ಭೂಸುರಕ್ಷಾ ಯೋಜನೆಯಡಿಯಲ್ಲಿ ಇಲಾಖೆಯ ಹಳೆಯ ಭೂದಾಖಲೆಗಳ ಗಣಕೀಕರಣದಿಂದ ದಾಖಲೆಗಳ ಸುರಕ್ಷತೆ ಮತ್ತು ಸುಲಭ ಲಭ್ಯತೆ

Security and easy availability of records by computerization of old land records of the Department

ಭೂಸುರಕ್ಷಾ ಯೋಜನೆಯಡಿಯಲ್ಲಿ ಇಲಾಖೆಯ ಹಳೆಯ ಭೂದಾಖಲೆಗಳ ಗಣಕೀಕರಣದಿಂದ ದಾಖಲೆಗಳ ಸುರಕ್ಷತೆ ಮತ್ತು ಸುಲಭ ಲಭ್ಯತೆ

ಹಾವೇರಿ 05  : ತಾಲೂಕ ಕಚೇರಿ ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು ಜವಳಿ,ಕಬ್ಬು, ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್  ಉದ್ಘಾಟಿಸಿದರು.  

ಭೂಸುರಕ್ಷಾ ಯೋಜನೆಯಡಿಯಲ್ಲಿ ಇಲಾಖೆಯ ಹಳೆಯ ಭೂದಾಖಲೆಗಳ ಗಣಕೀಕರಣದಿಂದ ದಾಖಲೆಗಳ ಸುರಕ್ಷತೆ ಮತ್ತು ಸುಲಭ ಲಭ್ಯತೆ ಆಗಲಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಸಚಿವರಿಗೆ ಮಾಹಿತಿ ನೀಡಿದರು.  

ಜಿಲ್ಲೆಯಲ್ಲಿ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು ಈಗಾಗಲೇ ಹಾನಗಲ್ಲ ತಾಲೂಕ ಪೈಲಟ್ (ಪ್ರಾಯೋಗಿಕ) ತಾಲೂಕನ್ನಾಗಿ ತೆಗೆದುಕೊಂಡು ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಈಗ ಸರಕಾರದ ನಿರ್ದೇಶನದಂತೆ ಜಿಲ್ಲೆಯ ಇನ್ನೂಳಿದ ತಾಲೂಕುಗಳಲ್ಲು ಸೋಮವಾರದಿಂದ ಪ್ರಾರಂಭಿಸಲಾವುದು ಎಂಬುವುದಾಗಿ ತಿಳಿಸಿದರು.ಸಾರ್ವಜನಿಕರಿಗೆ ಈ ಕಾರ್ಯದಿಂದ ಆಗುವ ಪ್ರಯೋಜನೆಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು ಭೂದಾಖಲೆಗಳ ಡಿಜಿಟಲೀಕರಣ ತ್ವರಿತ ಸರಳ ಆಡಳಿತ, ಭೂದಾಖಲೆಗಳನ್ನು ತಿದ್ದಲು ಮತ್ತು ಕಳೆಯಲು ಅಸಾದ್ಯ, ಸುಲಭವಾಗಿ ಕಡಿಮೆ ಸಮಯದಲ್ಲಿ ದಾಖಲೆಗಳ ಲಭ್ಯತೆ, ದಾಖಲೆಗಳು ಸುಭದ್ರ ಮತ್ತು ಶಾಶ್ವತವಾಗಿ ಸಂರಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದರು.  

ಭೂಸುರಕ್ಷಾ ಯೋಜನೆಯಡಿಯಲ್ಲಿ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ತಾಲೂಕಿನಲ್ಲಿ ಒಟ್ಟು ಆರು ಜನ ನುರಿತ ಕಂಪ್ಯೂಟರ ಅಪರೇಟರಗಳನ್ನು ತರಬೇತಿ ನೀಡಿ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ.ತಾಲೂಕಿನ ಕಚೇರಿಯಲ್ಲಿ ಒಟ್ಟು ಸುಮಾರು 27ಸಾವಿರ ಕಡತಗಳು ಮತ್ತು ರಜಿಸ್ಟರಗಳು ಭೂಸುರಕ್ಷಾ ಯೋಜನೆಯಡಿಯಲ್ಲಿ ಡಿಜಿಟಲೀಕರಣಕ್ಕೆ ಒಳಪಡುತ್ತವೆ ಎಂಬ ಮಾಹಿತಿಯನ್ನು ಸಚಿವರಿಗೆ ತಿಳಿಸಿದರು. 

       ಶಾಸಕರು ಹಾಗೂ ಉಪಸಭಾಧ್ಯಕ್ಷರಾದ ರುದ್ರ​‍್ಪ ಮಾನಪ್ಪ ಲಮಾಣಿ, ಜಿಲ್ಲಾಧಿಕಾರಿ  ಡಾ.ವಿಜಯ ಮಹಾಂತೇಶ್ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ,ಪೊಲೀಸ್ ಅಧೀಕ್ಷಕರಾದ ಅಂಶು ಕುಮಾರ, ಅಪರ ಜಿಲ್ಲಾಧಿಕಾರಿ ಡಾ. ಎಲ್ ನಾಗರಾಜ್,ಉಪ ವಿಭಾಗಾಧಿಕಾರಿಗಳಾದ ಚನ್ನಪ್ಪ, ತಹಶೀಲ್ದಾರ್ ಶರಣಮ್ಮ,ನಗರಸಭೆ ಸದಸ್ಯರಾದ ಸಂಜೀವಕುಮಾರ ನೀರಲಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಎಸ್ ಆರ್ ಪಾಟೀಲ,ಜಿಲ್ಲಾ ಅಧ್ಯಕ್ಷರಾದ ಎಂ ಎಂ ಹಿರೇಮಠ,ತಾಲ್ಲೂಕ ಅಧ್ಯಕ್ಷರಾದ ಎಂ ಎಂ ಮೈದೂರ,ಕೊಟ್ರೇಶಪ್ಪ ಬಸೆಗಣ್ಣಿ,ಪ್ರಭು ಬಿಷ್ಟನಗೌಡ್ರ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.