ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ
ಗಂಗಾವತಿ 24: ಅಖಿಲ ಭಾರತ ವೀರಶೈವ ಮಹಾ ಸಭಾ ಮಹಿಳಾ ಘಟಕದ ತಾಲೂಕು ಪದಾಧಿಕಾರಿಗಳನ್ನು ದಿನಾಂಕ:24 ರಂದು ಸೋಮವಾರ ಘೋಷಣೆ ಮಾಡಲಾಗಿದೆ. ನಂದಿನಿ ಶರಣಬಸಪ್ಪ ಮುದಗಲ್ ಅಧ್ಯಕ್ಷರು, ಸಿಂಚನಾ ಮಂಜುನಾಥ ಎಮ್ ಹಿರೇಮಠ, ಗೀತಾ ಸುರೇಶ ಪಾಟೀಲ್ ಉಪಾಧ್ಯಕ್ಷರುಗಳು, ಶಿಲ್ಪಾ ಶ್ರೀನಿವಾಸ ಮಾಳಗಿ ಪ್ರಧಾನ ಕಾರ್ಯದರ್ಶಿ, ಲತಾ ಚಂದ್ರಶೇಖರ ಗೋನಾಳ, ಸಿಂಧೂ ಮಂಜುನಾಥ ಹೆಚ್.ಎಮ್ ಸಹ ಕಾರ್ಯದರ್ಶಿಗಳು, ಮಂಜುಳಾ ಮಂಜುನಾಥ ಗಾಳಿ ಕೋಶಾಧ್ಯಕ್ಷರು, ಲಲಿತಮ್ಮ ಡಾ. ವೀರನಗೌಡ, ನಂದಿನಿ ಶಾಂತಮಲ್ಲಿಕಾರ್ಜುನ ಸ್ವಾಮಿ, ಶಾಂಭವಿ ಗೋವೀಂದರಾಜು, ಪ್ರಿಯಾಂಕ ಮಲ್ಲಿಕಾರ್ಜುನ ಮುಸಾಲಿ, ಡಾ.ರಾಧಿಕಾ ಸುನೀಲ ಅರಳಿ, ಸುಮಂಗಲಾ ಸಂಗಯ್ಯ ಸಂಶಿಮಠ, ಅನ್ನಪೂರ್ಣ ಸುರೇಶ ಸಿಂಗನಾಳ, ಕಾವ್ಯ ಚೇತನ ಹಿರೇಮಠ, ಸುಮಾ ಮಂಜುನಾಥ ಮಸ್ಕಿ , ಅನಿತಾ ರಾಜೇಂದ್ರ್ರಸಾದ ಕೋಸಗಿ, ವಿಮಲಾದೇವಿ ಮಂಜುನಾಥ ಗಡ್ಡಿ, ಪ್ರತಿಭಾ ಶೇಖರಗೌಡ ಪಾಟೀಲ್, ಕವಿತಾ ಎ.ಕೆ ಮಹೇಶ, ಹಂಪಮ್ಮ ಬಿ ರೇಣುಕನಗೌಡ ಇವರು ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಆಯ್ಕೆಯಾಗಿದ್ದಾರೆ. ಈ ಸಂಧರ್ಭದಲ್ಲಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ನೀಡಲಾಯಿತು.ವೀರಶೈವ ಭಾರತ ಮಹಾಸಭಾ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಅಧ್ಯಕ್ಷ ಎಚ್.ಗೀರೀಗೌಡ, ಉಪಾಧ್ಯಕ್ಷ ಶರಣೇಗೌಡ ಗುರುಪಾದಗೌಡ ಮಾಲಿಪಾಟೀಲ್,ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಮುದೇನೂರ ಹಿರೇಮಠ ಉಪಸ್ಥಿತರಿದ್ದರು.