ಧಾರವಾಡ: ಜೀವನದಲ್ಲಿ ಅಂಕ ಗಳಿಕೆಯೇ ಮುಖ್ಯವಲ್ಲ ಅದರೊಂದಿಗೆ ಜೀವನದ ಮಾನವೀಯ ಮೌಲ್ಯಗಳನ್ನಿಟ್ಟುಕೊಂಡು ನಂಬಿಕೆ, ಆತ್ಮವಿಶ್ವಾಸದಿಂದ ಬದುಕುವುದು ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿವರ್ಾಹಕಾಧಿಕಾರಿಗಳಾದ ಡಾ.ಬಿ.ಸಿ ಸತೀಶ ಅಭಿಪ್ರಾಯಪಟ್ಟರು.
ನೌಕರ ಸಂಘದ ಸಭಾಭವನದಲ್ಲಿ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘ ಜಿಲ್ಲಾ ಘಟಕ ವತಿಯಿಂದ ಜರುಗಿದ ಪ್ರತಿಭಾ ಪುರಸ್ಕಾರ ಹಾಗೂ ಧಾರವಾಡ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಎಸ್ ಕೆ ರಾಮದುರ್ಗ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಮಕ್ಕಳಲ್ಲಿ ದೈಹಿಕ ಸದೃಡತೆ ಜೊತೆಗೆ ಮಾನಸಿಕ ಸದೃಢತೆ ಅತ್ಯಂತ ಅವಶ್ಯಕವಾಗಿದ್ದು ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಪಾಲಕರು ಪ್ರೋತ್ಸಾಹಿಸಬೇಕು. ಮಕ್ಕಳು ಕಡಿಮೆ ಅಂಕ ಗಳಿಸಿದಾಗ ಮಾನಸಿಕ ವೇದನೆ ಅನುಭವಿಸಿದೇ ಮುಂಬರುವ ದಿನದಲ್ಲಿ ಎದುರಾಗುವ ಪರೀಕ್ಷೆಗೆ ಸಿದ್ದತೆ ನಡೆಸಿ ದೈರ್ಯದಿಂದ ಪರೀಕ್ಷೆ ಎದುರಿಸುವಂತಾಗಬೇಕು. ಸುತ್ತಮುತ್ತಲಿನ ವಾತಾವರಣವನ್ನು ನೋಡಿದರೆ ಮೌಲ್ಯಯುತವಾದ ಸಂಭಂಧಗಳು ಮರೆಯಾಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಶಿಕ್ಷಕರ, ಪಾಲಕರ ಮೇಲಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. ಪ್ರಸ್ತುತ ಅವಕಾಶಗಳನ್ನು ಸಮರ್ಥವಾಗಿ ವಿದ್ಯಾಥರ್ಿಗಳು ಬಳಸಿಕೊಳ್ಳುತ್ತಿದ್ದರೂ ತಂದೆ ತಾಯಿ ಮಕ್ಕಳ ನಡುವಿನ ಸಂಭಂದಗಳು ಮರೆಯಾಗುತ್ತಿವೆ ಇದು ಬೇಸರದ ಸಂಗತಿ. ಮಕ್ಕಳಾದವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಗುರು ಹಿರಿಯರ, ತಂದೆ ತಾಯಿಯ ಮಾರ್ಗದರ್ಶನ ಪಡೆದು ಈ ದೇಶದಲ್ಲಿ ನೀವು ಗೌರವಿಸಲ್ಪಡುವಂತಾಗಬೇಕು ಎಂದು ಹೇಳಿದರು.
ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಕೆ.ರಾಮು ಮಾತನಾಡಿ, ನೌಕರರ ಬೇಡಿಕೆಗಳ ಮತ್ತು ಸಮಸ್ಯೆಗಳನ್ನು ಇಡೇರಿಸಿಕೊಳ್ಳುವುದರ ಜತೆಗೆ ಪ್ರತಿಭಾವಂತ ಮಕ್ಕಳನ್ನು ಹಾಗೂ ಸಾಧಕರನ್ನು ಸತ್ಕರಿಸುವ ಇಂಥಹ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ. ಇದರಿಂದ ನಮ್ಮ ಸಂಘವು ಇಡೀ ರಾಜ್ಯಕ್ಕೆ ಮಾದರಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.
ಎಐಪಿಟಿಎಫ್ ನ ಉಪಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ನಿತ್ಯ ಜೀವನದ ಜಂಜಾಟದಲ್ಲಿ ಕಾರ್ಯದೊತ್ತಡದಲ್ಲಿ ಸಂಘಟನೆ ಮಾಡುವ ಕಾರ್ಯ ಮುಖ್ಯವಾಗಿರುತ್ತದೆ.
