ಶಂಭು ಶಾಸ್ತ್ರಿ ಜೀವನ ಚಿತ್ರಣ ಕೃತಿ ಬಿಡುಗಡೆ

ಲೋಕದರ್ಶನ ವರದಿ

ಹೊನ್ನಾವರ 16: ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಶೃಂಗಾರ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಲಕ್ಷ್ಮಿ ವೆಂಕಟೇಶ ಶಾಸ್ತ್ರಿ ರಚಿಸಿದ ಶಂಭು ಶಾಸ್ತ್ರಿ ನಾಜಗಾರ ಇವರ ಜೀವನ ಚಿತ್ರಣ ಒಳಗೊಂಡ ಪುರೋಹಿತ ಕೃತಿ ಬಿಡುಗಡೆ ಕಾರ್ಯಕ್ರಮ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಕೃತಿ ಬಿಡುಗಡೆ ಮಾಡಿದ ಕೃಷ್ಣರಾವ್ ಮಾತನಾಡಿ ನಾಜಗಾರದ ಪುಟ್ಟ ಊರಿನಲ್ಲಿ ಜನಿಸಿದ ಶಂಬುಶಾಸ್ತ್ರಿಯವರು ಪುರೋಹಿತ ವೃತ್ತಿಯ ಜೀವನ ಶೈಲಿಯನ್ನು ಪುಸ್ತಕ ರೂಪದಲ್ಲಿ ತರುವ ಮೂಲಕ ಲಕ್ಷ್ಮಿನಾರಾಯಣ ಶಾಸ್ತ್ರಿಯವರು ಕೃತಿಯು ತುಂಬಾ ಸುಂದರವಾಗಿದೆ. ಕೇವಲ ವೃತ್ತಿಯ ಜೊತೆಯ ಪ್ರವೃತ್ತಿಯಲ್ಲಿ ಸಾಹಿತ್ಯದ ಕಡೆ ಒಲವು ಮೂಡಿಸಿಕೊಂಡು ಈ ಕೃತಿಯ ಮೂಲಕ ಸದಾ ಕಾಲ ಶಂಭುಶಾಸ್ತ್ರಿಯವರನ್ನು ಚಿರಪರಿಚಿತರನ್ನಾಗಿ ಇಡಿಸುವ ಕಾಯಕ ಮಾಡಿದ್ದಾರೆ. ಇಂದು ಪುಸ್ತಕಗಳನ್ನು ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಇದನ್ನು ನಾವು ಮುಂದಿನ ಪೀಳಿಗಿಗೆ ಕಲಿಸಲು ನಮ್ಮ ಊರಿನಲ್ಲಿಯ ಸಾಧಕರನ್ನು ಪುಸ್ತಕದ ರೂಪದಲ್ಲಿ ಪರಿಚಿಯಿಸಿದಾಗ ಇದನ್ನು ಸಾಧಿಸಬಹುದು ಎಂದರು.

ಕೃತಿ ಪರಿಚಯದ ಮೂಲಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ನಿವೃತ್ತ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ ಪುಸ್ತಕ ಹಲವು ಸಂಭಂದವನ್ನು ಪರಿಚಯಿಸುವ ಜೊತೆ ಅವರನ್ನು ಇನ್ನಷ್ಟು ಹತ್ತಿರಗೊಳಿಸುವ ಕೆಲಸ ಮಾಡುತ್ತದೆ. ಆ ಸಾಲಿಗೆ ಸೇರುವ ಪುಸ್ತಕದಲ್ಲಿ ಇದು ಒಂದಾಗಿದೆ. ಪುರೋಹಿತ್ಯದ ಜೊತೆಜೊತೆಗೆ ಪುಸ್ತಕವನ್ನು ಸಮಾಜದ ಮುಂದಿಡುವುದು ಸುಲಭದ ಮಾತಲ್ಲ. ಪುಸ್ತಕದ ಅಭಿಮಾನ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಪೋತ್ಸಾಹಿಸುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಮುಂದಿನ ದಿನದಲ್ಲಿ ತಾಲೂಕಿನವರು ರಚಿಸಿದ ಹಲವಾರು ಪುಸ್ತಕಗಳ ಇವರ ಪೊತ್ಸಾಹದಿಂದ ಬಿಡುಗಡೆಯಾಗಲಿ ಎಂದು ಶುಭ ಹಾರೈಸಿದರು.

ಮೂಖ್ಯ ಅತಿಥಿಗಳಾಗಿ ಆಗಮಿಸಿದ ದ್ವಿಭಾಷಾ ಕವಿ ಕೃಷ್ಣ ಭಟ್, ನಾಗರಿಕ ಪತ್ರಿಕೆ ಸಂಪಾದಕರಾದ ಕೃಷ್ಣಮೂತರ್ಿ ಹೆಬ್ಬಾರ, ನಾರಾಯಣ ಯಾಜಿ ತಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರೋ ವಿಷ್ಣು ಜೋಶಿ ವಹಿಸಿ ಶಂಬು ಶಾಸ್ತ್ರಿ ನಾಜಗಾರ ರವರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಹೊನ್ನಾವರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಕೋಶಾಧಿಕಾರಿ ಪ್ರಶಾಂತ ಮೂಡಲಮನೆ ನಿರೂಪಿಸಿದರು, ಕಾರ್ಯದಶರ್ಿ ಶಶಿದರ ಬಂಡಾರಿ ವಂದಿಸಿದರು, 

ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದಶರ್ಿ ಭವಾನಿಶಂಕರ, ಗೌರಿಶ ಶಾಸ್ರ್ತಿ ನಾಜಗಾರ, ಶಂಭು ಭಟ್, ಬಿ.ಆರ್.ಪಂಡಿತ, ಸುಧಾ ಬಂಡಾರಿ, ಜಿ ಎಸ್ ಹೆಗಡೆ, ಧನಂಜಯ ಹೆಗಡೆ ಹಾಗೂ ಸಾಹಿತ್ಯಾಸಕ್ತರು ಉಪಸ್ತಿತರಿದ್ದರು.