ಡಾ.ನದಾಫ ಜೀವಮಾನ ಸಾಧನ ಪ್ರಶಸ್ತಿಗೆ ಆಯ್ಕೆ

ಲೋಕದರ್ಶನವರದಿ

ನವಲಗುಂದ೨೦ : ಕನರ್ಾಟಕ ಪಿಂಜಾರ ನದಾಫ ಮನಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷರಾದ ಡಾ.ಅಬ್ದುಲರಝಾಕ ನದಾಫ ಅವರಿಗೆ ಸಮಾಜ ಸೇವೆ ಗುರುತಿಸಿ ಇಂಟರನ್ಯಾಷನಲ್ ಗ್ಲೋಬಲ್ ಪಿಸ್ ಯುನವಸರ್ಿಟಿ ಅವರಿಂದ ಜೀವಮಾನ ಸಾಧನ ಪ್ರಶಸ್ತಿ ಪದವಿಗೆ ಆಯ್ಕೆಯಾಗಿದ್ದಾರೆ. 

      ಡಾ.ಅಬ್ದುಲರಝಾಕ ನದಾಫ ಅವರು ರಾಜ್ಯಾದ್ಯಂತ ಹಾಗೂ ಹೊರ ರಾಜ್ಯಗಳಲ್ಲಿ ಸಮಾಜದ ಏಳ್ಗೆಗಾಗಿ ಗಣ್ಯರೊಂದಿಗೆ ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿಯೂ ಪಿಂಜಾರ/ನದಾಫ/ಮನಸೂರಿ ಸಮಾಜದ ಅಭಿವೃದ್ದಿಯ ಜೊತೆಗೆ ಕನ್ನಡಪರ ಸಂಘಟನೆ ಹಾಗೂ ಅನ್ಯ ಜಾತಿಯರನ್ನುಳಗೊಂಡು ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿ ಇಂಟರನ್ಯಾಷನಲ್ ಗ್ಲೋಬಲ್ ಪಿಸ್ ಯುನವಸರ್ಿಟಿಯವರು ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಶನಿವಾರ ತಮಿಳುನಾಡಿನ ಊಟಿಯ ನೇಹಾರ ರೇಶಡೇನ್ಸಿಯಲ್ನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.