ಕೃಷಿಕ ಸಮಾಜದ ನೂತನ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ
ರಾಣೇಬೆನ್ನೂರು 04; ನಗರದ ಹಲಗೇರಿ ರಸ್ತೆಯ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಇತ್ತೀಚಿಗೆ ರೈತ ದಿನಾಚರಣೆ ಕಾರ್ಯಕ್ರಮವು ನಡೆಯಿತು. ಇಲ್ಲಿನ ಸಹಾಯಕ ನಿರ್ದೇಶಕರ ಕಾರ್ಯಾಲಯ ಭವನದಲ್ಲಿ ನಡೆದ ಸಭೆಯಲ್ಲಿ
ತಾಲ್ಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆಯು ಸಹ ನಡೆಯಿತು. ನೂತನ ಅಧ್ಯಕ್ಷರಾಗಿ ಹೊಳೆ ಆನ್ವೇರಿ ಗ್ರಾಮದ ಬಸನಗೌಡ ಕೋಟೆ ಗೌಡ್ರು, ಉಪಾಧ್ಯಕ್ಷರಾಗಿ ಚನ್ನಬಸಪ್ಪ ಕೊಂಬಳಿ, ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಎಂ.ಎಚ್.ಪಾಟೀಲ ಖಜಾಂಚಿಯಾಗಿ ಪ್ರಕಾಶ್ ದೇಶಿ,ಪ್ರಧಾನ ಕಾರ್ಯದರ್ಶಿಯಾಗಿ ಯಲ್ಲಪ್ಪ ಓಲೇಕಾರ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳಿಗೆ ರೈತರು ಹಾರ್ದಿಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.