ಹಿರಿಯ ಜೀವಿ ಜಯಶ್ರೀ ಆಲೂರು ದೇಹದಾನ
ಬೆಳಗಾವಿ 12: ಹನುಮಾನ ನಗರ ನಿವಾಸಿ ಜಯಶ್ರೀ ಸಂಗಮನಾಥ ಆಲೂರು (85) ಇಂದು ನಿಧನರಾಗಿದ್ದಾರೆ. ಮೃತರ ಅಂತಿಮ ಇಚ್ಛೆಯಂತೆ ಡಾ. ರಾಮಣ್ಣವರ ಚಾರಿಟೇಬಲ ಟ್ರಸ್ಟ ಬೈಲಹೊಂಗಲ ಮುಖಾಂತರ ಬೆಳಗಾವಿ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನವಾಗಿ ನೀಡಿ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ದೇಹದಾನ ಮಾಡಿದ ಆಲೂರ ಕುಟುಂಬದವರಿಗೆ ಕೃತಜ್ಞತೆ ತಿಳಿಸಿದ್ದಾರೆ. ಮೃತರಿಗೆ ಓರ್ವ ಪುತ್ರ ರಾಜನ್, ಇಬ್ಬರು ಪುತ್ರಿಯರು ಉಮಾ ಜಗದೀಶ ಹಿರೇಮಠ ಹಾಗೂ ಹೇಮಲತಾ ಕಿರಣ್ ಕುಂದರಗಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.