ಉಗರಗೋಳ(ತಾ.ಸವದತ್ತಿ) 07: ಉತ್ತರ ಕನರ್ಾಟಕ ಭಾಗದಲ್ಲಿ ಅಕ್ಷರ ದಾಸೋಹ ಮತ್ತು ಅನ್ನ ದಾಸೋಹದ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸುತ್ತಿರುವ ಮಠಮಾನ್ಯಗಳ ಕಾರ್ಯ ಶ್ಲಾಘನಿಯ ಎಂದು ಶಾಸಕ ಆನಂದ ಮಾಮನಿ ಹೇಳಿದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ಶಾಸಕರ ಅನುದಾನದಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ಉಗ್ರಾಣದ ಕಟ್ಟಡ ನಿಮರ್ಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಧರ್ಮ ಸಂಸ್ಕೃತಿ ಉಳಿಯಬೇಕು. ನಾಡಿನಲ್ಲೆಡೆ ಧರ್ಮ ಜಾಗೃತಿಯಾಗಬೇಕು. ಎಲ್ಲ ಮಠಗಳು ಭಾಷಾತೀತ, ಧಮರ್ಾತೀತ ಮತ್ತು ಜಾತ್ಯಾತೀತ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳ ಕಾರ್ಯ ನಿಜಕ್ಕೂ ಮೆಚ್ಚವಂತದ್ದು ಎಂದರು.
ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಹೆಚ್ಚಿನ ಮೂಲ ಸೌಕರ್ಯ ಒದಗಿಸಲು ಸಕರ್ಾರ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕು. ನಾನು ಅಗತ್ಯ ಸಹಕಾರ ನೀಡುವ ಎಂದು ಭರವಸೆ ನೀಡಿದ ಅವರು, ಕ್ಷೇತ್ರದಲ್ಲಿರುವ ಪ್ರತಿ ಗ್ರಾಮಕ್ಕೆ ರಸ್ತೆ, ಶುದ್ಧ ಕುಡಿಯುವ ನೀರು, ಶಿಕ್ಷಣಕ್ಕೆ ಹೇಚ್ಚಿನ ಒತ್ತು ನೀಡಲಾಗುವದೆಂದರು.
ನಿವರ್ಾಣೇಶ್ವರ ಮಠದ ಗುರುಮಾಹಾಂತ ಶ್ರೀಗಳು, ನಿವೃತ್ತ ಅಧಿಕಾರಿ ಎಮ್ ಆರ್ ಹಿರೇಮಠ, ಜಿಪಂ ಸದಸ್ಯ ಗುರುನಾಥ ಗಂಗಲ, ಗ್ರಾಪಂ ಅಧ್ಯಕ್ಷ ಕೃಷ್ಟಪ್ಪ ಲಮಾಣಿ, ಬಾಬಣ್ಣಾ ಹನಶಿ, ಜಗದನಗೌಡ ಗಂದಿಗವಾಡ, ಮುತ್ತಯ್ಯ ತೋರಗಲ್ಲಮಠ ಹಾಗೂ ಗ್ರಾಮಸ್ಥರು ಇದ್ದರು.