ಮೂರು ಕಡೆ ಸರಣಿ ಕಳ್ಳತನ: ನಗದು ದೋಚಿ ಪರಾರಿ

Serial theft in three places: Cash snatched and fled

ಮೂರು ಕಡೆ ಸರಣಿ ಕಳ್ಳತನ: ನಗದು ದೋಚಿ ಪರಾರಿ

ಹೂವಿನಹಡಗಲಿ 28: ಪಟ್ಟಣದ ಮುಖ್ಯ ರಸ್ತೆಯಲ್ಲಿ  ಗುರುವಾರ ರಾತ್ರಿ 1.30ಕ್ಕೆ  ಬಿ.ಮಾಟ್‌. ಬಟ್ಟೆ ಅಂಗಡಿ ಮತ್ತು ಎಲೆಕ್ಟ್ರಾನಿಕ್ ಅಂಗಡಿ ಸೇರಿ ಮೂರು ಕಡೆ ಕಳ್ಳತನವಾಗಿದೆ. ರಾಮಸ್ವಾಮಿ ಬಡವಾಣೆ ಮುಖ್ಯ ರಸ್ತೆಯಲ್ಲಿ ಮಂಜುನಾಥ ಸೇರಿದ ಬಿ.ಮಾಟ್‌. ಬಸ್ ನಿಲ್ದಾಣದ ಬಳಿ ಬಟ್ಟೆ ಅಂಗಡಿ ಮತ್ತು ನಾಗಣೇಚಿ ಎಲೆಕ್ಟ್ರಾನಿಕ್ ಅಂಗಡಿ  ಶಟರ್ಗಳ ಬೀಗಗಳನ್ನು ಕಳ್ಳರು ಮುರಿದು, ನಗದು ಹಾಗೂ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.  ಪಟ್ಟಣದ ಹಿರೇಹಡಗಲಿ ಬ್ಯೆಪಾಸ್ ರಸ್ತೆ .ಮಾಟ್ ನಲ್ಲಿ ಶಟರ್ ಮುರಿದು 17 ಸಾವಿರ ನಗದು ಕಳ್ಳತನ ಮಾಡಿದ್ದಾರೆ. ನಂತರ ಬಸ್ ನಿಲ್ದಾಣ ದ ಬಳಿ  ಬಟ್ಟೆ ಅಂಗಡಿ ಹಾಗೂ ನಾಗಣೇಚಿ ಎಲೆಕ್ಟ್ರಾನಿಕ್ ಅಂಗಡಿ ಶಟರ್ ಮುರಿದು ಸುಮಾರು .1.12ಲಕ್ಷ ರೂ.ನಗದು ದೋಚಿ ಪರಾರಿಯಾಗಿದ್ದಾರೆ.ಮುದೇನೂರು ಲಕ್ಷ್ಮಣ ಸೇರಿದ ಬ್ಯೆಕ್ ಕಳ್ಳತನ ಮಾಡಿದ್ದಾರೆ. ಎಂದಿನಂತೆ ಶುಕ್ರವಾರ ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯಲು ಆಗಮಿಸಿದಾಗ ವೇಳೆ ಕಳ್ಳತನ ವಾಗಿದೆ ತಿಳಿದು ಬಂದಿದೆ.ಈ ಬಗ್ಗೆ ಸ್ಥಳಕ್ಕೆ ಹೊಸಪೇಟೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಮೂರು ಕಡೆಗಳಲ್ಲಿ ಸರಣಿ ಕಳ್ಳತನ ಹಿಂದೆ ಗ್ಯಾಂಗ್ ಇರುವ ಅನುಮಾನವಿದೆ ಕಳ್ಳತನ ಕ್ರತ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದ್ದು.ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮಾಡುವುದಾಗಿ ಸಿಪಿಐ ದೀಪಕ್ ಆರ್‌.ಬೋಸರೆಡ್ಡಿ.ಪಿಎಸ್‌ಐ ವಿಜಯ ಕೃಷ್ಣ ತಿಳಿಸಿದ್ದು .ಮುಂಡರಗಿ, ಹಗರಿ, ಬೊಮ್ಮನಹಳ್ಳಿ ಸರಣಿ ಕಳ್ಳತನ ಮಾದರಿಯಲ್ಲಿ ನಡೆದಿದೆ ಎಂದು ಅನುಮಾನಿಸಲಾಗಿದೆ.