ಅಂಜುಮನ್-ಎ-ಖಿದ್ಮತ್-ಎ-ಇಸ್ಲಾಂ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆ
ಕಂಪ್ಲಿ 16: ಅಂಜುಮನ್-ಎ-ಖಿದ್ಮತ್-ಎ-ಇಸ್ಲಾಂ ಕಾರ್ಯಕಾರಿ ಸಮಿತಿಯ 11 ಸದಸ್ಯ ಸ್ಥಾನಗಳಿಗೆ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಕಾಲೇಜಿನ ಮೂರು ಮತಗಟ್ಟೆಯಲ್ಲಿ ಚುನಾವಣೆ ಶಾಂತಿಯುತವಾಗಿ ಭಾನುವಾರ ನಡೆಯಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯು, ಬೆಳಿಗ್ಗೆಯಿಂದ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಇಲ್ಲಿನ ಚುನಾವಣೆಯಲ್ಲಿ 11 ಸ್ಥಾನಗಳಿಗೆ ಕಣದಲ್ಲಿ 32 ಜನ ಸ್ಪರ್ಧಿಸಿದ್ದರು.
ನಂತರ ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು 1149 ಜನ ಮತದಾರರ ಪೈಕಿ, 1090 ಜನ ಮತದಾರರು ಮತ ಹಾಕಿದರು. ನಂತರದ ಚುನಾವಣಾ ಫಲಿತಾಂಶದಲ್ಲಿ ಕೆ.ಮೆಹಬೂಬ್(494), ಕೆ.ಮಸ್ತಾನ್ ವಲಿ(412), ಎನ್.ಯುನೂಸ್(422), ಅತ್ತಾವುಲ್ಲಾ ರೆಹಮಾನ್(407), ಎ.ಮೌಲಾ ಹುಸೇನ್(386), ಬಿ.ತೌಸಿಫ್(452), ಬಿ.ರಿಯಾಜ್(550), ಅಬ್ದುಲ್ ಕರೀಮ್(519), ಸೈಯದ್ ಮಹಮ್ಮದ್ ಖಾದ್ರಿ(485), ಸೈಯದ್ ರಾಜಸಾಬ್(431), ಯು.ಜಹಿರುದ್ದೀನ್(410) ಇವರು ಆಯ್ಕೆಗೊಂಡಿದ್ದಾರೆ ಎಂದು ಕಲ್ಬುರ್ಗಿ ವಿಭಾಗೀಯ ವಕ್ಫ್ ಅಧಿಕಾರಿ ಹಾಗೂ ಚುನಾವಣಾಧಿಕಾರಿ ನೂರ್‌ಪಾಷಾ ಘೋಷಿಸಿದರು. ನಂತರ ಗೆಲವು ಪಡೆದ 11 ಜನ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿದರು. ನಂತರ ಪತ್ರಕರ್ತರೊಂದಿಗೆ ಕೆ.ಮಸ್ತಾನ್ ವಲಿ ಮಾತನಾಡಿ, ಮತದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದು, ಅವರ ನಿರ್ದೇಶನದಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಪ್ರತಿಯೊಬ್ಬ ಸಹಕಾರದಿಂದ ಸಮಿತಿಯ ಅಭಿವೃದ್ಧಿಗೆ ಕಂಕಣಬದ್ಧರಾಗಿ ನಿಲ್ಲುತ್ತೇವೆ ಎಂದರು.