ಜಗ್ಗುವ ಮುಖಾಂತರ ರಥವನ್ನು ಕೊಂಡಯ್ಯುಲಾಗುವುದು.