ಅದರಲ್ಲೂ ಸಮಾಜಮುಖಿಯಾಗಿ ಕೆಲಸ ಮಾಡುವುದು ಕಷ್ಟದಾಯಕವಾದ ಕಾರ್ಯ. ಅಂತಹ ಕಾರ್ಯದಲ್ಲಿ ಧಾರವಾಡದ ನೌಕರರ ಸಂಘ ಸಮರ್ಥವಾಗಿ ನಿರ್ವಹಿಸಿ ಸಮಾಜಮುಖಿಯಾಗಿದೆ ಎನ್ನುವುದು ತುಂಬಾ ಸಂತೋಷಕರ ಸಂಗತಿ ಎಂದು ಹೇಳಿದರು.
ನೌಕರರ ಸಂಘದಿಂದ ಅಭಿನಂದನೆ ಸ್ವೀಕರಿಸಿದ ಮಾಜಿ ಜಿಲ್ಲಾ ಅಧ್ಯಕ್ಷರಾದ ಎಸ್.ಕೆ ರಾಮದುರ್ಗ,ಜಿಲ್ಲಾ ಘಟಕದ ಅಧ್ಯಕ್ಷ ಎಸ್ ಎಫ್ ಸಿದ್ಧನಗೌಡರ ಅಧ್ಯಕ್ಷತೆವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ರಾಜ್ಯ ಪರಿಷತ್ತ್ ಸದಸ್ಯ ಎಚ್.ಬಿ.ದಳವಾಯಿ, ಕೋಶಾದ್ಯಕ್ಷ ಪ್ರತಿಭಾ ರಾಣೆ, ನೌಕರ ಭವನದ ಕಾರ್ಯದಶರ್ಿ ಬಿ.ಎಮ್.ಕವಳಿಕಾಯಿ ಇದ್ದರು. ಸಂಘದ ಪ್ರದಾನ ಕಾರ್ಯದಶರ್ಿ ಎಸ್.ಜಿ.ಸುಬ್ಬಾಪೂರಮಠ ಸ್ವಾಗತಿಸಿದರು. ಸಂಘದ ವಾತರ್ಾ ಕಾರ್ಯದಶರ್ಿ ಮಾತರ್ಾಂಡಪ್ಪ ಕತ್ತಿ ನಿರೂಪಿಸಿದರು.
ಶಿಕ್ಷಕ ವಿ.ಜಿ.ಕಂಬಿ ಪುರಸ್ಕಾರದ ಕಾರ್ಯಕ್ರಮ ನಡೆಸಿಕೊಟ್ಟರು. ರಮೇಶ ಲಿಂಗದಾಳ ಗಣ್ಯರಿಗೆ ಗೌರವಿಸುವ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷ ಎಸ್.ಬಿ.ಕೇಸರಿ ವಂದಿಸಿದರು.ಸಮಾರಂಭದಲ್ಲಿ ಮಾಜಿ ಅಧ್ಯಕ್ಷ ಎಸ್.ಕೆ.ರಾಮದುರ್ಗ ಮತ್ತು ಹೇಮಾ ರಾಮದುರ್ಗ ದಂಪತಿಗಳಿಗೆ ಅಭಿನಂದಿಸಲಾಯಿತು. ನಂತರ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಪಡೆದ 167 ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ನವಲಗುಂದ ತಾಲೂಕಿನ ಅಧ್ಯಕ್ಷರಾದ ವಾಯ್ ಎಚ್ ಬಣವಿ, ಕಲಘಟಗಿ ತಾಲೂಕ ಅಧ್ಯಕ್ಷರಾದ ಜವಳಿ, ಹುಬ್ಬಳ್ಳಿ ಶಹರದ ತಾಲೂಕಿನ ಅಧ್ಯಕ್ಷರಾದ ಪ್ರಲ್ಹಾದ ಗೆಜ್ಜಿ, ಹುಬ್ಬಳ್ಳಿ ಗ್ರಾಮೀಣ ಘಟಕದ ತಾಲೂಕಿನ ಅಧ್ಯಕ್ಷರಾ ಅಯ್ಯನಗೌಡರ, ರಾಜಶೇಖರ ಹೊನ್ನಪ್ಪನವರ, ಶಾಂತಾ ಶೀಲವಂತ, ಮುಂತಾದವರು ಹಾಜರಿದ್ದರು.