ಕೆ ವೀರಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ 19 : ರಂದು ತಾಲೂಕಿನ ಕೆ ವೀರಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆಯನ್ನು ನಡೆಸಲಾಯಿತು ಎಂದು ಚುನಾವಣಾ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘದ ಅಧ್ಯಕ್ಷರಾಗಿ ಡಿ ಬೋಗಾ ರೆಡ್ಡಿ, ಅಧ್ಯಕ್ಷರಾಗಿ ಡಿ ವಿರುಪಾಕ್ಷಗೌಡ ಮತ್ತು ನಿರ್ದೇಶಕರಾಗಿ, ಕೆ ವೀರರೆಡ್ಡಿ ಎಸ್ ವಿರಯ್ಯ ವೈ ಯುರಣ್ಣ, ಎಚ್ ಇಂದು ಶೇಖರ್ ಗೌಡ, ಎಂ ತಿಪ್ಪಮ್ಮ, ವೈಸುಭದ್ರಮ್ಮ, ಜಿಎಂ ಲಕ್ಷ್ಮಿ, ಪಿ ಮಾಬುಸಾಬ್, ಟಿ ವೆಂಕಟರಮಣ, ಬಿ ಈರಣ್ಣ ಸೇರಿದಂತೆ 12 ಜನ ನಿರ್ದೇಶಕರು ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಪ್ರಾಣೇಶ್ ಮತ್ತು ಸಂಘದ ಸಿ ಈ ಓ ಬಿ ಕೆ ಸಿದ್ದನಗೌಡ ತಿಳಿಸಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ ಬೋಗಾ ರೆಡ್ಡಿ ಮತ್ತು ಉಪಾಧ್ಯಕ್ಷರಾದ ಬಿ ವಿರುಪಾಕ್ಷಗೌಡ ಮಾತನಾಡಿ 1995 ರಿಂದ ನಮ್ಮನ್ನು ಸಹಕಾರ ಸಂಘದ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ ಇದಕ್ಕಾಗಿ ನಾವು ಕಾರ್ಯಕಲ್ಲು ಮತ್ತು ವೀರಾಪುರ ಗ್ರಾಮದ ಸಂಘದ ಸದಸ್ಯರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದರು.