ಈಜು ಸ್ಪರ್ಧೆಗೆ ಆಯ್ಕೆ
ಬಳ್ಳಾರಿ 15: ಇದೇ ಮಾ.17 ರಿಂದ 23 ರ ವರೆಗೆ ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ನಡೆಯುವ ಪ್ಯಾರಾ ಈಜು ವರ್ಲ್ಡ್ ಸೀರಿಸ್ ಈಜು ಸ್ಪರ್ಧೆಗೆ ಬಳ್ಳಾರಿಯ ಗೋಪಿಚಂದ್ ಮತ್ತು ಸಾಯಿನಿಖಿಲ್ ಅವರು ಆಯ್ಕೆಯಾಗಿದ್ದಾರೆ. ಗೋಪಿಚಂದ್ ಅವರು ಈಗಾಗಲೇ 2022 ರಲ್ಲಿ ಏಷಿಯನ್ ಪ್ಯಾರಾ ಸ್ವೀಮ್ಮಿಂಗ್‌ನಲ್ಲಿ 6 ಮತ್ತು 7 ಸ್ಥಾನ ಪಡೆದಿದ್ದರು. 2017 ರಿಂದ 2024 ರ ವರೆಗೆ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 36 ಚಿನ್ನ, 12 ಬೆಳ್ಳಿ ಪದಕ ಪಡೆದಿದ್ದಾರೆ.ಸಾಯಿನಿಖಿಲ್ ಅವರು ಸಹ 2015 ರಿಂದ 2024 ರ ವರೆಗೆ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 16 ಚಿನ್ನ, 18 ಬೆಳ್ಳಿ ಮತ್ತು 2 ಕಂಚು ಪದಕ ಗಳಿಸಿದ್ದಾರೆ. ಪ್ಯಾರಾ ಕಮಿಟಿ ಇಂಡಿಯಾ ಅವರು ಈ ಇಬ್ಬರು ಸ್ಪರ್ಧಾಳುಗಳನ್ನು ಆಯ್ಕೆ ಮಾಡಿದ್ದಾರೆ ಎಂದು ತರಬೇತುದಾರರಾದ ರಜನಿಲಕ್ಕ ಮತ್ತು ಶರತ್ ಗಾಯಕ್‌ವಾಡ್ ಅವರು ತಿಳಿಸಿದ್ದಾರೆ.ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್‌ಪಿ ಡಾ.ಶೋಭಾರಾಣಿ ವಿ.ಜೆ., ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಎಡಿಸಿ ಮಹಮ್ಮದ್ ಝುಬೇರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.